ಶೃಂಗೇರಿಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಶ್ರೇಷ್ಠ ಹಕ್ಕು. ಇದುವರೆಗೆ ಮತದಾರ ಪರಿಷ್ಕರಣೆ ಹೊಸದಾಗಿ ಸೇರಿಸುವ ಹಾಗೂ ಮರಣಹೊಂದಿದವರ ಹೆಸರನ್ನು ಪಟ್ಟಿಯಿಂದ ತೆಗೆವ ಕಾರ್ಯ ಮಾಡಲಾಗುತ್ತಿತ್ತು. ಆದರೆ ಈಗ ಎಸ್ಐಆರ್ ಜಾರಿಗೊಳಿಸಿ ಪರಿಷ್ಕರಣೆ ಮಾಡಲಾಗುತ್ತಿದೆ. ಇದು ದೇಶಕ್ಕೆ ಗಂಡಾಂತರ ವಾಗಲಿದೆ ಎಂದು ಜನಪರ ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಡೆ ಆರೋಪಿಸಿದರು.
ದೇಶಕ್ಕೆ ಗಂಡಾಂತರ ಜನಪರ ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಡೆ
ಕನ್ನಡಪ್ರಭ ವಾರ್ತೆ ಶೃಂಗೇರಿಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಶ್ರೇಷ್ಠ ಹಕ್ಕು. ಇದುವರೆಗೆ ಮತದಾರ ಪರಿಷ್ಕರಣೆ ಹೊಸದಾಗಿ ಸೇರಿಸುವ ಹಾಗೂ ಮರಣಹೊಂದಿದವರ ಹೆಸರನ್ನು ಪಟ್ಟಿಯಿಂದ ತೆಗೆವ ಕಾರ್ಯ ಮಾಡಲಾಗುತ್ತಿತ್ತು. ಆದರೆ ಈಗ ಎಸ್ಐಆರ್ ಜಾರಿಗೊಳಿಸಿ ಪರಿಷ್ಕರಣೆ ಮಾಡಲಾಗುತ್ತಿದೆ. ಇದು ದೇಶಕ್ಕೆ ಗಂಡಾಂತರ ವಾಗಲಿದೆ ಎಂದು ಜನಪರ ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಡೆ ಆರೋಪಿಸಿದರು.
ಪಟ್ಟಣದ ಸಂತೇಮಾರುಕಟ್ಟೆ ಬಳಿ ಕರ್ನಾಟಕ ಪ್ರಗತಿಪರ ಸಂಘಟನೆಗಳು ಎಸ್ಐಆರ್ ಜಾರಿ ವಿರೋಧಿಸಿ ಆಯೋಜಿಸಿದ್ದ ಬಹತ್ ಪ್ರತಿಭಟನೆಯಲ್ಲಿ ಮಾತನಾಡಿದರು. ಎಸ್ಐಆರ್ ಜಾರಿ ಕರಾಳ ಅದ್ಯಾಯ. ಸಂವಿಧಾನ ವಿರೋಧಿಯಾಗಿದೆ. ಈಗಾಗಲೇ ಪಶ್ಚಿಮಬಂಗಾಳ, ತಮಿಳುನಾಡು ಸೇರಿದಂತೆ ಕೆಲವು ರಾಜ್ಯ ಗಳಲ್ಲಿ ಲಕ್ಷಾಂತರ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡಲಾಗಿದೆ. ಕರ್ನಾಟಕ ದಲ್ಲೂ ಅದೇ ಮರುಕಳಿಸಲಿದೆ.ಆಧಾರ್, ರೇಷನ್ ಕಾರ್ಡ್,ಜಾತಿ ಪ್ರಮಾಣಪತ್ರ, ಎಸ್ಎಸ್ಎಲ್ ಸಿ ಅಂಕಪಟ್ಟಿ ಸೇರಿದಂತೆ 11 ದಾಖಲೆ ಗಳಲ್ಲಿ ಸಣ್ಣ ತಪ್ಪುಗಳಿದ್ದರೂ ಅನುಮಾನಸ್ಪದ ಮತದಾರ ಎಂದು ಮತದಾನದ ಹಕ್ಕು ನಿರಾಕರಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ನೀಡಲಾಗಿದೆ. ಇದರಿಂದ ಬಡವರಿಗೆ ತೊಂದರೆಯಾಗಲಿದೆ. ಜನರ ವಿರೋಧಿಸಬೇಕು. ಜನಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ ಎಂದರು.
ಸುರೇಶ್ ಗಡಿಕಲ್ ಮಾತನಾಡಿ ಕೇಂದ್ರ ಸರ್ಕಾರ ಜನರ ಹಕ್ಕನ್ನು ಹತ್ತಿಕ್ಕುವ ಎಸ್ಐಆರ್ ಜಾರಿಗೊಳಿಸಿದೆ. ಪಶ್ಚಿಮ ಬಂಗಾಳ, ತಮಿಳುನಾಡು ರಾಜ್ಯಗಳಲ್ಲಿ ಮಾಡಿದಂತೆ ಇಲ್ಲಿ ನಡೆಯುವುದಿಲ್ಲ.ಇದು ಕರ್ನಾಟಕ ಇಲ್ಲಿ ಜನರು ಹೋರಾಡುತ್ತಾರೆ. ಸರ್ಕಾರ ಕೂಡಲೇ ಎಸ್ಐಆರ್ ಜಾರಿ ಹಿಂಪಡೆಯ ಬೇಕು.ಇಲ್ಲದಿದ್ದರೆ ರಾಜ್ಯದ್ಯಾಂತ ಹೋರಾಟ ನಡೆಯುತ್ತದೆ ಎಂದರು.ನಂತರ ಎಸ್ಐಆರ್ ಜಾರಿ ಹಿಂಪಡೆಯುವಂತೆ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ಜನಶಕ್ತಿ ಸಂಘಟನೆ ಕೌಳಿರಾಮು, ವೆಂಕಟೇಶ್ ಹಾಗಲಗಂಚಿ , ಪ್ರಶಾಂತ್, ರಾಧಾ ಹಾಗಲಗಂಚಿ,ರವಿ ಹಾಗಲಗಂಚಿ,ಇಸ್ಮಾಯಿಲ್ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
30 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದ ಸಂತೆಮಾರುಕಟ್ಟೆ ಎದುರು ನಡೆದ ಎಸ್ಐಆರ್ ವಿರೋಧಿ ಹೋರಾಟದಲ್ಲಿ ಕಲ್ಕುಳಿ ವಿಠಲಹೆಗ್ಡೆ ಮಾತನಾಡಿದರು.