ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಕೋಲಾರಲ್ಲಿ ಬೃಹತ್ ಪ್ರತಿಭಟನೆ

| Published : Apr 28 2025, 11:46 PM IST

ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಕೋಲಾರಲ್ಲಿ ಬೃಹತ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಸ್ಲಿಂ ಸಮುದಾಯದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ನಗರದ ಶಾಹಿ ಈದ್ಗಾ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಕೋಲಾರಮುಸ್ಲಿಂ ಸಮುದಾಯದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ನಗರದ ಶಾಹಿ ಈದ್ಗಾ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು.ಸಭೆ ಪ್ರಾರಂಭಕ್ಕೂ ಮೊದಲು ಎಲ್ಲಾ ಉಲಮಾಗಳು ಹಾಗೂ ಮುಸ್ಲಿಂ ಸಮುದಾಯದ ಸಾವಿರಾರು ಜನರು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಬಲಿಯಾದ ದೇಶದ ನಾಗರಿಕರ ಪರವಾಗಿ ಮೌನಾಚರಣೆ ಮಾಡಿದರು.ಕೋಲಾರದ ಉಲಮಾಗಳ ನೇತೃತ್ವದಲ್ಲಿ ನಡೆದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಶಾಹಿ ಈದ್ಗಾ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಜನರು ಭಾಗವಹಿಸಿದರು.ಮೌಲಾನ ಅತೀಕ್ ಉರ್ ರೆಹಮಾನ್ ಮಾತನಾಡಿ, ನಮ್ಮ ಸಮುದಾಯದಲ್ಲಿ ಜನರ ಬಳಿ ಚಂದಾ ಮಾಡಿ ಮಸೀದಿಗಳನ್ನು ನಾವು ಕಟ್ಟೋದು, ಬೇರೆ ಧರ್ಮದವರ ಧಾರ್ಮಿಕ ಆಸ್ತಿ ಪಾಸ್ತಿಯನ್ನು ಸಹ ಸರ್ಕಾರ ರಕ್ಷಣೆ ಮಾಡಿ ಅಭಿವೃದ್ಧಿ ಪಡಿಸಿದರೆ ನಾವು ಸರ್ಕಾರದ ಜೊತೆಗೆ ನಿಲ್ಲುತ್ತೇವೆ, ನಮ್ಮ ದೇಶದಲ್ಲಿ ಹಿಂದೂ ಮುಸಲ್ಮಾನರು ಅಣ್ಣ ತಮ್ಮಂದಿರಂತೆ ಬಾಳುತ್ತಿದ್ದು ನಮ್ಮಲ್ಲಿ ಒಡಕು ತರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡತ್ತಿದೆ ಎಂದು ಆರೋಪಿಸಿದರು.ಮಾಲೌನ ಕಲೀಂ ಉಲ್ಲಾ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲಾ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಆದೇಶದಂತೆ ನಾವು ಪ್ರತಿಭಟನೆಯನ್ನು ಶಾಂತಿಯ ರೂಪದಲ್ಲಿ ಮಾಡತ್ತೇವೆ.ಮೌಲಾನ ಷಫಿ ಉರ್ ರೆಹಮಾನ್ ಮಾತನಾಡಿ, ವಕ್ಫ್ ತಿದ್ದುಪಡಿ ಕಾಯ್ದೆ ಸಂವಿಧಾನ ಹಾಗೂ ಷರಿಯತ್‌ನ ವಿರುದ್ಧವಾಗಿದ್ದು ಕೂಡಲೇ ಹಿಂಪಡೆಯಬೇಕು ದೆಹಲಿಯ ನಡೆದ ಕಿಸಾನ್ ಹೋರಾಟದ ರೀತಿಯಲ್ಲಿ ನಾವು ಸಹ ಹೋರಾಟಕ್ಕೆ ತಯಾರಾಗುತ್ತೇವೆ.ಸಭೆಯ ನೇತೃತ್ವವನ್ನು ಮೌಲಾನ ಖಲೀಲುಲ್ಲಾ ರಶಾದೀ, ಮೌಲಾನ ಅಲೀ ಹಸನ್ ರಿಜ್ವಿ, ಮೌಲಾನ ಜುಲ್ಫಿಕರ್ ಸಲ್ಫಿ, ಮೌಲಾನ ಲಯೀಕುಲ್ಲಾ ಮನ್ಸೂರಿ ಇದ್ದರು.