ಚೇರಂಬಾಣೆ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪುಟಾಣಿ ವಿಜ್ಞಾನ ಬಳಗ ವತಿಯಿಂದ ಅಂತಾರಾಷ್ಟ್ರೀಯ ಗಣಿತ ಪ್ರತಿಭಾ ಪರೀಕ್ಷೆ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಚೇರಂಬಾಣೆ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪುಟಾಣಿ ವಿಜ್ಞಾನ ಬಳಗ ವತಿಯಿಂದ ಅಂತಾರಾಷ್ಟ್ರೀಯ ಗಣಿತ ಪ್ರತಿಭಾ ಪರೀಕ್ಷೆ ಆಯೋಜಿಸಲಾಯಿತು. ಶ್ರೀ ರಾಜರಾಜೇಶ್ವರಿ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದಿಂದ ಒಟ್ಟು 40 ವಿದ್ಯಾರ್ಥಿಗಳು ಹಾಜರಾಗಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಡಿಂಪನ ಬಿ.ಜೆ ಹಾಗೂ 7ನೇ ತರಗತಿ ವಿದ್ಯಾರ್ಥಿ ದುಶ್ಯಂತ್ ಎಂ.ಎಸ್ ರಾಜ್ಯಮಟ್ಟದಲ್ಲಿ ಐದನೇ ಸ್ಥಾನ ಪಡೆದಿದ್ದಾರೆ.

6ನೇ ತರಗತಿ ವಿದ್ಯಾರ್ಥಿ ವರ್ಧನ್ ತಾಲೂಕು ಮಟ್ಟದಲ್ಲಿ ಐದನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಶಾಲೆಯ ಗಣಿತ ಶಿಕ್ಷಕರಾಗಿರುವ ಅನಿಲ್ ಯು. ಎಂ., ಬೃಂದಾಕವನ್ ಕುದುಪಜೆ ಹಾಗೂ ರಾಜೇಶ್ವರಿ ಡಿ.ಎಂ., ಮುಖ್ಯ ಶಿಕ್ಷಕರಾದ ಕವನ್ ಕುದುಪಜೆ ಹಾಗೂ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಸ್ವರೂಪ್ ಕೆ ಬಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.