ಸಾರಾಂಶ
ಭಾರತವನ್ನು ವಿಭಜನೆ ಮಾಡುವ ಶಕ್ತಿಗಳು ಒಂದಾಗಿದ್ದು, ಅವರು ಕೊಡುವ ಆಶ್ವಾಸನೆಗೆ ಮರುಳಾಗದೆ ದೇಶದ ಭವಿಷ್ಯವನ್ನು ರೂಪಿಸುವ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಬಲಪಡಿಸಲು ದೇಶವನ್ನು ರಕ್ಷಿಸಿ ಆರ್ಥಿಕ ಪ್ರಬಲ ರಾಷ್ಟ್ರವಾಗಿ ಭಾರತವನ್ನು ಮುನ್ನಡೆಸಲು ನಿಮ್ಮೆಲ್ಲರ ಒಂದು ಮತ ನಮ್ಮ ಗೆಲುವಿನಿಂದ ಮೋದಿ ಅವರ ಕೈ ಬಲಪಡಿಸಬೇಕಾಗಿದೆ
ಕನ್ನಡಪ್ರಭ ವಾರ್ತೆ ಬೆಟ್ಟದಪುರ
ಪಿರಿಯಾಪಟ್ಟಣ ತಾಲೂಕಿನ ಮತ್ತೂರು ಕೋಮಲಾಪುರ ಭುವನಹಳ್ಳಿ, ಕೂಣಸೂರು, ಚಿಕ್ಕನೇರಳೆ, ಚಪ್ಪರದಹಳ್ಳಿ, ಕಣಗಾಲು, ದೊಡ್ಡಕಂಬ್ರಹಳ್ಳಿ ಗ್ರಾಮಗಳಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರು ಹಾಗೂ ಮಾಜಿ ಶಾಸಕರಾದ ಕೆ. ಮಹದೇವ್, ಎಚ್.ಸಿ. ಬಸವರಾಜ್ ಮತ್ತಿತರ ಮುಖಂಡರೊಂದಿಗೆ ಮತಯಾಚಿಸಿದರು.ಪ್ರತಿ ಗ್ರಾಮದಲ್ಲೂ ರೋಡ್ ಶೋ ಮೂಲಕ ಮತಯಾಚನೆ ಮಾಡಿದ ಅವರು, ನಂತರ ಭುವನಹಳ್ಳಿ ಮತ್ತು ಕೂಣಸೂರು ಗ್ರಾಮದಲ್ಲಿ ಸಾರ್ವಜನಿಕರ ಉದ್ದೇಶಸಿತೆ ಮಾತನಾಡಿದರು.
ಭಾರತವನ್ನು ವಿಭಜನೆ ಮಾಡುವ ಶಕ್ತಿಗಳು ಒಂದಾಗಿದ್ದು, ಅವರು ಕೊಡುವ ಆಶ್ವಾಸನೆಗೆ ಮರುಳಾಗದೆ ದೇಶದ ಭವಿಷ್ಯವನ್ನು ರೂಪಿಸುವ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಬಲಪಡಿಸಲು ದೇಶವನ್ನು ರಕ್ಷಿಸಿ ಆರ್ಥಿಕ ಪ್ರಬಲ ರಾಷ್ಟ್ರವಾಗಿ ಭಾರತವನ್ನು ಮುನ್ನಡೆಸಲು ನಿಮ್ಮೆಲ್ಲರ ಒಂದು ಮತ ನಮ್ಮ ಗೆಲುವಿನಿಂದ ಮೋದಿ ಅವರ ಕೈ ಬಲಪಡಿಸಬೇಕಾಗಿದೆ ಎಂದರು.ಮೈಸೂರು ಮತ್ತು ಕೊಡಗು ಕ್ಷೇತ್ರದಲ್ಲಿ ತಂಬಾಕು ಮತ್ತು ಕಾಫಿ ಬೆಳೆಯ ಸಮಸ್ಯೆಗಳ ಪರಿಹಾರಕ್ಕಾಗಿ ಹೆಚ್ಚಿನ ಗಮನ ಕೊಡುವುದಾಗಿ ಹಾಗೂ ನಾವು ಅರಮನೆಯಲ್ಲಿ ಕೂತು ರಾಜರ ಜೀವನ ನಡೆಸುವುದಿಲ್ಲ, ಸಾರ್ವಜನಿಕರೊಂದಿಗೆ ಕೂತು ಸಮಸ್ಯೆಯನ್ನು ಆಲಿಸುವುದಾಗಿ ತಿಳಿಸಿದರು.
ಮಾಜಿ ಶಾಸಕ ಕೆ. ಮಹದೇವ್ ಮಾತನಾಡಿ, ಕರ್ನಾಟಕ ಸರ್ಕಾರ ಕೇವಲ ಉಚಿತ ಗ್ಯಾರಂಟಿಗಳ ಮೂಲಕ ಜನರನ್ನು ಮರಳು ಮಾಡಲು ಹೊರಟಿದೆ, ಆದರೆ ಕರ್ನಾಟಕ ಅಭಿವೃದ್ಧಿಯತ್ತ ಕೊಂಡೊಯ್ಯುತ್ತವೆ ಎಂದು ಎಲ್ಲು ಹೇಳಲು ಸಾಧ್ಯವಾಗಿಲ್ಲ, ನಮ್ಮ ಕಾಲದಲ್ಲಿ ಆದ ಅಭಿವೃದ್ಧಿಯನ್ನು ಕೆಲವರು ನಮ್ಮ ಅಭಿವೃದ್ಧಿ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಮುಂದೆಯು ಸಹ ನಾವು ಅಭಿವೃದ್ಧಿಯತ್ತ ಇರುತ್ತವೆ ಹೊರತು ಗ್ಯಾರಂಟಿಗಳು ಕೇವಲ ಮನುಷ್ಯನ ಅಲ್ಪ ತೃಪ್ತಿಯಾಗುವೆ ಎಂದು ತಿಳಿಸಿದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸೋಮಶೇಖರ್, ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ, ತಾಲೂಕು ಬಿಜೆಪಿ ಅಧ್ಯಕ್ಷ ರಾಜೇಂದ್ರ, ಮಾಜಿ ಅಧ್ಯಕ್ಷ ರಾಜೇಗೌಡ, ಭುವನಹಳ್ಳಿ ಗಿರೀಶ್, ಲೋಕೇಶ್, ಆನಂದ, ವೀರಪ್ಪ, ಸತೀಶ, ಶಿವಕುಮಾರ, ಸ್ವಾಮಿ, ಮಹೇಶ್, ಶಾಂತಕುಮಾರ್ ಇದ್ದರು.-----------