ಸಾರಾಂಶ
Matka racket in different parts of the city: Two policemen arrested
ಚಳ್ಳಕೆರೆ: ಚಳ್ಳಕೆರೆ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ಜೂಜಾಟ ಮುಂತಾದ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ಪರಿಶ್ರಮ ವಹಿಸುತ್ತಿದ್ದು, ಜೂಜಾಟ ಹಾಗೂ ಮಟ್ಕಾ ದಂಧೆಕೋರರ ಮೇಲೆ ಪ್ರಕರಣ ದಾಖಲಿಸುವ ಮೂಲಕ ದಂಧೆಗೆ ಕಡಿವಾಣ ಹಾಕಿದೆ.
ಎಪಿಎಂಸಿ ಮಾರುಕಟ್ಟೆ ಆವರಣದ ಸಾರ್ವಜನಿಕ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಹಮಾಲಿ ವೃತ್ತಿಯ ವೀರಣ್ಣ(೭೪) ಸಾರ್ವಜನಿಕರಿಂದ ಹಣವನ್ನು ಪಣವಾಗಿ ಪಡೆದು ಮಟ್ಕಾ ನಂಬರ್ ಗಳನ್ನು ಬರೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ, ವೀರಣ್ಣ ಮಟ್ಕಾ ಚೀಟಿ ಬರೆಯುತ್ತಿದ್ದ ಕಂಡು ಬಂದಿದೆ. ಆತನಿಂದ ೨೦೪೦ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಇಲ್ಲಿನ ಮದಕರಿನಗರದ ಬೇವಿನ ಕಟ್ಟೆಯ ಸಾರ್ವಜನಿಕ ರಸ್ತೆಯಲ್ಲಿ ಪಾಪಣ್ಣ(೩೪) ಮಟ್ಕಾ ಜೂಜಾಟದಲ್ಲಿ ನಿರತನಾಗಿದ್ದು, ಸಾರ್ವಜನಿಕ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಮಟ್ಕಾ ಚೀಟಿ ಹಾಗೂ ಪಣವಾಗಿಟ್ಟಿದ್ದ ೨೯೯೦ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮಟ್ಕಾ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪೇದೆ ಕೆ.ಶಂಕರಣ್ಣ, ತಿಲಕ್‌ರಾಜ್ ಸಕರಾತ್ಮಕವಾಗಿ ಕಾರ್ಯನಿರ್ವಹಿಸಿದ್ದಾರೆ. ಎಎಸ್‌ಐ ಗೋವಿಂದರಾಜು ದಾಖಲಿಸಿದ್ದಾರೆ.