ಬೀರೂರುಎಲ್ಲಾ ವಿದ್ಯಾರ್ಥಿಗಳಿಗೂ ಅವರದೆ ಆದ ಭವಿಷ್ಯವಿದೆ. ಅದರೆ ಅದನ್ನು ಬಳಸಿಕೊಳ್ಳುವುದು ಅವರ ಕೈಯಲ್ಲಿದೆ. ಯುವಕರು ಪ್ರಬುದ್ಧತೆ ಗಳಿಸಿದಾಗ ಮಾತ್ರ ಮಾನಸಿಕ ಶಕ್ತಿ ಬೆಳೆದು ಅದು ಶಿಕ್ಷಣಕ್ಕೆ ಸಹಕಾರಿ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ । ಸರ್ಕಾರಿ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ, ರೆಡ್ಕ್ಲಾಸ್, ಎನ್ಎಸ್ ಎಸ್. ರೋವರ್ಸ್ ಮತ್ತು ರೇಂಜರ್ಸ್ ವಿವಿಧ ಘಟಕಗಳ ಉದ್ಘಾಟನಾ
ಕನ್ನಡಪ್ರಭ ವಾರ್ತೆ, ಬೀರೂರುಎಲ್ಲಾ ವಿದ್ಯಾರ್ಥಿಗಳಿಗೂ ಅವರದೆ ಆದ ಭವಿಷ್ಯವಿದೆ. ಅದರೆ ಅದನ್ನು ಬಳಸಿಕೊಳ್ಳುವುದು ಅವರ ಕೈಯಲ್ಲಿದೆ. ಯುವಕರು ಪ್ರಬುದ್ಧತೆ ಗಳಿಸಿದಾಗ ಮಾತ್ರ ಮಾನಸಿಕ ಶಕ್ತಿ ಬೆಳೆದು ಅದು ಶಿಕ್ಷಣಕ್ಕೆ ಸಹಕಾರಿ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ಬೀರೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಸಾಂಸ್ಕೃತಿಕ, ಕ್ರೀಡಾ, ರೆಡ್ಕ್ಲಾಸ್, ಎನ್ಎಸ್ ಎಸ್. ರೋವರ್ಸ್ ಮತ್ತು ರೇಂಜರ್ಸ್ ಸೇರಿದಂತೆ ವಿವಿಧ ಘಟಕಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ ಯಾರಿಗೆ ಕನಸು ಕಾಣಲು ಸಾಧ್ಯವಿದೆಯೋ ಅಂತಹವರು ಜೀವನದಲಿ ಏನನ್ನಾದರೂ ಸಾಧಿಸಲು ಸಾಧ್ಯ ಹಣ ಸೌಕರ್ಯವನ್ನು ತಂದುಕೊಡುತ್ತದೆಯೇ ವಿನಃ ಸಂತೋಷವನಲ್ಲಾ, ವಿದ್ಯಾರ್ಥಿಗಳು ಪದವಿ ಶಿಕ್ಷಣದ ಸಮಯದಲ್ಲಿ ಸಮಯವನ್ನು ವ್ಯರ್ಥ ಮಾಡದೆ ಓದಿನ ಹೆಚ್ಚು ಆಸಕ್ತಿ ವಹಿಸಿದರೆ ಮುಂದಿನ ದಿನಗಳಲ್ಲಿ ನಿಮ್ಮ ಜೀವನ ಸುಖಮಯವಾಗಿರುತ್ತದೆ, ಶಿಕ್ಷಣದಲ್ಲಿ ತಮ್ಮ ಭವಿಷ್ಯವನ್ನೆ ಬದಲಾಯಿಸುವ ಶಕ್ತಿ ಅಡಗಿರುತ್ತದೆ ಅದನ್ನು ಸದುಪಯೋಗಮಾಡಿಕೊಳ್ಳಿ ಎಂದರು.8 ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಏಕೈಕ ಭಾಷೆ ಕನ್ನಡ, ಸಾವಿರಾರು ವರ್ಷಗಳ ಇತಿಹಾಸದ ಈ ಭಾಷೆಗೆ ಅಳಿವಿಲ್ಲ. ಭಾಷೆ ಅವನತಿಯಾದರೆ ಸಂಸ್ಕೃತಿ ನಾಶವಾಗುವುದು. ಮನೆಗಳಲ್ಲಿ ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಹೊರಗೆ ಕನ್ನಡ ಬಳಸಿ ಬೆಳೆಸಬೇಕು ಎಂದು ಮನವಿ ಮಾಡಿದರು.
ಕಾಲೇಜು ಪ್ರಾಚಾರ್ಯ ಡಾ. ಹರೀಶ್ಕುಮಾರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಪರಿಶ್ರಮವಿದ್ದಾಗ ಮಾತ್ರ ಉತ್ತಮ ವ್ಯಕ್ತಿತ್ವ ಹೊರಹೊಮ್ಮಲು ಸಾಧ್ಯ, ಮನುಷ್ಯನ ಭಾವನೆ ಮತ್ತು ಯೋಜನೆಗಳು ಒಂದಕ್ಕೊಂದು ಪೂರಕವಾದಾಗ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಸಾಧ್ಯ . ವಿದ್ಯಾರ್ಥಿಗಳು ಅಂಕಗಳಿಸಲು ಮಾತ್ರ ಸ್ಪರ್ಧೆ ನಡೆಸದೆ ಅತ್ಯುತ್ತಮ ವಿದ್ಯಾರ್ಥಿಯಾಗಲು ಸ್ಪರ್ಧೆ ನಡೆಯಬೇಕು ಎಂದರು.ವಿದ್ಯಾರ್ಥಿಗಳು ಸಾಧನೆಯ ಗುರಿ ಇದ್ದಾಗ ಮಾತ್ರ ಬದುಕಿನಲ್ಲಿ ಯಶ ಕಾಣಲು ಸಾಧ್ಯ. ವಿದ್ಯಾರ್ಥಿಗಳ ಆಲೋಚನೆ ಯಾವಾಗಲು ಧನಾಕತ್ಮಕತೆ ಕಡೆ ಚಿಂತಿಸಬೇಕು. ಬರೀ ಓದು ಮಾತ್ರ ಜೀವನದ ಗುರಿಯಾಗದೆ ಜೀವನದಲ್ಲಿ ಎಲ್ಲವನ್ನು ಜಯಿಸುವ ಹಂಬಲ ಹೊಂದಬೇಕು. ವಿದ್ಯಾರ್ಥಿಗಳ ಪ್ರತಿಭೆ, ವ್ಯಕ್ತಿತ್ವ ವಿಕಸನ ಹಾಗೂ ಸಾಮಾಜಿಕ ಹೊಣೆಗಾರಿಕೆ ಬೆಳೆಸುವ ನಿಟ್ಟಿನಲ್ಲಿ ಕಾಲೇಜಿನಲ್ಲಿ ವಿವಿಧ ಘಟಕಗಳ ಉದ್ಘಾಟನೆ ಅರ್ಥಪೂರ್ಣವಾಗಿ ನೆರವೇರಿಸಲಾಗುತ್ತಿದೆ ಎಂದರು.
ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ್ ಮಾತನಾಡಿ ಕ್ರೀಡೆ ದೈಹಿಕ ಮತ್ತು ಮಾನಸಿಕವಾಗಿ ಸಶಕ್ತಗೊಳಿಸಿದರೆ, ಸಾಂಸ್ಕೃತಿಕ ಚಟುವಟಿಕೆ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಹೊರತರಲು ವೇದಿಕೆಯಾಗುತ್ತವೆ. ಎನ್ಎಸ್ ಎಸ್ ಮತ್ತು ರೆಡ್ ಕ್ರಾಸ್ ಘಟಕಗಳು ಸಮಾಜಸೇವೆ, ಮಾನವೀಯತೆ ಹಾಗೂ ಸೇವಾ ಮನೋಭಾವ ಬೆಳೆಸುತ್ತವೆ. ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಮೂಲಕ ಶಿಸ್ತು, ನಾಯಕತ್ವ ಗುಣ, ಸಮಯಪ್ರಜ್ಞೆ ಹಾಗೂ ತಂಡದ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯ ಎಂದರು. ವಿದ್ಯಾರ್ಥಿಗಳು ಇಂತಹ ಅವಕಾಶ ಸದುಪಯೋಗಪಡಿಸಿಕೊಂಡು ಶಿಕ್ಷಣದ ಜತೆಗೆ ಸಮಾಜಮುಖಿ ಚಟುವಟಿ ಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.2026-27ನೇ ಸಾಲಿನ ಕಾಲೇಜು ವರದಿ ಹೊಂಗಿರಣ ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು. ಕೆ.ಎಲ್.ಕೆ ಪದವಿಪೂರ್ವ ಕಾಲೇಜು ಪ್ರಾಚಾರ್ಯೆ ಭಾಗ್ಯಮ್ಮ, ಅರುಣೋದಯ ಕಾಲೇಜಿನ ಪ್ರಾಚಾರ್ಯ ಸುರೇಶ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ದಕ್ಷಿಣಮೂರ್ತಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸಿದ್ದಲಿಂಗಪ್ಪ, ಸಂತೋಷಕುಮಾರ್, ದೈಹಿಕ ಶಿಕ್ಷಕ ಡಾ. ಪ್ರಸಾದ್ಕುಮಾರ್, ಪ್ರಾಧ್ಯಾಪಕಿ ಲೋಕಾಂಬಿಕಾ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.
4 ಬೀರೂರು1ಬೀರೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ,ರೆಡ್ ಕ್ರಾಸ್ ಇತರ ಘಟಕಗಳನ್ನು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಉದ್ಘಾಟಿಸಿದರು. ಡಾ. ಹರೀಶ್ ಕುಮಾರ್, ಕೆ.ಎಲ್.ಕೆ ಪ್ರಾಚಾರ್ಯೆ ಭಾಗ್ಯಮ್ಮ, ಸುರೇಶ್, ಮಲ್ಲಿಕಾರ್ಜುನ್, ಸಂತೋಷ್ಕುಮಾರ್ ಇತರರಿದ್ದರು.