ಸಾರಾಂಶ
-ಧೂಳಗಾಯಿ ಅರ್ಪಿಸಿ ಹರಕೆ ತೀರಿಸಿದ ಭಕ್ತಸಾಗರ । ಜನದಟ್ಟಣೆ, ವಾಹನ ಸಂಚಾರ ನಿಯಂತ್ರಣ, ಪೊಲೀಸ್ ಬಂದೋಬಸ್ತ್
-----ಕನ್ನಡಪ್ರಭ ವಾರ್ತೆ ಯಾದಗಿರಿ
ಹಿಂದೂ-ಭಾವೈಕ್ಯತೆಯ ತಾಣವೆನಿಸಿದ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಮೌನೇಶ್ವರ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ಗುರುವಾರ ಮಧ್ಯರಾತ್ರಿ ಕಾಳಮ್ಮದೇವಿ ಪಲ್ಲಕ್ಕಿ ಹಾಗೂ ಮೌನೇಶ್ವರರ ಪಲ್ಲಕ್ಕಿಯೊಂದಿಗೆ ಗುಹಾಪ್ರವೇಶ ಮಾಡುವುದರೊಂದಿಗೆ ಜಾತ್ರೆ ಅದ್ಧೂರಿಯಾಗಿ ಸಂಪನ್ನಗೊಂಡಿತು. ಜಾತ್ರೆಗೆ ಆಗಮಿಸಿದ್ದ ಸಹಸ್ರಾರು ಭಕ್ತರು ಧೂಳಗಾಯಿ ಅರ್ಪಿಸಿ ಹರಕೆ ತೀರಿಸಿದರು.ಏಕಾದಶಿ ಆಚರಣೆ ಸಾಯಂಕಾಲ ಮಹಾಪ್ರಸಾದ, ದ್ವಾದಶಿ ಪಲ್ಲಕ್ಕಿ ಪ್ರಥಮ ಸೇವಾ, ತ್ರಯೋದಶಿ ಧಾರ್ಮಿಕ ಕಾರ್ಯಕ್ರಮಗಳು ಜಾವಳ, ಸಾಮೂಹಿಕ ಉಪನಯನಗಳು, ಧಾರ್ಮಿಕ ಸಭೆ, ಸಂಗೀತ ಸೇವಾ, ರಥೋತ್ಸವ ಹಾಗೂ ಪಲ್ಲಕ್ಕಿಯ ಮಹಾಸೇವಾ. ಭಾರತ ಹುಣ್ಣಿಮೆ ಆಚರಣೆ, ಧೂಳಗಾಯಿ, ಸಾಯಂಕಾಲ ಗುಹಾಪ್ರವೇಶ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದವು.
ಸುರಪುರದ ಕಾಳಮ್ಮದೇವಿ ಪಲ್ಲಕ್ಕಿ ಹಾಗೂ ಮೌನೇಶ್ವರ ಪಲ್ಲಕ್ಕಿಗಳು ಜೋಡಿಯಾಗಿ ಮೌನೇಶ್ವರ ಮೂರ್ತಿ, ಹೂಜಿ, ಚಪಕೊಡಲಿ ಪುರವಂತರ ಸೇವಾ ಹಾಗೂ ವಾಧ್ಯಮೇಳದೊಂದಿಗೆ ಬೆಳಿಗ್ಗೆ ಕೃಷ್ಣಾನದಿಗೆ ಅಭ್ಯಾಂಗ ಗಂಗಾಸ್ನಾನಕ್ಕೆ ತೆರಳಿ, ಸಂಜೆ ಕೈಲಾಸಕಟ್ಟೆ ತಲುಪಿ ಮಹಾಸೇವಾಗೈದು, ನಂತರ ಗುಹಾಪ್ರವೇಶಗೊಳ್ಳುವಾಗ ಭಕ್ತರು ‘ಏಕ ಲಾಕ್ ಐಂ ಸಿ ಹಜಾರ್ ಪಾಚೋಪೀರ ಪೈಗಂಬರ್ ಜೀತಾ ಪೈಗಂಬರ್ ಮೌನೋದ್ದೀನ್ ಕಾಶೀಪತಿ ಗಂಗಾಧರ ಹರಹರ ಮಹಾದೇವ ಎಂಬ ಜಯಘೋಷ, ಜೈಕಾರ, ಮಂತ್ರಘೋಷಗಳು ಮೊಳಗಿಸಿದರು. ಈ ಸಂದರ್ಭದಲ್ಲಿ ಜನದಟ್ಟಣೆ ಹಾಗೂ ವಾಹನಗಳ ನಿಯಂತ್ರಣಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.--ಬಾಕ್ಸ್---ಪೋಷಕರ ಮಡಿಲಿಗೆ ಮಕ್ಕಳು
ಜಾತ್ರೆಯಲ್ಲಿ ಪೋಷಕರನ್ನು ಕಳೆದುಕೊಂಡು ಭೀತಿಯಲ್ಲಿದ್ದ ಚಿಕ್ಕಮಕ್ಕಳನ್ನು ಧ್ವನಿವರ್ಧಕದ ಮೂಲಕ ಪೋಷಕರನ್ನು ಸಂಪರ್ಕಿಸಿ ಮಕ್ಕಳನ್ನು ಪೋಷಕರ ಮಡಿಲಿಗೆ ಒಪ್ಪಿಸಲಾಯಿತು. ದೇವಸ್ಥಾನದ ಮೌನೇಶ್ವರ ಮಹಾಸ್ವಾಮಿ, ತಹಸೀಲ್ದಾರ್ ಹುಸೇನಸಾಬ ಸರಕಾವಸ್, ಡಿವೈಎಸ್‌ಪಿ ಜಾವೀದ್ ಇನಾಮದಾರ, ಸಿಪಿಐ ಆನಂದ ವಾಗ್ಮೋಡೆ, ಪಿಎಸ್‌ಐ ಶಿವರಾಜ ಪಾಟೀಲ್ ಕಿರದಳ್ಳಿ, ದೇವಾಲಯದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ವೆಂಕಟೇಶ ಯರಡೋಣಿ, ಸದಸ್ಯರಾದ ಅನಿತಾ ಪತ್ತಾರ ಭೀ.ಗುಡಿ, ಪದ್ಮಾ ಸಿ. ಪತ್ತಾರ, ಮಲ್ಲಪ್ಪ ಕುರ್ಲಿ, ಮಾನಪ್ಪ ಬೋಯಿ, ಉಪತಹಸೀಲ್ದಾರ್ ರೇವಪ್ಪ ತೆಗ್ಗಿನಮನಿ, ದೇವಾಲಯದ ಮೇಲ್ವಿಚಾರಕ ಶಿವಾನಂದಯ್ಯ ಹಿರೇಮಠ, ಚಿನ್ನಪ್ಪ ಗುಡಗುಂಟಿ, ಮಾನಯ್ಯಗೌಡ ದಳಪತಿ, ದೇವಿಂದ್ರಪ್ಪ ಅಂಬಿಗೇರ, ಮಲ್ಲಿಕಾರ್ಜುನ ಸಾಹು, ಸಂಜೀವನಾಯಕ, ರತ್ನರಾಜ ಶಾಲಿಮನಿ, ಪರಮಣ್ಣ ಮಾಲಿಗೌಡ್ರ, ಸೋಪಣ್ಣ ಹಾಲಭಾವಿ, ಮಾನಯ್ಯ ಕವಾಲ್ದಾರ್, ಗ್ರಾಪಂ ಪಿಡಿಒ ದೇವಿಂದ್ರಪ್ಪ ಹಳ್ಳಿ ಇತರರಿದ್ದರು.--ಬಾಕ್ಸ್:2--
* ತಿಂಥಣಿ ಮೌನೇಶ್ವರರ ದರ್ಶನ ಪಡೆದ ಡಿಸಿತಿಂಥಣಿ ಮೌನೇಶ್ವರ ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ಸುಶೀಲಾ ಬಿ. ಅವರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಬಳಿಕ ತಹಸೀಲ್ದಾರ್ ಹುಸೇನಸಾಬ ಸರಕಾವಸ್ ಅವರಿಂದ ಜಾತ್ರೋತ್ಸವದ ವ್ಯವಸ್ಥೆ ಕುರಿತು ಮಾಹಿತಿ ಪಡೆದು ಜಾತ್ರೆಯಲ್ಲಿ ಎಲ್ಲೂ ಅವ್ಯವಸ್ಥೆಯಾಗದಂತೆ ಅಧಿಕಾರಿಗಳು ಜಾಗೃತೆ ವಹಿಸಿ ಸುಗಮ ಜಾತ್ರೋತ್ಸವಕ್ಕೆ ಸಹಕರಿಸಿ ಸೂಚಿಸಿದರು. ಕೃಷ್ಣಾನದಿ ತೀರಕ್ಕೆ ಭೇಟಿ ನೀಡಿದ ಅವರು, ನದಿ ಮಧ್ಯದಲ್ಲಿ ನೀರಿನ ಆಳದ ಹೆಚ್ಚಿರುವುದರಿಂದ ಜನರನ್ನು ಈಜಾಡಲಿಕ್ಕೆ ಬಿಡಬಾರದೆಂದು ಪೊಲೀಸರಿಗೆ ಸೂಚಿಸಿ ವ್ಯವಸ್ಥೆಯನ್ನು ಪರಿಶೀಲಿಸಿದರು.ಈ ವೇಳೆ ಸಹಾಯಕ ಆಯುಕ್ತ ಡಾ. ಹಂಪಣ್ಣ ಸಜ್ಜನ, ಉಪತಹಸೀಲ್ದಾರ ರೇವಪ್ಪ ತೆಗ್ಗಿನಮನಿ, ಸಿಪಿಐ ಆನಂದ ವಾಗ್ಮೋಡೆ, ಪಿಎಸ್‌ಐಗಳಾದ ಕೃಷ್ಣಾ ಸುಬೇದಾರ, ಶಿವರಾಜ ಪಾಟೀಲ ಕಿರದಳ್ಳಿ ಇದ್ದರು.
-14ವೈಡಿಆರ್16: ಯಾದಗಿರಿ ಜಿಲ್ಲೆಯ ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆ ಗುರುವಾರ ಜಿಲ್ಲಾಧಿಕಾರಿ ಸುಶೀಲಾ ಬಿ. ಅವರು ಭೇಟಿ ನೀಡಿ ದೇವರ ದರ್ಶನ ಪಡೆದರು.
-14ವೈಡಿಆರ್17: ಜಾತ್ರೋತ್ಸವದಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳನ್ನು ಪೊಲೀಸ್ ಅಧಿಕಾರಿ ದಯಾನಂದ ಜಮಾದಾರ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಿ ಪಾಲಕರಿಗೆ ಒಪ್ಪಿಸಿದರು.
-14ವೈಡಿಆರ್18: ಅಸಂಖ್ಯಾತ ಭಕ್ತ ಸಮೂಹ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.