ನರಸಿಂಹರಾಜಪುರಬೆಳ್ಳೂರಿನಲ್ಲಿ ನಡೆಯುವ 10 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲಾ ಗೋಷ್ಠಿಗಳು ಚೆನ್ನಾಗಿ ಮೂಡಿಬರಲಿ ಎಂದು ಕೊಪ್ಪ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎಂ. ಶ್ರೀ ಹರ್ಷ ಆಶಯ ವ್ಯಕ್ತಪಡಿಸಿದರು.
10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ದಯಾನಂದ್ ಅವರಿಗೆ ಕೊಪ್ಪ ಕ.ಸಾ.ಪದಿಂದ ಅಭಿನಂದನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಬೆಳ್ಳೂರಿನಲ್ಲಿ ನಡೆಯುವ 10 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲಾ ಗೋಷ್ಠಿಗಳು ಚೆನ್ನಾಗಿ ಮೂಡಿಬರಲಿ ಎಂದು ಕೊಪ್ಪ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎಂ. ಶ್ರೀ ಹರ್ಷ ಆಶಯ ವ್ಯಕ್ತಪಡಿಸಿದರು.
ಭಾನುವಾರ 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಬೆಮ್ಮನೆ ದಯಾನಂದ್ ಅವರ ಮನೆಯಲ್ಲಿ ಕೊಪ್ಪ ತಾಲೂಕು ಕಸಾಪಯಿಂದ ಬೆಮ್ಮನೆ ದಯಾನಂದ್ ಅವರಿಗೆ ಅಭಿನಂದಿಸಿ ಮಾತನಾಡಿದರು. ಬೆಮ್ಮನೆ ದಯಾನಂದ್ ಅವರು ಕೊಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಹರಿಹರಪುರ ಹೋಬಳಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಅವರು ನನ್ನ ಗುರುಗಳಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಬೆಳ್ಳೂರಿನಲ್ಲಿ ನಡೆಯುವ ನರಸಿಂಹರಾಜಪುರ ಕನ್ನಡ ಸಾಹಿತ ಸಮ್ಮೇಳನ ಹೆಚ್ಚು ಅರ್ಥ ಪೂರ್ಣವಾಗಲಿ. ಕೊಪ್ಪ ಕ.ಸಾ.ಪದಿಂದ ಎಲ್ಲಾ ಸಹಕಾರ ನೀಡುತ್ತೇವೆ ಎಂದರು.ಅಭಿನಂದನೆ ಸ್ವೀಕಾರ ಮಾಡಿದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಬೆಮ್ಮನೆ ದಯಾನಂದ್ ಮಾತನಾಡಿ, ನನಗೂ ಕೊಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೂ ಹತ್ತಿರದ ಸಂಬಂಧವಿದೆ. ನಾನು ಹರಿಹರಪುರದ ಕಾಲೇಜಿನಲ್ಲಿ ಹೆಚ್ಚು ಕೆಲಸ ಮಾಡಿದ್ದು ಆ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲೂ ಕೆಲಸ ಮಾಡಿದ್ದೆ. ಕೊಗ್ರೆಯಲ್ಲಿ ಇತ್ತೀಚೆಗೆ ಕೊಪ್ಪ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ನಡೆದಿದೆ. 10 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊಪ್ಪ ಕಸಾಪ ಸದಸ್ಯರು ಆಗಮಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನರಸಿಂಹರಾಜಪುರ ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಆರ್. ವೆಂಕಟರಮಣಯ್ಯ, ಕೊಪ್ಪ ತಾಲೂಕು ಕ.ಸಾ.ಪ ಗೌರವ ಕಾರ್ಯದರ್ಶಿ ಶಂಕ್ರಪ್ಪ, ಕೊಪ್ಪ ಕ.ಸಾ.ಪ ಸಂಚಾಲಕ ದಿನೇಶ್ ಇರ್ವತ್ತೂರು, ಎನ್.ಪಿ. ಸುಕೇಶ್, ಕೊಪ್ಪ ಕಟ್ಟಡ ಸಮಿತಿ ಸಂಚಾಲಕ ಎಚ್.ಎಸ್ ಜಗದೀಶ್ ಹಾಗೂ ಬೆಮ್ಮನೆ ದಯಾನಂದ ಕುಟುಂಭದವರು ಇದ್ದರು.