ಸಾರಾಂಶ
ಮುಂಡರಗಿ: ಬಹುಮುಖ ವ್ಯಕ್ತಿತ್ವದ ಶಿಲ್ಪಿಯಾಗಿರುವ ವಿಶ್ವಗುರು ಬಸವಣ್ಣನವರು ರಾಜ್ಯದ ಸಾಂಸ್ಕೃತಿಕ ನಾಯಕ ಅಷ್ಟೇ ಅಲ್ಲ, ದೇಶದ ಸಾಂಸ್ಕೃತಿಕ ನಾಯಕ ಆಗಬೇಕು ಎಂದು ಯಮಕನಮರಡಿಯ ಸಿದ್ಧಬಸವ ಸ್ವಾಮೀಜಿ ಹೇಳಿದರು. ಅವರು ಸೋಮವಾರ ಸಂಜೆ ಪಟ್ಟಣದ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ಏರ್ಪಡಿಸಿದ್ದ ಶರಣ ಚರಿತಾಮೃತ ಪ್ರವಚನದ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಎಲ್ಲರಿಗೂ ಗೌರವಾನ್ವಿತ ಬದುಕು ಕಲಿಸಿಕೊಟ್ಟವರು ಬಸವಣ್ಣನವರು. ಅವರಿಗೆ ಸರಿಸಾಟಿ ಇನ್ನಾರೂ ಇಲ್ಲ. ಅವರಿಗೆ ಸರಿಸಾಟಿ ಅವರೇ. ಮಾನವ ವ್ಯಕ್ತಿತ್ವದ ವಿಕಾಸ ಚೇತನವೇ ಬಸವಣ್ಣನವರಾಗಿದ್ದರು. ಅಂತವರನ್ನು ಸಾಂಸ್ಕೃತಿಕ ನಾಯಕ ನಾಯಕ ಎಂದು ಘೋಷಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದಿಸುವುದರ ಜತೆಗೆ ಕೇಂದ್ರ ಸರ್ಕಾರವೂ ಸಹ ಬಸವಣ್ಣನವರನ್ನು ದೇಶದ ಸಾಂಸ್ಕೃತಿ ನಾಯಕ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.ಸಾನ್ನಿಧ್ಯ ವಹಿಸಿದ್ದ ಜ. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಮಾನವ ಘನತೆಗೆ ಸಂಸ್ಕೃತಿಯ ಅಸ್ಮಿತೆಯ ಗೌರವ ಕೊಟ್ಟಿರುವಂತ ಸಂಸ್ಕೃತಿಯೇ ಬಸವ ಸಂಸ್ಕೃತಿ. ಬಸವಣ್ಣನವರು ಮಾನವ ಹಕ್ಕುಗಳ ಪ್ರತಿಪಾದನೆಯ ಸಾಂಸ್ಕೃತಿಕ ನಾಯಕರು ಎಂದರು. ಋಷಿಕೇಶನಂದ ಸ್ವಾಮೀಜಿ, ಬಸವಾನಂದ ಸ್ವಾಮೀಜಿ, ಬಸವದೇವರು, ಭಾರತ ಸರ್ಕಾರ ಆಹಾರ ನಿಗಮದ ಸದಸ್ಯ ರವಿ ದಂಡಿನ ಮಾತನಾಡಿದರು. ವಚನ ವೈಭವ ಕಾರ್ಯಕ್ರಮದಲ್ಲಿ ಧಾರವಾಡದ ರತಿಕಾ ನೃತ್ಯ ಶಾಲೆಯ ಕಲಾವಿದರು ವಚನ ನೃತ್ಯ ಸಾದರ ಪಡಿಸಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸರ್ವರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರು. ರುದ್ರಗೌಡ ಪಾಟೀಲ, ಶಂಕ್ರಪ್ಪ ಕುಪ್ಸದ, ಬಸವರಾಜ ಬಳ್ಳೊಳ್ಳಿ, ಅಮರೇಶಪ್ಪ ಬಳ್ಳಾರಿ, ರಾಜೇಶ ಸಶಿಮಠ ಅವರಿಗೆ ಶ್ರೀಗಳು ಸತ್ಕರಿಸಿದರು. ಪ್ರವಚನ ಸಮಿತಿ ಅಧ್ಯಕ್ಷ ಬಸಯ್ಯ ಗಿಂಡಿಮಠ, ವೀರಣ್ಣ ಮಡಿವಾಳರ ಉಪಸ್ಥಿತರಿದ್ದರು.
ಮುಂಡರಗಿ ತೋಂಟದಾರ್ಯ ಮಠದಲ್ಲಿ ಸೋಮವಾರ ಸಂಜೆ ಜರುಗಿದ ಸಾಂಸ್ಕೃತಿಕ ನಾಯಕ ಬಸವಣ್ಣ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಂಡರಗಿ ತಾಲೂಕಿನ ಎಲ್ಲ ಪತ್ರಕರ್ತರನ್ನು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸನ್ಮಾನಿಸಿದರು.