ಸಾರಾಂಶ
ಔರಾದ್ ತಾಲೂಕಿನ ಸಂತಪೂರ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ 84ನೇ ಪುನಶ್ಚೇತನ ಕಾರ್ಯಾಗಾರ ಹಾಗೂ ಹುತಾತ್ಮ ವೀರ ಭಗತಸಿಂಗ್ ಜಯಂತಿ ಕಾರ್ಯಕ್ರಮ ಜರುಗಿತು.
ಕನ್ನಡಪ್ರಭ ವಾರ್ತೆ ಔರಾದ್
ಹುತಾತ್ಮ ಭಗತ್ ಸಿಂಗ್ ದೇಶ ಪ್ರೇಮ ಇಂದಿನ ಯುವಕರಿಗೆ ಪ್ರೇರಣೆಯಾಗಲಿ ಎಂದು ವಿದ್ಯಾರ್ಥಿನಿ ಸುಧಾರಾಣಿ ಸಂಗಪ್ಪ ಹೇಳಿದರು.ಸಂತಪೂರ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ 84ನೇ ಪುನಶ್ಚೇತನ ಕಾರ್ಯಾಗಾರ ಹಾಗೂ ಹುತಾತ್ಮ ವೀರ ಭಗತಸಿಂಗ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಾಡು ನುಡಿ ಪ್ರೇಮ, ಸಾಮಾಜಿಕ ಹಾಗೂ ವೈಚಾರಿಕ ಚಿಂತನೆಯಿಂದ ವಿಮುಖರಾಗುತ್ತಿರುವ ಯುವಕರು ಭಗತ್‌ಸಿಂಗ್ ಆದರ್ಶಗಳು ಮೈಗೂಡಿಸಿಕೊಳ್ಳಬೇಕು. ಹೋರಾಟದ ಕಿಚ್ಚು ವಿದ್ಯಾರ್ಥಿ ದೆಸೆಯಿಂದಲೇ ಮೂಡಬೇಕು ಎಂದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿ, ಹುತಾತ್ಮ ವೀರ ಭಗತ್ ಸಿಂಗ್ ಅವರು ದೇಶದ ಸ್ವತಂತ್ರಕ್ಕಾಗಿ ಚಿಕ್ಕವಯಸ್ಸಿನಲ್ಲಿ ತನ್ನ ಪ್ರಾಣವನ್ನು ಲೆಕ್ಕಿಸದೆ ಬ್ರಿಟಿಷರ ವಿರುದ್ಧ ಸಿಡಿದೆದ್ದು ಹೋರಾಡಿದ ಅಪ್ರತಿಮ ಕ್ರಾಂತಿಕಾರಿ ಎಂಬುದು ಯುವಕರು ಮರೆಯಬಾರದು ಎಂದರು.ಉಪನ್ಯಾಸಕಿ ಪ್ರಿಯಾಂಕಾ ಗುನ್ನಳ್ಳಿಕರ್ ಮಾತನಾಡಿದರು. ಉಪನ್ಯಾಸಕ ಶಿವಪುತ್ರ ಧರಣಿ, ಸುಧಾ ಕೌಟಿಗೆ, ಮೀರಾತಾಯಿ ಕಾಂಬಳೆ, ನಿರ್ಮಲಾ ಜಮಾದಾರ, ರಾಜಕುಮಾರ ಹಳ್ಳಿಕರ್, ಜಿತೇಂದ್ರ ಡಿಗ್ಗಿ, ಸುಧೀರ್ ಆಲೂರೆ, ಸಂತೋಷ ಧೋಳಗಂಡೆ ಇದ್ದರು.
‘ಹುತಾತ್ಮ ಭಗತ್ ಸಿಂಗ್ ಅವರ ಜೀವನ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ’ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿಜೇತರಾದ ಸುಧಾರಾಣಿ ಸಂಗಪ್ಪ, ಕೀರ್ತನಾ ಅನಿಲಕುಮಾರ ಹಾಗೂ ಖಂಡು ಶಿವಾಜಿ ಮಕ್ಕಳಿಗೆ ಗೌರವಿಸಲಾಯಿತು.