ಬೆಳಕಿನ ಹಬ್ಬ ದೀಪಾವಳಿಯು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ನೆಮ್ಮದಿ, ಆರೋಗ್ಯ, ಸುಖಃ, ಶಾಂತಿ ಹಾಗೂ ಸಮೃದ್ಧಿಯನ್ನು ತರಲಿ.

ಕನ್ನಡಪ್ರಭ ವಾರ್ತೆ ನರಗುಂದ

ಬೆಳಕಿನ ಹಬ್ಬ ದೀಪಾವಳಿಯು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ನೆಮ್ಮದಿ, ಆರೋಗ್ಯ, ಸುಖಃ, ಶಾಂತಿ ಹಾಗೂ ಸಮೃದ್ಧಿಯನ್ನು ತರಲಿ ಎಂದು ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಪ್ರಭಾವತಿ ಅಕ್ಕನವರು ಹೇಳಿದರು.

ಪಟ್ಟಣದ ಪ್ರಜಾಪತಿ ಬ್ರಹ್ಮಾಕುಮಾರಿ ಈಶ್ವರೀ ವಿಶ್ವವಿದ್ಯಾಲಯದಲ್ಲಿ ದೀಪಾವಳಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೀಪಾವಳಿ ಎಂದರೆ ಕೇವಲ ದೀಪಗಳನ್ನು ಬೆಳಗಿಸುವ ಹಬ್ಬವಲ್ಲ. ನಮ್ಮ ಜೀವನದಲ್ಲಿನ ಅಜ್ಞಾನ, ಅಂಧಕಾರ ಮತ್ತು ನಕಾರಾತ್ಮಕ ಚಿಂತನೆಗಳನ್ನು ದೂರ ಮಾಡಿ ಜ್ಞಾನ, ಶಾಂತಿ, ಪ್ರೀತಿ ಹಾಗೂ ಸದ್ಭಾವನೆಯ ಬೆಳಕನ್ನು ಹರಡುವ ಪವಿತ್ರ ಹಬ್ಬವಾಗಿದೆ. ಪ್ರತಿಯೊಬ್ಬರೂ ತಮ್ಮ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ಬೆಳೆಸಿಕೊಂಡು, ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹೋದರತ್ವದಿಂದ ಬದುಕಬೇಕು ಎಂದು ತಿಳಿಸಿದರು.

ಆಧ್ಯಾತ್ಮಿಕ ಚಿಂತನೆ, ಯೋಗ ಮತ್ತು ಧ್ಯಾನದ ಮೂಲಕ ಮನಸ್ಸಿಗೆ ಶಾಂತಿ ಹಾಗೂ ಜೀವನಕ್ಕೆ ಸಕಾರಾತ್ಮಕ ಶಕ್ತಿಯನ್ನು ಪಡೆದುಕೊಳ್ಳಲು ಸಾಧ್ಯ. ಹಬ್ಬಗಳು ನಮ್ಮಲ್ಲಿ ಮಾನವೀಯ ಮೌಲ್ಯಗಳು, ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಬೆಳೆಸುವಂತಾಗಬೇಕು ಎಂದರು.

ಈ ದೀಪಾವಳಿ ಹಬ್ಬವು ಪ್ರತಿಯೊಬ್ಬರ ಮನೆ-ಮನಗಳಲ್ಲಿ ಜ್ಞಾನದ ಬೆಳಕು ಮೂಡಿಸಿ, ಎಲ್ಲರ ಬದುಕಿನಲ್ಲಿ ಹೊಸ ಭರವಸೆ ಮತ್ತು ಸಂತೋಷವನ್ನು ತುಂಬಲಿ ಎಂದು ಹಾರೈಸಿದರು.

ಇದೇ ಸಂದರ್ಭ ಡಾಕ್ಟರೇಟ್‌ ಪದವಿ ಪಡೆದ ಕಳಸಾ ಬಂಡೂರಿ ನಾಲಾ ಯೋಜನೆ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮತ್ತು ಉಪನ್ಯಾಸಕ ರಾಘವೇಂದ್ರ ಗೆಜ್ಜಿಯವರಿಗೆ ಗೌರವಿಸಲಾಯಿತು.

ಈ ವೇಳೆ ವಿ.ಎನ್. ಕೊಳ್ಳಿಯವರ, ಡಾ. ವೀರನಗೌಡ ವೀರನಗೌಡ್ರ, ಬಸಟ್ಟಪ್ಪ ನಾಶಿ, ದೇವಪ್ಪ ಜಾವೂರ, ಶಂಕರಣ್ಣ ಇಂಗಳಳ್ಳಿ, ಶ್ರೀಕಾಂತ ಮೇಟಿ, ಶಿವಲೀಲಾ ಕೊಳ್ಳಿಯವರ, ಶಾಂತಾ ವೀರನಗೌಡ್ರ, ಬಸಮ್ಮ ಜಾವೂರ, ಶಾರದಾ ನಾಶಿ, ಸುಜಾತಾ ಇಂಗಳಳ್ಳಿ ಇದ್ದರು.