ಜಲಧಿ ಮಹೋತ್ಸವದಿಂದ ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲಿ

| Published : May 09 2025, 12:31 AM IST

ಸಾರಾಂಶ

ಕುಂಚಿಟಿಗ ಸಂಪ್ರದಾಯದಲ್ಲಿ ಜಲಧಿ ಮಹೋತ್ಸವಕ್ಕೆ ಹೆಚ್ಚು ಮಹತ್ವವಿದೆ. ನಮ್ಮ ಆಚಾರ-ವಿಚಾರ, ಕಟ್ಟೆಮನೆ, ಬಂಡಿಮನೆ ಅಮಾವಾಸ್ಯೆ ಮನೆ ಬುಡಕಟ್ಟು ಸಂಸ್ಕೃತಿಯ ವೈಶಿಷ್ಟ್ಯ ಈ ಜಲಧಿ ಮಹೋತ್ಸವ. ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಿ ರೈತ ಸೇರಿದಂತೆ ಜನಸಾಮಾನ್ಯರ ಬದುಕಿನಲ್ಲಿ ಸುಭಿಕ್ಷೆ ಪ್ರಾಪ್ತಿಯಾಗಲೆಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಎಲೆರಾಂಪುರ ಕುಂಚಿಟಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಕುಂಚಿಟಿಗ ಸಂಪ್ರದಾಯದಲ್ಲಿ ಜಲಧಿ ಮಹೋತ್ಸವಕ್ಕೆ ಹೆಚ್ಚು ಮಹತ್ವವಿದೆ. ನಮ್ಮ ಆಚಾರ-ವಿಚಾರ, ಕಟ್ಟೆಮನೆ, ಬಂಡಿಮನೆ ಅಮಾವಾಸ್ಯೆ ಮನೆ ಬುಡಕಟ್ಟು ಸಂಸ್ಕೃತಿಯ ವೈಶಿಷ್ಟ್ಯ ಈ ಜಲಧಿ ಮಹೋತ್ಸವ. ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಿ ರೈತ ಸೇರಿದಂತೆ ಜನಸಾಮಾನ್ಯರ ಬದುಕಿನಲ್ಲಿ ಸುಭಿಕ್ಷೆ ಪ್ರಾಪ್ತಿಯಾಗಲೆಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಎಲೆರಾಂಪುರ ಕುಂಚಿಟಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಕರೇಕ್ಯಾತನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಶ್ರೀ ಬಂಡಿ ಅಜ್ಜಪ್ಪ ಸ್ವಾಮಿಯ ನೂತನ ಚರ ವಿಗ್ರಹ ಪ್ರತಿಷ್ಠಾಪನೆ ಹಾಗೂ ಸಂಪ್ರೊಷಣ ಮಹೋತ್ಸವ ಅಂಗವಾಗಿ ನಡೆದ ಜಲಧಿ ಮಹೋತ್ಸವದಲ್ಲಿ ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು. ದೇಶದಲ್ಲಿ ಶಾಂತಿ ನೆಲೆಸಬೇಕು, ದೇಶ ದೇಶಗಳಲ್ಲಿ ಕಂದಕ ಸೃಷ್ಟಿಯಾಗುತ್ತಿದೆ ಇವೆಲ್ಲ ತಾಪಮಾನ ನಿವಾರಣೆಯಾಗಬೇಕು ಮನುಷ್ಯ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಕೆಲಸ ಮಾಡಬೇಕು. ಇಂತಹ ದೇವರ ಜಲದಿ ಉತ್ಸವ ಹಾಗೂ ಜಾತ್ರಾ ಮಹೋತ್ಸವಗಳು ಮನುಷ್ಯನ ಮನಸ್ಥಿತಿಯನ್ನು ಗಟ್ಟಿಗೊಳಿಸುವಲ್ಲಿ ಹೆಚ್ಚು ಸಹಕಾರಿಯಾಗುತ್ತವೆ ಎಂದರು. ಈ ಸಂದರ್ಭದಲ್ಲಿ ನೂರಾರು ಮಹಿಳೆಯರು ಹಾಗೂ ಭಕ್ತರು ಶ್ರೀ ಬಂಡಿ ಅಜ್ಜಪ್ಪ ಸ್ವಾಮಿ ಜಲಧಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.