ವಿವಿಧ ಆಯಾಮದ ಬರಹದ ಮೂಲಕ ಕನ್ನಡ ಸಾಹಿತ್ಯ ಇನ್ನಷ್ಟು ಶ್ರೀಮಂತವಾಗಲಿ

| Published : Aug 04 2025, 12:30 AM IST

ವಿವಿಧ ಆಯಾಮದ ಬರಹದ ಮೂಲಕ ಕನ್ನಡ ಸಾಹಿತ್ಯ ಇನ್ನಷ್ಟು ಶ್ರೀಮಂತವಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯದ ವಿವಿಧ ಆಯಾಮಗಳು ಬರಹದ ಮೂಲಕ ಹೊರ ಬಂದಲ್ಲಿ ಕನ್ನಡ ಸಾಹಿತ್ಯ ಇನ್ನಷ್ಟು ಶ್ರೀಮಂತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

ಲಕ್ಷ್ಮೇಶ್ವರ: ಕನ್ನಡ ಸಾಹಿತ್ಯದ ವಿವಿಧ ಆಯಾಮಗಳು ಬರಹದ ಮೂಲಕ ಹೊರ ಬಂದಲ್ಲಿ ಕನ್ನಡ ಸಾಹಿತ್ಯ ಇನ್ನಷ್ಟು ಶ್ರೀಮಂತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

ಶನಿವಾರ ಪಟ್ಟಣದ ಸಹಸ್ರಾರ್ಜುನ ಬಿ.ಎಡ್ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಬರಹಗಾರ ಬಳಗ (ರಿ) ಹೂವಿನಹಡಗಲಿ, ಜಿಲ್ಲಾ ಘಟಕ ಗದಗ ಹಾಗೂ ಬರಹಗಾರ ಬಳಗ ಲಕ್ಷ್ಮೇಶ್ವರ ಘಟಕದ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಲಕ್ಷ್ಮೇಶ್ವರ ತಾಲೂಕಿನಲ್ಲಿ ಉದ್ಘಾಟನೆಯಾದ ಬರಹಗಾರರ ಬಳಗದಿಂದ ಸಾಹಿತ್ಯದ ವಿವಿಧ ರೀತಿಯ ಬರಹಗಳು ಹೊರಬಂದಲ್ಲಿ ಕನ್ನಡ ಸಾಹಿತ್ಯಕ್ಕೆ ಅಮೋಘ ಕೊಡುಗೆ ನೀಡಿದಂತಾಗುತ್ತದೆ. ಲೇಖಕರು ಹಾಗೂ ಬರಹಗಾರರು ಹೊರ ಬಂದಲ್ಲಿ ಈ ವೇದಿಕೆಯ ಉದ್ದೇಶ ಈಡೇರಿದಂತಾಗುತ್ತದೆ. ವೇದಿಕೆಯ ಮೂಲಕ ಒಳ್ಳೆಯ ಬರಹಗಾರರು ಹೊರಬರಲಿ. ಆ ದಿಸೆಯಲ್ಲಿ ಬಳಗ ಅತ್ಯುತ್ತಮ ಕಾರ್ಯಕ್ರಮನ್ನು ಆಯೋಜಿಸಲೆಂದು ಆಶೀರ್ವದಿಸಿದರು.ಸಹಸ್ರಾರ್ಜುನ ಬಿ.ಇಡಿ. ಕಾಲೇಜಿನ ಆಡಳಿತ ಮಂಡಳಿಯ ವಸಂತ ಖೊಡೆಯವರು ಅಧ್ಯಕ್ಷತೆ ವಹಿಸಿಕೊಂಡಿದ್ದರು.ನಿವೃತ್ತ ಶಿಕ್ಷಕ ಎಸ್.ಎಫ್.ಆದಿ ಮಾತನಾಡಿ, ಸಾಹಿತ್ಯ ರಚನೆಯಲ್ಲಿ ವಿವಿಧ ಆಯಾಮಗಳು ಕುರಿತು ಉಪನ್ಯಾಸ ನೀಡಿದರು. ಗದಗ ಜಿಲ್ಲಾಧ್ಯಕ್ಷೆ ಕಲಾಶ್ರೀ ಹಾದಿಮನಿ, ಕೃಷ್ಣಾಸಾ ಖೋಡೆ, ಪ್ರಾಚಾರ್ಯ ರೇಣುಕಾನಂದ ಅಂಗಡಿ. ನಿರ್ಮಲಾ ಅರಳಿ. ರತ್ನಾ ಕರ್ಕಿ, ಎಲ್.ಎಸ್. ಅರಳಿಹಳ್ಳಿ ಇದ್ದರು.ಲಕ್ಷ್ಮೇಶ್ವರ ತಾಲೂಕು ಬರಹಗಾರರ ಬಳಗದ ತಾಲೂಕಾಧ್ಯಕ್ಷ ಜೆ.ಎಸ್. ರಾಮಶೆಟ್ಟರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಸಂಗಪ್ಪಶೆಟ್ಟರ ಕಾರ್ಯಕ್ರಮ ನಿರೂಪಿಸಿದರು. ಶಂಕರ ಶಿಳ್ಳಿನ ವಂದಿಸಿದರು.