ಸಾರಾಂಶ
ಭಾರತ ಹಬ್ಬಗಳ ತವರೂರು. ಹಬ್ಬ ಮಾಡುತ್ತೇವೆ ಎಂದರೆ ಮನೆಯನ್ನೆಲ್ಲ ಸ್ವಚ್ಛಗೊಳಿಸುತ್ತೇವೆ. ಉಪವಾಸ ವ್ರತ ಇಟ್ಟುಕೊಳ್ಳುತ್ತಾರೆ. ತನು ಮನದ ಶುದ್ಧತೆಯನ್ನು ಮಾಡಿಕೊಳ್ಳುತ್ತಾರೆ. ಸತ್ಯತೆ ಶುದ್ಧತೆಗೆ ಜೀವನದಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ. ಆಧ್ಯಾತ್ಮಿಕ ಶಿಕ್ಷಣವನ್ನು ತಮ್ಮದಾಗಿಸಿಕೊಂಡರೆ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಬಹುದು. ಕೃಷ್ಣನ ಕೈಯಲ್ಲಿರುವ ಕೊಳಲು, ಕುಡಿಕೆಯಲ್ಲಿರುವ ಬೆಣ್ಣೆ ಜ್ಞಾನ ಸಂಪನ್ನತೆಯನ್ನು ತಿಳಿಸುತ್ತದೆ. ಕೃಷ್ಣನ ಜೀವನ ಎಲ್ಲರಿಗೂ ಮಾದರಿಯಾಗಲಿ ಎಂದು ಬ್ರಹ್ಮ ಕುಮಾರಿ ಸೇವಾ ಕೇಂದ್ರ ಸಂಚಾಲಕಿ ಬಿ.ಕೆ.ಕಾವೇರಿ ಹೇಳಿದರು.
ಕನ್ನಡಪ್ರಭ ವಾರ್ತೆ ಅರಕಲಗೂಡು
ಶ್ರೀ ಕೃಷ್ಣನ ಜನ್ಮಾಷ್ಟಮಿಯನ್ನು ಕೊಣನೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.ಸೇವಾ ಕೇಂದ್ರ ಸಂಚಾಲಕಿ ಬಿ.ಕೆ.ಕಾವೇರಿ ಮಾತನಾಡಿ, ಭಾರತ ಹಬ್ಬಗಳ ತವರೂರು. ಹಬ್ಬ ಮಾಡುತ್ತೇವೆ ಎಂದರೆ ಮನೆಯನ್ನೆಲ್ಲ ಸ್ವಚ್ಛಗೊಳಿಸುತ್ತೇವೆ. ಉಪವಾಸ ವ್ರತ ಇಟ್ಟುಕೊಳ್ಳುತ್ತಾರೆ. ತನು ಮನದ ಶುದ್ಧತೆಯನ್ನು ಮಾಡಿಕೊಳ್ಳುತ್ತಾರೆ.
ಕೃಷ್ಣಾಷ್ಟಮಿಯ ಈ ಶುಭ ಸಂದರ್ಭದಲ್ಲಿ ನಾವೆಲ್ಲರೂ ದೈವಿ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸತ್ಯತೆ ಶುದ್ಧತೆಗೆ ಜೀವನದಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ. ಆಧ್ಯಾತ್ಮಿಕ ಶಿಕ್ಷಣವನ್ನು ತಮ್ಮದಾಗಿಸಿಕೊಂಡರೆ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಬಹುದು. ಕೃಷ್ಣನ ಕೈಯಲ್ಲಿರುವ ಕೊಳಲು, ಕುಡಿಕೆಯಲ್ಲಿರುವ ಬೆಣ್ಣೆ ಜ್ಞಾನ ಸಂಪನ್ನತೆಯನ್ನು ತಿಳಿಸುತ್ತದೆ. ಕೃಷ್ಣನ ಜೀವನ ಎಲ್ಲರಿಗೂ ಮಾದರಿಯಾಗಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ 84 ಮಕ್ಕಳು ರಾಧಾಕೃಷ್ಣ ವೇಷ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಕೃಷ್ಣನ ವೇಷದಲ್ಲಿ ಸನ್ಮತಿ ಪ್ರಥಮ ಸ್ಥಾನ, ಹನ್ಸಿಕ ದ್ವಿತೀಯ ಸ್ಥಾನ, ಧೃತಿ ತೃತೀಯ ಸ್ಥಾನವನ್ನು ಪಡೆದರು. ರಾಧೆ ವೇಷದಲ್ಲಿ ಚಿನ್ಮಯಿ ಗೌಡ ಪ್ರಥಮ ಸ್ಥಾನ, ಹಿತೈಷಿ ದ್ವಿತೀಯ ಸ್ಥಾನ, ಸನ್ನಿಧಿ ತೃತೀಯ ಸ್ಥಾನವನ್ನು ಪಡೆದರು. ಭಾಗವಹಿಸಿದ್ದ ಎಲ್ಲ ಮಕ್ಕಳಿಗೂ ಸಮಾಧಾನಕರ ಬಹುಮಾನವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಛಾಯಾಪತಿ, ಚಂದ್ರಣ್ಣ, ಶಿಕ್ಷಕಿ ಹೊನ್ನೂರಭಿ, ಮಂಜುಳಾ, ರಾಮನಾಥಪುರ ವಿರೂಪಾಕ್ಷ, ಸುನೀತಾ, ಹೆಬ್ಬಾಲೆ ಮನು, ಶಿವಮ್ಮ, ಕಮಲಮ್ಮ, ಭಾಗ್ಯ, ಧನಲಕ್ಷ್ಮಿ, ನಾಗರತ್ನ, ಯಶೋದಮ್ಮ, ಹಾಸನ ರೇಣುಕಾ, ರವಿ, ಹೇಮಾ ಹಾಗೂ ಗ್ರಾಮದ ಅನೇಕ ಹಿರಿಯರು, ಪೋಷಕರು, ತಂದೆ ತಾಯಿಗಳು ಪಾಲ್ಗೊಂಡು ಕಾರ್ಯಕ್ರಮಕ್ಕೆ ಶೋಭೆಯನ್ನು ತಂದರು.