ಸಾರಾಂಶ
ಸರ್ವಧರ್ಮ ಸಮನ್ವಯ ಸಾರುವ ಮೊಹರಂ ಆಚರಣೆ ಎಲ್ಲರ ಬದುಕಿನಲ್ಲಿ ಸುಖ ಸಮೃದ್ದಿ ತರಲಿ, ಸರ್ವರಿಗೂ ಒಳಿತಾಗಲಿ
ಹುಬ್ಬಳ್ಳಿ: ಸರ್ವಧರ್ಮ ಸಮನ್ವಯ ಸಾರುವ ಮೊಹರಂ ಆಚರಣೆ ಎಲ್ಲರ ಬದುಕಿನಲ್ಲಿ ಸುಖ ಸಮೃದ್ದಿ ತರಲಿ, ಸರ್ವರಿಗೂ ಒಳಿತಾಗಲಿ ಹಾಗೂ ಪ್ರವಾದಿ ಮಹ್ಮದ ಪೈಗಂಬರ ಮೊಮ್ಮಗ ಇಮಾಮ್ ಹುಸೇನ್ ಮತ್ತು ಅವರ ಅನುಯಾಯಿಗಳು ಧರ್ಮಕ್ಕಾಗಿ ಹೋರಾಡಿ ಹುತಾತ್ಮರಾದ ದಿನ. ಅವರ ಸವಿನೆನಪು ಸ್ಮರಿಸುವ ದಿನ ಎಂದು ಡಾ. ಖ್ವಾಜಾಮೈನುದ್ದೀನ್ ಬಿಜಾಪುರ ಹೇಳಿದರು.
ಕರ್ನಾಟಕ ಅಹಲೇ ಸುನ್ನತ ಕಮಿಟಿ ವತಿಯಿಂದ ಹುಬ್ಬಳ್ಳಿ ಮದರ ಥೆರೇಸಾ ವೃದ್ಧಾಶ್ರಮದಲ್ಲಿ ಬಡವರು, ನಿರ್ಗತಿಕರು, ವಯೋವೃದ್ಧರಿಗೆ ಹಣ್ಣು ಹಂಪಲ್ ಹಾಗೂ ಅನ್ನ ಸಂತರ್ಪಣೆ ನೆರವೇರಿಸಿ ಮಾತನಾಡಿದರು.ಕಮಿಟಿ ಜಂಟಿ ಕಾರ್ಯದರ್ಶಿ ಮೌಲಾನಾ ನಿಯಾಜ ಆಲಂ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಜೀರ ಅಹ್ಮದ ಕೋಲಕಾರ, ಬಾಬಾಜಾನ ಮುಧೋಳ. ಮಹ್ಮದ ಯುಸೂಫ್ ಸುಂಡಕೆ, ಮಹ್ಮದ ಸಿರಾಜ್ ಮುಲ್ಲಾ, ಮೌಲಾನಾ ಹಕ್ಮಿಂ, ಮೌಲಾನಾ ಮುಕ್ತಾರ, ಮಹ್ಮದ ಹುಸೇನ ಆಸೀಪ ಪಲ್ಲಾ ಮುಂತಾದವರು ಪಾಲ್ಲೊಂಡಿದ್ದರು.