ರಾಜೇಂದ್ರ ಸ್ವಾಮೀಜಿ ಜಯಂತಿ ಅರ್ಥ ಪೂರ್ಣವಾಗಿ ಆಚರಣೆಯಾಗಲಿ

| Published : Oct 26 2025, 02:00 AM IST

ರಾಜೇಂದ್ರ ಸ್ವಾಮೀಜಿ ಜಯಂತಿ ಅರ್ಥ ಪೂರ್ಣವಾಗಿ ಆಚರಣೆಯಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಜಯಂತಿ ಅರ್ಥ ಪೂರ್ಣವಾಗಿ ಆಚರಣೆಯಾಗಬೇಕು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಜಯಂತಿ ಅರ್ಥ ಪೂರ್ಣವಾಗಿ ಆಚರಣೆಯಾಗಬೇಕು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ 110ನೇ ಜಯಂತಿಯ ಆಚರಣೆ ಸಂಬಂಧ ಪಟ್ಟಣದ ಹೊರವಲಯದ ಆರ್.ಎಂ.ಸಿ ಆವರಣದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ ಶ್ರೀ ಗಳ ಶತೋತ್ತರ ದಶಮಾನೋತ್ಸವ ಕಾರ್ಯವನ್ನು ಅಯೋಜಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಈ ಭಾಗಕ್ಕೆ ಶ್ರೀ ಮಠದ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.

ರಾಜೇಂದ್ರ ಶ್ರೀಗಳು ಮಾಡಿದ ಕೆಲಸ ಕಾರ್ಯ ಎಲ್ಲಾರಿಗೂ ಮಾದರಿಯಾಗಿರವಂತಹದು , ಪೂರ್ವಭಾವಿ ಸಭೆಗೆ ಎಲ್ಲಾ ಸಮಾಜದ ಮುಖಂಡರುಗಳು ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಆ ದಿನವು ಇತಿಹಾಸ ಸೃಷ್ಟಿಯಾಗಬೇಕು , ಈಗಿನ ಶ್ರೀ ಗಳ ಆರ್ಶಿವಾದದಿಂದ ಯಶಸ್ವಿಯಾಗಿ ಮಾಡೋಣ ಸಂಪೂರ್ಣವಾಗಿ ನನ್ನ ಸಹಕಾರ ನೀಡುತ್ತೇನೆಂದು ತಿಳಿಸಿದರು.

ಇದೇ ಸಮಯದಲ್ಲಿ ಸಾಲೂರು ಬೃಹನ್ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳು,ಮಾಜಿ ಶಾಸಕರುಗಳಾದ ಆರ್‌. ನರೇಂದ್ರ, ಪರಿಮಳ ನಾಗಪ್ಪ, ಜಿ.ಎನ್ ನಂಜುಂಡಸ್ವಾಮಿ,ಮೈಮುಲ್ ಅಧ್ಯಕ್ಷ ನಂಜುಂಡಸ್ವಾಮಿ,ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುಮ್ತಾಜ್ ಭಾನು, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ದತ್ತೆಶ್ ಕುಮಾರ್, ಜನದನಿ ಟ್ರಸ್ಟ್ ಅಧ್ಯಕ್ಷ ಜನಧನಿ ವೆಂಕಟೇಶ್,ಸಮಾಜ ಸೇವಕ ನಿಶಾಂತ್,ಚಾಮುಲ್ ನಿರ್ದೇಶಕ ಮಹದೇವ್ ಪ್ರಸಾದ್, ಸಮಾಜದ ಮುಖಂಡರುಗಳು ಹಾಗೂ ಇನ್ನಿತರರು ಇದ್ದರು.