ಬ್ಯಾರಿ ಭಾಷೆ ಮತ್ತು ಸಾಹಿತ್ಯ ಬೆಳವಣಿಗೆ ಆಗಬೇಕು ಎಂಬುದು ಗುರಿಯಾಗಿದ್ದು, ಇದಕ್ಕಾಗಿ ಬಹಳಷ್ಟು ಮಂದಿ ಶ್ರಮ ವಹಿಸುತ್ತಿದ್ದಾರೆ ಎಂದು ಅಖಿಲ ಭಾರತ ಬ್ಯಾರಿ ಪರಿಷತ್ ಪ್ರಧಾನ ಸಲಹೆಗಾರ ನ್ಯಾಯವಾದಿ ಬಿ.ಎ.ಮಹಮ್ಮದ್ ಹನೀಫ್ ಹೇಳಿದರು.

ಕನ್ನಡಪ್ರಭ ವಾರ್ತೆ: ಬ್ಯಾರಿ ಭಾಷೆ ಮತ್ತು ಸಾಹಿತ್ಯ ಬೆಳವಣಿಗೆ ಆಗಬೇಕು ಎಂಬುದು ಗುರಿಯಾಗಿದ್ದು, ಇದಕ್ಕಾಗಿ ಬಹಳಷ್ಟು ಮಂದಿ ಶ್ರಮ ವಹಿಸುತ್ತಿದ್ದಾರೆ ಎಂದು ಅಖಿಲ ಭಾರತ ಬ್ಯಾರಿ ಪರಿಷತ್ ಪ್ರಧಾನ ಸಲಹೆಗಾರ ನ್ಯಾಯವಾದಿ ಬಿ.ಎ.ಮಹಮ್ಮದ್ ಹನೀಫ್ ಹೇಳಿದರು.

ಅವರು ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ ನಗರದ ಖಾಸಗಿ ಸಭಾಂಗಣದಲ್ಲಿ ನಡೆದ ಬ್ಯಾರಿ ಭಾಷೆ ದಿನಾಚರಣೆ 2026 ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್, ಎಎಮ್ ಫೌಂಡೇಶನ್ ಚಯರ್ ಮ್ಯಾನ್ ಇನಾಯತ್ ಅಲಿ ಮೂಲ್ಕಿ ಮಾತನಾಡಿದರು.ಅ.ಭಾ.ಬ್ಯಾ.ಪ.ಅಧ್ಯಕ್ಷ ಡಾ.ಇ.ಕೆ.ಎ.ಸಿದ್ದೀಕ್ ಅಡ್ಡೂರು ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಯೂಸುಫ್ ವಕ್ತಾರ್‌ಗೆ ಜೀವಮಾನ ಶ್ರೇಷ್ಠ ಬ್ಯಾರಿ ಸಾಧಕ ಪ್ರಶಸ್ತಿ, ಡಾ.ಹಪ್ಸಾ ರಫೀಕ್ ಗೆ ಶ್ರೇಷ್ಠ ಯುವ ಬ್ಯಾರಿ ಸಾಧಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಯೆನೆಪೋಯ ಮೆಡಿಕಲ್ ಇನ್ಸ್ಟಿಟ್ಯೂಟ್ ಹೆಲ್ತ್ ಇನ್ಸ್ಪೆಕ್ಟರ್ ಆಯಿಶಾ ಪೆರ್ನೆ, ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಎಂ.ಎಚ್. ಹಾಜಿ ಅಡ್ಡೂರು, ಅಲ್.ಭಾ.ಬ್ಯಾ.ಪ.ಗೌರವ ಅಧ್ಯಕ್ಷ ಜೆ.ಹುಸೈನ್, ಇನ್ಸ್ಪೆಕ್ಟರ್ ಸಲೀಮ್ ಇದ್ದರು.

ಗೌರವ ಅಧ್ಯಕ್ಷ ಯು.ಎಚ್.ಖಾಲೀದ್ ಉಜಿರೆ ಪ್ರಾಸ್ತಾವಿಕ ಮಾತನಾಡಿದರು. ಬ್ಯಾರಿ ಇನ್ಫೊ ಟೆಕ್ ಸ್ಥಾಪಕ ಮಹಮದ್ ಅಲಿ ಕಮರಡಿ ಅಭಿನಂದನಾ ಭಾಷಣ ಮಾಡಿದರು.

ಉಪಾಧ್ಯಕ್ಷ ಇಬ್ರಾಹಿಂ ನಡುಪದವು ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಇಬ್ರಾಹಿಂ ಬ್ಯಾರಿ, ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಎಮ್ ಶೌಕತ್ ನಿರೂಪಿಸಿದರು. ಕೋಶಾಧಿಕಾರಿ ನಿಸಾರ್ ಫಕೀರ್ ಮುಹಮ್ಮದ್ ವಂದಿಸಿದರು.