ವರ್ಷ ಪೂರ್ತಿ ಕನ್ನಡ ಅಭಿಮಾನವಿರಲಿ

| Published : Nov 12 2025, 03:15 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ನವೆಂಬರ್‌ ಕನ್ನಡಿಗರಾಗದೇ ವರ್ಷವಿಡೀ ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಭಿಮಾನವೀರಬೇಕೆಂದು ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ನವೆಂಬರ್‌ ಕನ್ನಡಿಗರಾಗದೇ ವರ್ಷವಿಡೀ ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಭಿಮಾನವೀರಬೇಕೆಂದು ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಸಿಎಲ್‌ಇ ಸಂಸ್ಥೆಯ ಸಭಾಭವನದಲ್ಲಿ ಬೆಂಗಳೂರಿನ ಜಗನ್ನಾಥ ಬಳಗ ಹಾಗೂ ಸಿ.ಎಲ್.ಇ ಸಂಸ್ಥೆಯ ಪದವಿ ಮಹಾವಿದ್ಯಾಲಯ ಸಹಯೋಗದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ಮಾಸದ ಮಾಧುರ್ಯ 102ನೇ ಸಮಾರಂಭ ಹಾಗೂ ಕನ್ನಡ ಕಲಾ ಕಲರವ ನಾಡು-ನುಡಿ ಕವಿಗೋಷ್ಟಿಯಲ್ಲಿ ಮಾತನಾಡಿ, ಬೆಳಗಾವಿ ಕನ್ನಡದ ಕಳಸ ಎಂದು ಹೇಳುತ್ತೇವೆ. ಆದರೆ ಅಲ್ಲಿಯೇ ಕರಾಳ ದಿನಾಚರಣೆ ಆಚರಿಸುತ್ತಿದೆ. ಅಂತವರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಯಾವ ನ್ಯಾಯ..? ಬೆಳಗಾವಿ ಎಂದೆಂದಿಗೂ ಕರ್ನಾಟಕದದ್ದೇ ಎಂದು ತಿಳಿಸಿದರು.

ನಿಪ್ಪಾಣಿ ತಾಲೂಕ ಕಸಾಪ ಅಧ್ಯಕ್ಷ ಈರಣಾ ಶಿರಗಾಂವಿ ಮಾತನಾಡಿ, ಇಂದು ಯುವಪೀಳಿಗೆ ಎತ್ತ ಸಾಗುತ್ತಿದೆ ಎಂದು ಅರಿಯಬೇಕಿದೆ ಎಂದರು.

ಸಿಎಲ್‌ಇ ಸಂಸ್ಥೆಯ ಯುವ ನಿರ್ದೇಶಕ ಮಲ್ಲಿಕಾರ್ಜುನ ಕವಟಗಿಮಠ ಚಾಲನೆ ನೀಡಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಣೇಶ ಮೋಪಗಾರ ಅವರನ್ನು ಸನ್ಮಾನಿಸಿ ಗೌರವಿಸಿದರು. ಪ್ರಾಚಾರ್ಯ ಎಸ್.ಎಸ್.ಮೆಟಗುಡ್ಡ ಮಾತನಾಡಿದರು.

ಜಗನ್ನಾಥ ಬಳಗ ರಾಜ್ಯ ಸಂಚಾಲಕ ದತ್ತಗುರು ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಭವ್ಯ ಭಾರತದ ಕನಸು ನನಸಾಗಬೇಕಾದರೆ ಯುವಕರು ಸಂಕಲ್ಪ ಮಾಡಬೇಕು. ಒಳಿತು ಕೆಡಕುಗಳನ್ನು ಅರಿತು ನಡೆದಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಯುತ್ತದೆ. ಜಗನ್ನಾಥ ಬಳಗ ಕಲಾವಿದರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಬಿ.ಸಿ.ಗಂಗಾಲ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುರೇಶ ಉಕ್ಕಲಿ, ಲಲಿತಾ ಹಿರೇಮಠ, ಮಾರುತಿ ಕೊಣ್ಣೂರಿ, ಭರತ ಕಲಾಚಂದ್ರ ಸ್ವಾಗತಿಸಿದರು. ಸುನೀತಾ ಮಗದುಮ್ಮ ನಿರೂಪಿಸಿದರು. ನಾಗರಾಜ ಮಾಲಗತ್ತೆ ವಂದಿಸಿದರು.