ಶಾಲೆಗಳಿಗೆ ಮಾಯಮುಡಿ ಗ್ರಾ.ಪಂ. ಶುದ್ಧ ಕುಡಿಯುವ ನೀರು ಘಟಕ ವಿತರಣೆ

| Published : Dec 13 2024, 12:47 AM IST

ಶಾಲೆಗಳಿಗೆ ಮಾಯಮುಡಿ ಗ್ರಾ.ಪಂ. ಶುದ್ಧ ಕುಡಿಯುವ ನೀರು ಘಟಕ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಯಮುಡಿ ಗ್ರಾಮ ಪಂಚಾಯಿತಿ ವತಿಯಿಂದ ಮೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಶುದ್ಧ ನೀರಿನ ಘಟಕ ಮತ್ತು ಡಿಸ್ಪೆನ್ಸರ್ ಹಾಗೂ 11 ಅಂಗನವಾಡಿ ಕೇಂದ್ರಗಳಿಗೆ ಶುದ್ಧ ನೀರಿನ ಘಟಕ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ದಕ್ಷಿಣ ಕೊಡಗಿನ ಮಾಯಮುಡಿ ಗ್ರಾಮ ಪಂಚಾಯಿತಿ ವತಿಯಿಂದ ಮೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಶುದ್ಧ ನೀರಿನ ಘಟಕ ಮತ್ತು ಡಿಸ್ಪೆನ್ಸರ್ ಹಾಗೂ 11 ಅಂಗನವಾಡಿ ಕೇಂದ್ರಗಳಿಗೆ ಶುದ್ಧ ನೀರಿನ ಘಟಕ ವಿತರಿಸಲಾಯಿತು.

ಮಾಯಾಮುಡಿ ಗ್ರಾ.ಪಂ ಅಧ್ಯಕ್ಷ ಎ.ಎಸ್.ಟಾಟು ಮೊಣ್ಣಪ್ಪ ಮಾತನಾಡಿ, ಮಕ್ಕಳಿಗೆ ಶುದ್ಧ ಕುಡಿಯುವ ನೀರು ನೀಡುವ ಉದ್ದೇಶದಿಂದ ಬಿಸಿ ಹಾಗೂ ತಣ್ಣೀರಿನ ವಾಟರ್ ಫಿಲ್ಟರ್‌ ನೀಡಲಾಗಿದೆ ಎಂದರು.

ಆರೋಗ್ಯವಂತ ಸಮಾಜ ನಿರ್ಮಿಸುವ ಗುರಿಯನ್ನು ಗ್ರಾ.ಪಂ. ಹೊಂದಿದೆ. ಸ್ವಚ್ಛ ಪರಿಸರ, ಶುದ್ಧಗಾಳಿ, ನೀರು ಎಲ್ಲರಿಗೂ ಅತ್ಯವಶ್ಯಕ. ಶುದ್ಧಗಾಳಿ ಮತ್ತು ಶುದ್ಧ ನೀರಿನಿಂದ ಶೇ.80ರಷ್ಟು ವಿವಿಧ ರೋಗಗಳು ಬಾರದಂತೆ ತಡೆಗಟ್ಟಬಹುದು ಎಂದರು.

ಕುಡಿಯುವ ನೀರು ಘಟಕದಿಂದ ಮಾಯಮುಡಿ ಗ್ರಾ.ಪಂ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ. ಸಾರ್ವಜನಿಕರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಮಾಯಮುಡಿ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ರಸ್ತೆಯ ಆಸುಪಾಸಿನಲ್ಲಿ ಕಸ ಎಸೆದರೆ ರು.5 ಸಾವಿರ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿ ಸದಪ್ಪ ಮೆಟ್ಟಲಕೋಡ್, ಉಪಾಧ್ಯಕ್ಷ ಶಾಂತಾ, ಸದಸ್ಯರಾದ ಸುಶೀಲಾ, ಸರಸ್ವತಿ, ಕೆ.ವಿ.ಸುಮಿತ್ರ, ಮುತ್ತಮ್ಮ, ಕೆ.ಕೆ.ಸುಮಿತ್ರ, ಎಂ.ಪಿ.ಮೀನಾ, ನಾಜೀರ, ಸಿ.ಕೆ.ಪೂವಯ್ಯ, ಎ.ಎಸ್.ನಾಚಯ್ಯ, ಟಿ.ಸಿ.ನಾರಾಯಣ, ಸಿದ್ದಪ್ಪ, ವಿನೋದ್ ಕುಮಾರ್, ಕೆ.ಕೆ.ಶಬರೀಶ್, ಸಿಬ್ಬಂದಿ ಆಶಾ, ಸಚಿತ, ಉಮೀರಾ, ಗುರು, ಅಭಿಷೇಕ್ ಮತ್ತಿತರರಿದ್ದರು.