23ರಿಂದ ಜಿಎಂ ವಿವಿಯಿಂದ ಎಂಬಿಎ ಕ್ರ್ಯಾಶ್‌ ಕೋರ್ಸ್ ಉಚಿತ ತರಬೇತಿ

| Published : Jul 21 2024, 01:20 AM IST

23ರಿಂದ ಜಿಎಂ ವಿವಿಯಿಂದ ಎಂಬಿಎ ಕ್ರ್ಯಾಶ್‌ ಕೋರ್ಸ್ ಉಚಿತ ತರಬೇತಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ನಗರದ ಜಿ.ಎಂ. ವಿಶ್ವವಿದ್ಯಾಲಯದ ಎಂಬಿಎ ವಿಭಾಗದಿಂದ 3 ದಿನಗಳ ಎಂಬಿಎ ಕ್ರ್ಯಾಶ್‌ ಕೋರ್ಸ್ ಉಚಿತ ತರಬೇತಿ ಕಾರ್ಯಕ್ರಮ ಜುಲೈ 23ರಿಂದ 25ರವರೆಗೆ ಹಮ್ಮಿಕೊಳ್ಳಲಾಗಿದೆ.

- ವಿವಿಧ ಜಿಲ್ಲೆ ವಿದ್ಯಾರ್ಥಿಗಳ ನೋಂದಣಿ: ಡೀನ್‌- - - ದಾವಣಗೆರೆ: ನಗರದ ಜಿ.ಎಂ. ವಿಶ್ವವಿದ್ಯಾಲಯದ ಎಂಬಿಎ ವಿಭಾಗದಿಂದ 3 ದಿನಗಳ ಎಂಬಿಎ ಕ್ರ್ಯಾಶ್‌ ಕೋರ್ಸ್ ಉಚಿತ ತರಬೇತಿ ಕಾರ್ಯಕ್ರಮ ಜುಲೈ 23ರಿಂದ 25ರವರೆಗೆ ಹಮ್ಮಿಕೊಳ್ಳಲಾಗಿದೆ.

ಶನಿವಾರ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಡೀನ್ ಡಾ.ಬಸವರಾಜ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತರಬೇತಿಗಾಗಿ ಈಗಾಗಲೇ ವಿವಿಧ ಜಿಲ್ಲೆಗಳಿಂದ ಅನೇಕ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಎಂಬಿಎ ಕೋರ್ಸ್‌ಗೆ ಸೇರ ಬಯಸುವ ಆಕಾಂಕ್ಷಿಗಳು ಜು.21ರಂದು ಸಂಜೆ 5 ಗಂಟೆವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಹೆಸರು ನೋಂದಣಿಗಾಗಿ ಗೂಗ್ಲ್ ಫಾರ್ಮ್ಸ್ ಲಿಂಕ್ ಬಳಸಬಹುದು ಎಂದರು.

ಮೂರು ದಿನದ ತರಬೇತಿ ಕಾರ್ಯಕ್ರಮಕ್ಕೆ ಶೈಕ್ಷಣಿಕ ತಜ್ಞರು ಆಗಮಿಸಿ, ಪಿಜಿ-ಸಿಇಟಿ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳಲ್ಲಿ ಬೇಕಾದ ನೈಪುಣ್ಯತೆ ತಿಳಿಸಿಕೊಡಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತರಬೇತಿಗೆ ನೋಂದಣಿ ಮಾಡಿಕೊಂಡು ಲಾಭ ಪಡೆಯಬೇಕು. ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯ ಮತ್ತು ಜಿ.ಎಂ. ವಿಶ್ವವಿದ್ಯಾಲಯ ಎರಡರಲ್ಲೂ ಎಂಬಿಎ ವಿಭಾಗವಿದೆ. ಹೆಚ್ಚಿನ ಮಾಹಿತಿಗೆ ಮೊ:94487 15326, 85536 54836, 89712 71712 ಸಂಪರ್ಕಿಸುವಂತೆ ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಡಾ.ಶ್ರೀಶೈಲ ವಿಜಯಪುರ, ಟಿ.ಆರ್.ತೇಜಸ್ವಿ ಕಟ್ಟಿಮನಿ ಇದ್ದರು.

- - - -20ಕೆಡಿವಿಜಿ35ಃ: