ಥಡಿಮಠ ಅಭಿವೃದ್ಧಿಗೆ ಎಂಬಿಪಾ ₹ 50 ಲಕ್ಷ ದೇಣಿಗೆ

| Published : Sep 26 2025, 01:02 AM IST

ಸಾರಾಂಶ

ಈಗಾಗಲೇ ಬೆಳಗಾವಿಯಲ್ಲಿ ನಡೆದ ಟ್ರಸ್ಟ್‌ ಸಭೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಟ್ರಸ್ಟ್‌ ಅಧ್ಯಕ್ಷ ಮಹ್ಮದ್‌ ರೋಷನ್‌ ಹಾಗೂ ಟ್ರಸ್ಟ್‌ ಸದಸ್ಯರ ಜತೆ ಸಮಾಜದ ಮುಖಂಡರು ಸೇರಿ ಲಿಂಗರಾಜ ವಾಡೆ‌, ಥಡಿಮಠ, ಗಣಪತಿ ದೇವಸ್ಥಾನ ಮುಂತಾದ ಕಡೆ ಅಭಿವೃದ್ಧಿಪಡಿಸಲು ಮನವಿ ಮಾಡಿದಾಗ ಸೆ. 26ರಂದು ಪರಿವೀಕ್ಷಣೆಗೆ ಆಗಮಿಸಲು ಒಪ್ಪಿದ್ದಾರೆ.

ನವಲಗುಂದ:

ಶಿರಸಂಗಿ ಲಿಂಗರಾಜ ಟ್ರಸ್ಟ್‌ ಆಧೀನದಲ್ಲಿರುವ ನವಲಗುಂದ ಥಡಿಮಠ ಅಭಿವೃದ್ಧಿಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.‌ ಪಾಟೀಲ ಕುಟುಂಬ ₹ 50 ಲಕ್ಷ ದೇಣಿಗೆ ನೀಡಲು ಒಪ್ಪಿದೆ ಎಂದು ಶಾಸಕ ಎನ್.‌ ಎಚ್.‌ ಕೋನರಡ್ಡಿ ತಿಳಿಸಿದರು.

ಪಟ್ಟಣದ ಥಡಿಮಠದಲ್ಲಿ ಕುಡವಕ್ಕಲಿಗ ಸಮಾಜದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಈಗಾಗಲೇ ಬೆಳಗಾವಿಯಲ್ಲಿ ನಡೆದ ಟ್ರಸ್ಟ್‌ ಸಭೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಟ್ರಸ್ಟ್‌ ಅಧ್ಯಕ್ಷ ಮಹ್ಮದ್‌ ರೋಷನ್‌ ಹಾಗೂ ಟ್ರಸ್ಟ್‌ ಸದಸ್ಯರ ಜತೆ ಸಮಾಜದ ಮುಖಂಡರು ಸೇರಿ ಲಿಂಗರಾಜ ವಾಡೆ‌, ಥಡಿಮಠ, ಗಣಪತಿ ದೇವಸ್ಥಾನ ಮುಂತಾದ ಕಡೆ ಅಭಿವೃದ್ಧಿಪಡಿಸಲು ಮನವಿ ಮಾಡಿದಾಗ ಸೆ. 26ರಂದು ಪರಿವೀಕ್ಷಣೆಗೆ ಆಗಮಿಸಲು ಒಪ್ಪಿದ್ದಾರೆ ಎಂದರು.

ತಾಲೂಕು ಕೂಡುವಕ್ಕಲಿಗ ಸಮಾಜದ ಅಧ್ಯಕ್ಷ ನಿಂಗಪ್ಪ ಹಳ್ಳದ, ಬಸವರಾಜ ಹರಿವಾಳದ, ಲಕ್ಷಣ ಹಳ್ಳದ, ಪ್ರಕಾಶ ಶಿಗ್ಲಿ, ನಾಗಪ್ಪ ಸಂಗಟಿ, ಲಕ್ಷ್ಮಣ ಜವಳಗಿ, ಅಡಿವೆಪ್ಪ ಶಿರಸಂಗಿ, ಗಂಗಾಧರ ಹಳ್ಳದ, ಬಸವರಾಜ ಸೋಮಗೊಂಡ, ಅಪ್ಪಣ್ಣ ಹಳ್ಳದ, ಮಂಜುನಾಥ ಸುಬೇದಾರ, ನಾಗಪ್ಪ ಬಿಸನಾಳ, ಬಸವರಾಜ ಹಳ್ಳದ, ಡಿ.ಬಿ. ಬಿಸನಾಳ, ಮರಿತಮ್ಮಪ್ಪ ಹಳ್ಳದ, ಯಲ್ಲಪ್ಪ ಹಳ್ಯಾಳ, ಫಕ್ಕೀರಪ್ಪ ಹಳ್ಳದ, ಮಲ್ಲಿಕಾರ್ಜುನ ಜಲಾದಿ, ಶಿವಣ್ಣ ಹುಬ್ಬಳ್ಳಿ ಇದ್ದರು.