ಬನ್ನಂಗಾಡಿ ಕಾಲೇಜಿನಲ್ಲಿ ವಿಶ್ವಕರ್ಮ ಜಯಂತಿ ಅರ್ಥಪೂರ್ಣ ಆಚರಣೆ

| Published : Sep 18 2025, 01:10 AM IST

ಸಾರಾಂಶ

ರೈತರು ಕೃಷಿ ಚಟುವಟಿಕೆ ನಡೆಸಲು ಬೇಕಿರುವ ಸಾಮಗ್ರಿಗಳು, ಮನೆ ನಿರ್ಮಾಣ, ಚಿನ್ನಾಭರಣ ಸೇರಿದಂತೆ ಸಮಾಜದಲ್ಲಿ ನಡೆಯುವ ಪ್ರತಿಯೊಂದು ಅಭಿವೃದ್ಧಿ ಕೆಲಸಕ್ಕೂ ಅವರ ಸಹಕಾರ ಅಗತ್ಯವಾಗಿದೆ. ಸರ್ಕಾರ ಇಂತಹ ಮಹಾನ್ ವ್ಯಕ್ತಿಗಳ ಜಯಂತ್ಯುತ್ಸವನ್ನು ಆಚರಣೆ ಮಾಡುವ ಮೂಲಕ ವಿಶ್ವಕರ್ಮ ಸಮುದಾಯದ ಗೌರವ ಘನತೆ ಹೆಚ್ಚಿಸುವ ಕೆಲಸ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಬನ್ನಂಗಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವಕರ್ಮ ಜಯಂತಿಯನ್ನು ಬುಧವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.

ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಕೆ.ಶ್ರೀನಿವಾಸ್ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವಕರ್ಮ ಸಮುದಾಯದವರು ಸಮಾಜದ ಬೆನ್ನೆಲುಬಾಗಿದ್ದಾರೆ. ಆಡುಮುಟ್ಟದ ಸೊಪ್ಪಿಲ್ಲ ವಿಶ್ವಕರ್ಮ ಸಮುದಾಯದವರು ಮಾಡದ ಕೆಲಸವಿಲ್ಲ. ಪ್ರತಿಯೊಂದು ಕೆಲಸಕ್ಕೂ ಅವರ ಸಹಕಾರ ಅಗತ್ಯವಾಗಿದೆ ಎಂದರು.

ರೈತರು ಕೃಷಿ ಚಟುವಟಿಕೆ ನಡೆಸಲು ಬೇಕಿರುವ ಸಾಮಗ್ರಿಗಳು, ಮನೆ ನಿರ್ಮಾಣ, ಚಿನ್ನಾಭರಣ ಸೇರಿದಂತೆ ಸಮಾಜದಲ್ಲಿ ನಡೆಯುವ ಪ್ರತಿಯೊಂದು ಅಭಿವೃದ್ಧಿ ಕೆಲಸಕ್ಕೂ ಅವರ ಸಹಕಾರ ಅಗತ್ಯವಾಗಿದೆ. ಸರ್ಕಾರ ಇಂತಹ ಮಹಾನ್ ವ್ಯಕ್ತಿಗಳ ಜಯಂತ್ಯುತ್ಸವನ್ನು ಆಚರಣೆ ಮಾಡುವ ಮೂಲಕ ವಿಶ್ವಕರ್ಮ ಸಮುದಾಯದ ಗೌರವ ಘನತೆ ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಬಸವರಾಜು, ಸಮುದಾಯದ ಗೌರವಾಧ್ಯಕ್ಷ ಬನ್ನಂಗಾಡಿ ತಮ್ಮಣ್ಣಚಾರಿ, ಅಧ್ಯಕ್ಷ ಚಲುವಚಾರ್, ಚಿನಕುರಳಿ ಹೋಬಳಿ ಅಧ್ಯಕ್ಷ ಬಿ.ಜೆ.ರವಿ, ಮಹಿಳಾ ಘಟಕದ ಅಧ್ಯಕ್ಷ ಗೌರಮ್ಮ, ಖಜಾಂಚಿ ಬಿ.ಆರ್.ವಿಜಯ್ ಸೇರಿದಂತೆ ಬನ್ನಂಗಾಡಿ ಗ್ರಾಮದ ವಿಶ್ವಕರ್ಮ ಸಮುದಾಯದ ಮುಖಂಡರು, ಕಾರ್ಯಕರ್ತರು ಹಾಗೂ ಕಾಲೇಜು ಉಪನ್ಯಾಸಕರು, ಸಿಬ್ಬಂದಿ ಹಾಜರಿದ್ದರು.

ಅಮೆರಿಕಾಗೆ ತೆರಳಿದ ಶಾಸಕರು, ವಿಶ್ವಕರ್ಮ ಜಯಂತಿ ಮುಂದೂಡಿಕೆ

ಪಾಂಡವಪುರ:

ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರು ಅಮೆರಿಕಾಗೆ ತೆರಳಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತದಿಂದ ನಡೆಯಬೇಕಿದ್ದ ವಿಶ್ವಕರ್ಮ ಜಯಂತಿಯನ್ನು ಮುಂದೂಡಿದ್ದಾರೆ.

ವಿಶ್ವಕರ್ಮ ಜಯಂತಿಯನ್ನು ರಾಜ್ಯ ಸರ್ಕಾರ, ಜಿಲ್ಲಾಡಳಿತದಿಂದ ಸೆ.17ರಂದು ಆಚರಣೆ ಮಾಡುತ್ತಿದೆ. ಆದರೆ, ತಾಲೂಕು ಆಡಳಿತ ಮಾತ್ರ ಶಾಸಕರು ವಿದೇಶಕ್ಕೆ ತೆರಳಿರುವುದರಿಂದ ಸೆ.17ರಂದು ಆಚರಿಸಬೇಕಿದ್ದ ವಿಶ್ವಕರ್ಮ ಜಯಂತಿಯನ್ನು ಮುಂದೂಡಿದ್ದಾರೆ.

ವಿಶ್ವಕರ್ಮ ಜಯಂತಿ ಮಾತ್ರವಲ್ಲದೆ ಈ ಹಿಂದೆಯೂ ಸಹ ಕೆಲವು ಮಹಾನ್ ನಾಯಕರ ಜಯಂತಿಗಳಿಗೂ ಸಹ ಶಾಸಕರು ಗೈರಾಗಿದ್ದು, ಇದು ವಿಶ್ವಕರ್ಮ ಸಮುದಾಯದ ಕೆಲವರಲ್ಲಿ ಅಸಮಧಾನಕ್ಕೆ ಕಾರಣವಾಗಿದೆ. ಕ್ಷೇತ್ರದಲ್ಲಿ ಸ್ವರಾಜ್ ಉತ್ಸವ ಕಾರ್‍ಯಕ್ರಮ ನಡೆಸಿದ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರು ಮುಗಿದ ಬಳಿಕ ರಾತ್ರಿಯೇ ಅಮೆರಿಕಾಗೆ ತೆರಳಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆಯಷ್ಟೇ ಅಮೆರಿಕಾದಿಂದ ವಾಪಸ್ಸಾಗಿದ್ದ ಶಾಸಕರು ಪತ್ನಿ, ಮಗುವನ್ನು ನೋಡುವುದಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ. ಶಾಸಕರು ಪತ್ನಿ ಅನಾರೋಗ್ಯದ ಹಿನ್ನೆಲೆಯಲ್ಲಿ ಪದೇಪದೇ ವಿದೇಶಕ್ಕೆ ತೆರಳುತ್ತಿದ್ದಾರೆ. ಆದರೆ, ಕೆಲವು ಅಧಿಕಾರಿಗಳು ಶಾಸಕರ ಗೈರು ಹಾಜರಿ ಸಾರ್ವಜನಿಕರೊಂದಿಗೆ ದುರ್ವತನೆ ತೋರುತ್ತಾರೆ. ಈ ಬಗ್ಗೆ ಶಾಸಕರು ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.