ಸಾರಾಂಶ
ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ನಂತರ ಅಂತರಾಜ್ಯಗಳಿಗೆ ಸಂಚರಿಸುವ ಬಸ್‌ಗಳ ಸಂಖ್ಯೆಯಲ್ಲಿ ಕಡಿಗೊಳಿಸಿ ಶಾಲಾ, ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.
ಬೆಳಗಾವಿ: ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ನಂತರ ಅಂತರಾಜ್ಯಗಳಿಗೆ ಸಂಚರಿಸುವ ಬಸ್‌ಗಳ ಸಂಖ್ಯೆಯಲ್ಲಿ ಕಡಿಗೊಳಿಸಿ ಶಾಲಾ, ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.
ಬೆಳಗಾವಿ ಸಾರಿಗೆ ವಿಭಾಗದಿಂದ ಅಂತರಾಜ್ಯ ದೂರದ ನಗರ ಪಟ್ಟಣಗಳಾದ ಠಾಣಾ, ಪೂಣಾ, ಬೊರಿವಲ್ಲಿ, ಔರಂಗಾಬಾದ್, ಲಾತೂರ, ರತ್ನಾಗಿರಿ, ವಿಶಾಲಗಡ, ಜ್ಯೋತಿಬಾ, ಪಂಡರಪೂರ, ಸಾಂಗಲಿ, ಆಜರಾ, ಚಂದಗಡ, ವೆಂಗುರ್ಲಾ, ಪಣಜಿ, ಹೈದ್ರಾಬಾದ ಮತ್ತು ವಿಜಯಪೂರ ಮಾರ್ಗದ ಒಟ್ಟು 28 ಸಾರಿಗೆಗಳನ್ನು ರದ್ದುಪಡಿಸಿ ವಿಭಾಗದ ವ್ಯಾಪ್ತಿಗೆ ಒಳಪಡುವ ಶಾಲಾ, ಕಾಲೇಜು ವಿಧ್ಯಾರ್ಥಿಗಳು ಮತ್ತು ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸಲು ಕ್ರಮ ಜರುಗಿಸಲಾಗಿದೆ. ಅಲ್ಲದೇ ವಿಧ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಸುವ ಮಾರ್ಗಗಳನ್ನು ಸ್ಟುಡೆಂಟ್ ಕಾರಿಡಾರ್‌ಗಳೆಂದು ಗುರುತಿಸಿ ಈ ಸ್ಥಳಗಳಲ್ಲಿ ಹೆಚ್ಚುವರಿ ಸಾರಿಗೆ ಸುತ್ತುಗಳನ್ನು ಅಳವಡಿಸಿ ಕಾರ್ಯಾಚರಣೆಗೆ ಕ್ರಮ ಜರುಗಿಸಲಾಗಿದೆ ಎಂದು ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.