ಸಾರಾಂಶ
ಗಪ್ಪಿ ಮೀನುಗಳು ತಮ್ಮ ರೋಮಾಂಚಕ ಬಣ್ಣಗಳು ಮತ್ತು ಶಾಂತಿಯುತ ಸ್ವಭಾವಕ್ಕೆ ಹೆಸರುವಾಸಿಯಾದ ಜನಪ್ರೀಯ ಸಿಹಿ ನೀರಿನ ಅಕ್ವೇರಿಯಂ ಮೀನುಗಳಾಗಿವೆ ಗಪ್ಪಿ ಮೀನುಗಳು ದಕ್ಷಿಣ ಅಮೇರಿಕಾದಲ್ಲಿ ಹೆಚ್ಚುವಾಸಿಸುತ್ತವೆ.
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಯಾವುದೇ ಗ್ರಾಮಗಳಲ್ಲಿ ಡೆಂಘೀ ಜ್ವರ ಕಾಣಿಸಿಕೊಳ್ಳದಂತೆ ಡೆಂಘೀ ನಿಯಂತ್ರಣಕ್ಕಾಗಿ ಸೊಳ್ಳೆ ಉತ್ಪತ್ತಿ ಸ್ಥಳಗಳನ್ನು ಗುರುತಿಸಿ ಗಪ್ಪಿ ಮೀನುಗಳನ್ನು ಬಿಟ್ಟು ನಾಶಪಡಿಸಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಮಹ್ಮದ ಗಫಾರ ಅಹೆಮದ ಹೇಳಿದರು.ಪಟ್ಟಣದ ಚಂದಾಪೂರ ನಗರದ ಗಂಗುನಾಯಕ ತಾಂಡಾದ ಬಳಿ ಇರುವ ತೆಗ್ಗುಪ್ರದೇಶದಲ್ಲಿ ನಿಂತ ನೀರಿನಲ್ಲಿ ಗಪ್ಪಿ ಮೀನುಗಳು ಬಿಟ್ಟು ಸುದ್ದಿಗಾರರೊಂದಿಗೆ ಮಾತನಾಡಿದರು.
ಗಪ್ಪಿ ಮೀನುಗಳು ತಮ್ಮ ರೋಮಾಂಚಕ ಬಣ್ಣಗಳು ಮತ್ತು ಶಾಂತಿಯುತ ಸ್ವಭಾವಕ್ಕೆ ಹೆಸರುವಾಸಿಯಾದ ಜನಪ್ರೀಯ ಸಿಹಿ ನೀರಿನ ಅಕ್ವೇರಿಯಂ ಮೀನುಗಳಾಗಿವೆ ಗಪ್ಪಿ ಮೀನುಗಳು ದಕ್ಷಿಣ ಅಮೇರಿಕಾದಲ್ಲಿ ಹೆಚ್ಚುವಾಸಿಸುತ್ತವೆ. ಮಿರಿಯಾಣ, ನಿಡಗುಂದಾ ಗಣಿಗಾರಿಕೆ ಪ್ರದೇಶಗಳಿದ್ದು ಅಲ್ಲಿನ ತಗ್ಗುಪ್ರದೇಶ ಕ್ವಾರಿಗಳಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತವೆ. ಇವುಗಳ ನಿಯಂತ್ರಣಕ್ಕಾಗಿ ಗಪ್ಪಿ ಮೀನುಗಳನ್ನು ಬಿಡಲಾಗುತ್ತಿದೆ ಎಂದು ಹೇಳಿದರು.ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಮಾತನಾಡಿ, ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ಸಂಗ್ರಹಣೆ ಆಗದಂತೆ ಎಚ್ಚರಿಕೆ ವಹಿಸಬೇಕು. ಗಪ್ಪಿ ಮೀನುಗಳನ್ನು ಬಿಡುವುದರಿಂದ ಸೊಳ್ಳೆ ಉತ್ಪತ್ತಿಯಾಗುವ ಮೊಟ್ಟೆಗಳನ್ನು ತಿನ್ನುವ ಮೂಲಕ ಸೊಳ್ಳೆ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಈ ಮೀನುಗಳು ಸುಮಾರು ೪ ವರ್ಷಗಳವರೆಗೆ ಜೀವಿಸಲಿವೆ. ಇದರಿಂದಾಗಿ ಯಾರಿಗೂ ಹಾನಿ ಸಂಭವಿಸುವುದಿಲ್ಲ ಎಂದು ಮಾಹಿತಿ ನೀಡಿದರು.
ತಾಪಂ ಅಧಿಕಾರಿ ಶಂಕರ ರಾಠೋಡ, ತಾಲೂಕು ಆರೋಗ್ಯಾಧಿಕಾರಿ ಡಾ. ಮಹ್ಮದ ಗಫಾರ ಅಹೆಮದ, ಮಕ್ಕಳ ತಜ್ಞ ಡಾ. ಸಂತೋಷ ಪಾಟೀಲ, ಕಂದಾಯ ನಿರೀಕ್ಷಕ ರವಿಕುಮಾರ ಪಾಟೀಲ ಇನ್ನಿತರಿದ್ದರು.