ಸಾರಾಂಶ
- ರಾಜಿ ಮೂಲಕ ಪ್ರಕರಣ ಇತ್ಯರ್ಥ ಗುರಿ: ನ್ಯಾ. ಮಹಾವೀರ ಮಾಹಿತಿ
- - -ದಾವಣಗೆರೆ: ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ ದೇಶಾದ್ಯಂತ 90 ದಿನಗಳ ಕಾಲ ಕೋರ್ಟ್‌ಗಳಲ್ಲಿ ಮಧ್ಯಸ್ಥಗಾರಿಕೆ ಅಭಿಯಾನ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ತಿಳಿಸಿದ್ದಾರೆ.
ಮಧ್ಯಸ್ಥಗಾರಿಕೆ ಅಭಿಯಾನದಲ್ಲಿ ಎಲ್ಲ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸುವಂತಹ ಮಹತ್ವದ ಇಚ್ಛೆ ಮತ್ತು ಗುರಿ ಹೊಂದಲಾಗಿದೆ. ಅಭಿಯಾನದಲ್ಲಿ ನುರಿತ ವಕೀಲರು ಮತ್ತು ನ್ಯಾಯಾಧೀಶರು ಭಾಗವಹಿಸಿ ಪಕ್ಷಗಾರರಿಗೆ ಸಂಧಾನಕಾರರಾಗಿ ಸಲಹೆ- ಸೂಚನೆಗಳನ್ನು ನೀಡಲಿದ್ದಾರೆ. ಸಂಧಾನದಲ್ಲಿ ಕನಿಷ್ಠ 10 ವರ್ಷ ವಕೀಲ ವೃತ್ತಿಯನ್ನು ಮಾಡಿ, ಅದಾದ ನಂತರ ಅವರು ಸಂಧಾನಕಾರರು ಎಂದು ನೇಮಕಗೊಂಡು ಕಾರ್ಯನಿರ್ವಹಿಸುವಂತಹ ವಕೀಲರಿಗೆ ಈಗಾಗಲೇ ಹಲವು ಹಂತದ ತರಬೇತಿ ನೀಡಲಾಗಿದೆ. ಸಂಧಾನ ಪ್ರಕ್ರಿಯೆಯಲ್ಲಿ ನ್ಯಾಯಾಧೀಶರು ಕೂಡ ಭಾಗವಹಿಸಲಿದ್ದಾರೆ. ಜನರ ಪ್ರಕರಣಗಳಿಗೆ ಸಂಬಂಧಪಟ್ಟಂತಹ ಮಾಹಿತಿಗಳನ್ನು ಕೊಡುತ್ತಾರೆ ಎಂದು ತಿಳಿಸಿದ್ದಾರೆ.ಪ್ರಕರಣಗಳ ಸಂಧಾನ ಪ್ರಕ್ರಿಯೆ ಸುಗಮವಾಗಿ ನಡೆಯಲು ಅನುಕೂಲ ಆಗುವಂತೆ ಸ್ಕೋರ್ ವಿಶೇಷ ಕೊಠಡಿಗಳನ್ನು ಮತ್ತು ಆಸನ ವ್ಯವಸ್ಥೆ ಮಾಡಲಾಗಿದೆ. ಪಕ್ಷಗಾರರು ಭೌತಿಕವಾಗಿ ಸಂಧಾನಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೆ ವೀಡಿಯೋ ಮೂಲಕ ಹಾಜರಾಗಬಹುದು. ಸಂಧಾನ ಪ್ರಕ್ರಿಯೆಗೆ ಯಾವುದೇ ಪಕ್ಷಕಾರರು ಯಾವುದೇ ಕಾರಣಕ್ಕೂ ಹಣ ಖರ್ಚು ಮಾಡುವಂತಿಲ್ಲ. ಅಭಿಯಾನಕ್ಕೆ ಅಗತ್ಯವಿರುವ ಎಲ್ಲ ಖರ್ಚು- ವೆಚ್ಚಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದಲೇ ಭರಿಸಲಾಗುತ್ತದೆ ಎಂದೂ ಮಾಹಿತಿ ನೀಡಿದ್ದಾರೆ.
ಎಲ್ಲ ವಕೀಲ ಬಾಂಧವರು ಮತ್ತೆ ವಿವಿಧ ಇಲಾಖೆ ಅಧಿಕಾರಿಗಳು ಅಭಿಯಾನಕ್ಕೆ ತಮ್ಮ ಸಹಕಾರಗಳನ್ನು ನೀಡಬೇಕು ಎಂದು ತಿಳಿಸಿದ್ದಾರೆ.- - -
-6ಕೆಡಿವಿಜಿ33: ಮಹಾವೀರ ಮ. ಕರೆಣ್ಣವರ್