ಕುರ್ನಾಡು ಶ್ರೀ ದತ್ತಾತ್ರೇಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಳೆ ವಿದ್ಯಾರ್ಥಿಗಳ ಆಶ್ರಯದಲ್ಲಿ ದೇರಳಕಟ್ಟೆಯ ಕಣಚೂರು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಶಿಬಿರ ಇತ್ತೀಚೆಗೆ ನೆರವೇರಿತು.
ಉಳ್ಳಾಲ: ಉಳ್ಳಾಲ ತಾಲೂಕು ಕುರ್ನಾಡು ಶ್ರೀ ದತ್ತಾತ್ರೇಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಳೆ ವಿದ್ಯಾರ್ಥಿಗಳ ಆಶ್ರಯದಲ್ಲಿ ದೇರಳಕಟ್ಟೆಯ ಕಣಚೂರು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಶಿಬಿರ ಇತ್ತೀಚೆಗೆ ನೆರವೇರಿತು.ಶ್ರೀ ದತ್ತಾತ್ರೆಯ ಯಕ್ಷಗಾನ ಮತ್ತು ಭಜನಾ ಮಂಡಳಿ ಅಧ್ಯಕ್ಷ ನಾಗರಾಜ್ ಭಟ್ ಕಟ್ಟೆಮಾರು ಅವರು ಆಯುರ್ವೇದ ಚಿಕಿತ್ಸಾ ಪದ್ಧತಿಯ ಮಹತ್ವ ತಿಳಿಸಿದರು.
ಕಣಚೂರು ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಕಾರ್ತಿಕ್ ಶೇಟ್ ಅವರು ವೈದ್ಯಕೀಯ ಶಿಬಿರ ಹಾಗೂ ಆಯುರ್ವೇದ ಚಿಕಿತ್ಸಾ ಪದ್ಧತಿಯ ಅವಶ್ಯಕತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳಾದ ಯೋಗೀಶ ಪೈ, ಸುಂದರ ದೇವಾಡಿಗ, ನಿತಿನ್ ಕುಮಾರ್ ಗಟ್ಟಿ, ಮೊಹಮ್ಮದ್ ಹನೀಫ್ ಎಂ.ಕೆ ಮಧ್ಯನಡ್ಕ ಶಾಲಾ ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷ ಮೋಹನ್ ದಾಸ್ ನಾಯಕ್, ಶಾಲಾ ಮುಖ್ಯ ಶಿಕ್ಷಕಿ ವಸಂತಿ ಉಪಸ್ಥಿತರಿದ್ದರು.ಶಾಲಾ ವಿದ್ಯಾರ್ಥಿನಿಯರಾದ ದೀಕ್ಷಾ ಹಾಗೂ ತ್ರಿಶಾ ಪ್ರಾರ್ಥಿಸಿದರು. ಹಳೆ ವಿದ್ಯಾರ್ಥಿ ರಂಜಿತ್. ಎಂ ನಿರೂಪಿಸಿದರು. ದೀಕ್ಷಿತಾ ಎಚ್. ಸ್ವಾಗತಿಸಿದರು. ದಿನೇಶ್ ಕೆ. ವಂದಿಸಿದರು.
ಊರ ಪರವೂರಿನ ಸುಮಾರು 76 ಜನರು ಉಚಿತ ತಪಾಸಣೆ ಹಾಗೂ ಉಚಿತ ಔಷಧದ ನೇರ ಪ್ರಯೋಜನ ಪಡೆದರು.