ಸಾಮಾನ್ಯ ಸದಸ್ಯತ್ವ ₹500, ವಿಶೇಷ ಸದಸ್ಯತ್ವ ₹5 ಸಾವಿರ, ಪ್ರೀಮಿಯಂ ಸದಸ್ಯತ್ವ ₹10 ಸಾವಿರ, ಅಜೀವ ಸದಸ್ಯತ್ವ ₹25 ಸಾವಿರ, ಪೋಷಕ ಸದಸ್ಯತ್ವ ₹50 ಸಾವಿರ ಹಾಗೂ ಮಹಾ ಪೋಷಕ ಸದಸ್ಯತ್ವ ಪಡೆಯಲು ₹1 ಲಕ್ಷ ನೀಡಬೇಕು.
ಪಾಂಡವಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಮಾದರ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಶಂಭೂನಹಳ್ಳಿ ರವಿಕುಮಾರ್ ಅಧ್ಯಕ್ಷತೆಯಲ್ಲಿ ಸದಸ್ಯತ್ವ ಅಭಿಯಾನ ಕುರಿತು ಸಭೆ ನಡೆಯಿತು. ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯ, ಜಿಲ್ಲಾ ಉಸ್ತುವಾರಿ ಎನ್.ಆರ್.ಚಂದ್ರಶೇಖರ್ ತಾಲೂಕು ಘಟಕದ ಸಮಿತಿ ನೇಮಕಾತಿ ಆದೇಶ ಪತ್ರವನ್ನು ವಿತರಿಸಿ ಮಾತನಾಡಿ, ಮಹಾಸಭಾದಿಂದ ರಾಜ್ಯಾದ್ಯಂತ ಸದಸ್ಯ ಅಭಿಯಾನ ಆರಂಭಿಸಲಾಗಿದೆ. ಆರು ವಿಧದ ಸದಸ್ಯತ್ವ ಪ್ರಕಾರಗಳಲ್ಲಿ ಮಹಾಸಭಾದ ಸದಸ್ಯತ್ವ ಪಡೆದುಕೊಳ್ಳಬಹುದು ಎಂದರು.
ಸಾಮಾನ್ಯ ಸದಸ್ಯತ್ವ ₹500, ವಿಶೇಷ ಸದಸ್ಯತ್ವ ₹5 ಸಾವಿರ, ಪ್ರೀಮಿಯಂ ಸದಸ್ಯತ್ವ ₹10 ಸಾವಿರ, ಅಜೀವ ಸದಸ್ಯತ್ವ ₹25 ಸಾವಿರ, ಪೋಷಕ ಸದಸ್ಯತ್ವ ₹50 ಸಾವಿರ ಹಾಗೂ ಮಹಾ ಪೋಷಕ ಸದಸ್ಯತ್ವ ಪಡೆಯಲು ₹1 ಲಕ್ಷ ನೀಡಬೇಕು ಎಂದು ತಿಳಿಸಿದರು.ಸಭೆಯಲ್ಲಿ ಮಹಾಸಭಾ ಉಪಾಧ್ಯಕ್ಷ ಬೀರಶೆಟ್ಟಹಳ್ಳಿ ಮಲ್ಲಿಕಾರ್ಜುನ, ಕಾರ್ಯದರ್ಶಿ ಚಿಕ್ಕಾಯಿರಹಳ್ಳಿ ಸಿ.ಎನ್.ರಾಜೇಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ಹಿರೋಡೆಬೀದಿ ಮಲ್ಲೇಶ್, ಬಸ್ತಿಹಳ್ಳಿ ಯೋಗೇಂದ್ರ, ರಾಗಿಮುದ್ದನಹಳ್ಳಿ ಆರ್.ಟಿ.ಕಾಳಯ್ಯ, ಸ್ವಾಮಿ, ಚಿಕ್ಕಾಯಿರಹಳ್ಳಿ ವಕೀಲ ಶಿವಯ್ಯ, ನರಹಳ್ಳಿ ಸ್ವಾಮಿ, ಹಿರೋಡೆಬೀದಿ ಶಶಿಕುಮಾರ್, ತುಕಾರಾಂ, ಪಟ್ಟಸೋಮನಹಳ್ಳಿ ಮಹದೇವ್, ವದೇಸಮುದ್ರ ಮೋಹನ್ ಕುಮಾರ್, ಮುಖಂಡರಾದ ಪಾಂಡವಪುರ ಹನುಮಯ್ಯ, ಮುರಳೀಧರ, ಕನ್ನಂಬಾಡಿ ನಿಂಗಯ್ಯ, ವದೇಸಮುದ್ರ ರವಿ, ನರಹಳ್ಳಿ ದಾಸಯ್ಯ, ರಾಗಿಮುದ್ದನಹಳ್ಳಿ ವೆಂಕಟೇಶ್, ಮಂಜು, ಹೊಸಕನ್ನಂಬಾಡಿ ಮಂಜು, ಮನೋಜ್ ಸೇರಿ ಇತರರಿದ್ದರು.