ಸಾರಾಂಶ
ಕಾಂಗ್ರೆಸ್ ಪಕ್ಷಕ್ಕೆ ಮೇಕಾ ಸೂರ್ಯನಾರಾಯಣರು ಶಕ್ತಿಯಾಗಿದ್ದರು. ಇಂತಹ ಶಕ್ತಿಯನ್ನು ಜಿಲ್ಲಾ ಕಾಂಗ್ರೆಸ್ ಕಳೆದುಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ದಾವಣಗೆರೆಯಲ್ಲಿ ಹೇಳಿದ್ದಾರೆ.
- 25ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ । ಪುತ್ಥಳಿ ಅನಾವಣಗೊಳಿಸಿದ ಸಚಿವ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾಂಗ್ರೆಸ್ ಪಕ್ಷಕ್ಕೆ ಮೇಕಾ ಸೂರ್ಯನಾರಾಯಣರು ಶಕ್ತಿಯಾಗಿದ್ದರು. ಇಂತಹ ಶಕ್ತಿಯನ್ನು ಜಿಲ್ಲಾ ಕಾಂಗ್ರೆಸ್ ಕಳೆದುಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.ತಾಲೂಕಿನ ಕಡ್ಲೆಬಾಳು ಗ್ರಾಮದ ಶ್ರೀ ಮಧ್ವಾಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಿ. ಮೇಕಾ ಸೂರ್ಯನಾರಾಯಣ ಅವರ 25ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.
ಮೇಕಾ ಸೂರ್ಯನಾರಾಯಣ ಉತ್ತಮ ಅನುಭವಿ ರಾಜಕಾರಣಿಯಾಗಿದ್ದರು. ಜನರಿಗೆ ಹತ್ತಿರವಾಗಿ ಬದುಕು ನಡೆಸಿದ ಅವರು, ಬಡವರು ಹಾಗೂ ಸಮಾಜದಲ್ಲಿನ ಎಲ್ಲರ ಸಮಸ್ಯೆಗಳಿಗೆ ಕಿವಿಯಾಗಿ ಸ್ಪಂದಿಸುತ್ತಿದ್ದರು ಮತ್ತು ಪಕ್ಷದಲ್ಲಿ ಸ್ನೇಹಜೀವಿಯಾಗಿ ಬೆರೆಯುತ್ತಿದ್ದರು ಎಂದರು.ಈ ಭಾಗದ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಸಾಕ್ಷಿಯಾಗಿದ್ದಾರೆ. ಬಡವರು ಹಾಗೂ ನಿರಾಶ್ರಿತರಿಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮಗ ಮೇಕಾ ಮುರಳಿಕೃಷ್ಣ ಇದ್ದಾರೆ. ಮೇಕಾ ಸೂರ್ಯನಾರಾಯಣ ಅವರ ತಂಡ ಮಾಜಿ ಮಂತ್ರಿ ನಾಗಮ್ಮ ಕೇಶವಮೂರ್ತಿ ಅವರೊಂದಿಗೆ ಇದ್ದು, ಪ್ರತಿ ಚುನಾವಣೆಯನ್ನೂ ಅಚ್ಚುಕಟ್ಟಾಗಿ ಎದುರಿಸಿ, ಗೆಲುವಿಗಾಗಿ ಶ್ರಮಿಸುತ್ತಿತ್ತು ಎಂದು ತಿಳಿಸಿದರು.
ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೇಕಾ ಮುರಳೀಕೃಷ್ಣ, ಮೇಕಾ ಸತ್ಯನಾರಾಯಣ ಸಹೋದರರು, ಮಾಜಿ ಸಚಿವ ಎಚ್. ಆಂಜನೇಯ, ಶಾಸಕ ಕೆ.ಎಸ್. ಬಸವಂತಪ್ಪ, ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಎನ್.ಜಯದೇವ ನಾಯ್ಕ, ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್, ಕೆಪಿಸಿಸಿ ಪ್ರಧಾನ ಕಾರ‍್ಯದರ್ಶಿ ಡಿ.ಬಸವರಾಜ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ, ಪಂಚಮಸಾಲಿ ಸಮಾಜದ ಬಿ.ಸಿ.ಉಮಾಪತಿ, ಮಾಜಿ ಶಾಸಕ ಬಿ.ಎಚ್. ತಿಪ್ಪಾರೆಡ್ಡಿ, ರಾಘವೇಂದ್ರ ನಾಯಕ್, ವೇಣುಗೋಪಾಲ್ ರೆಡ್ಡಿ, ಆರ್.ಎಸ್. ಶೇಖರಪ್ಪ, ಬಿ.ಕೆ.ಪರಶುರಾಮ್, ಎಚ್.ಡಿ.ಬಸಮ್ಮ, ನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ, ಡಾ.ಉದಯಶಂಕರ್ ಒಡೆಯರ್, ಎಸ್.ಮಲ್ಲಿಕಾರ್ಜುನ್, ರುದ್ರೇಶ್, ಎಚ್.ಎಂ.ರುದ್ರಮುನಿಸ್ವಾಮಿ ಇತರರು ಉಪಸ್ಥಿತರಿದ್ದರು.- - - -28ಕೆಡಿವಿಜಿ36:
ದಾವಣಗೆರೆಯ ಕಡ್ಲೆಬಾಳು ಗ್ರಾಮದಲ್ಲಿ ದಿ. ಮೇಕಾ ಸೂರ್ಯನಾರಾಯಣರವರ 25ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಪ್ರತಿಮೆಯನ್ನು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅನಾವರಣಗೊಳಿಸಿದರು.