ಸಾರಾಂಶ
ಒಣ, ಹಸಿ ಮೇವಿನೊಂದಿಗೆ ಖನಿಜ ಮಿಶ್ರಣ ಪಶು ಆಹಾರ, ಗೋಧಾರ ಶಕ್ತಿ ಪುಡಿ ನೀಡಿ. ಮಿಶ್ರತಳಿ ರಾಸುಗಳು ಬಿಸಿಲ ಬೇಗೆ ತಡೆಯಲಾರವು. ನೆರಳಿನಲ್ಲಿ ಕಟ್ಟಿಹಾಕಿ ಕಾಲುಬಾಯಿ ರೋಗ, ರೋಗದಂತಹ ಯಾವುದೇ ರೋಗಕಂಡರೂ ತಡ ಮಾಡದೆ ಆರೋಗ್ಯ ಪರೀಕ್ಷೆ, ಚಿಕಿತ್ಸೆ ಮಾಡಿಸಿ ಒಕ್ಕೂಟದಲ್ಲಿ ಸಿಗುವ ಸವತ್ತುಗಳನ್ನು ಹೈನುಗಾರರಿಗೆ ತಿಳಿಸಿ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸಂಘದಲ್ಲಿ ನಡೆಯುವ ಸಭೆಗೆ ಕಡ್ಡಾಯವಾಗಿ ಸದಸ್ಯರು, ಷೇರುದಾರರು ಹಾಜರಾಗಿ ತಮ್ಮ ಪ್ರಾತಿನಿಧಿಕತ್ವದ ಹಕ್ಕನ್ನು ತೋರಿಸಿ ಎಂದು ಮನ್ಮುಲ್ ನಿರ್ದೇಶಕ ಡಾಲುರವಿ ತಿಳಿಸಿದರು.ಗಂಗೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಭೆಯಲ್ಲಿ ಹೈನುಗಾರಿಕೆಯಲ್ಲಿ ಸಮಸ್ಯೆ ಇದ್ದಲ್ಲಿ ಸದಸ್ಯರು ಒಮ್ಮತದಿಂದ ಚರ್ಚಿಸಿ ಸಂಘದ ಅಭಿವೃದ್ಧಿಗೆ ಆರೋಗ್ಯಕರ ಸಲಹೆ ನೀಡಿ ಎಂದರು.
ರಾಸುಗಳಿಗೆ ವಿಮೆ ಮಾಡಿಸಿ, ಶೇ.75ರಷ್ಟು ಹಣವನ್ನುಒಕ್ಕೂಟ ಭರಿಸಲಿದೆ. ಹಾಲಿನ ಡಿಗ್ರಿ ಆಸೆಗಾಗಿ ಹಾಲಿಗೆ ಯೂರಿಯಾ, ಸಕ್ಕರೆ, ರಾಸಾಯನಿಕ ವಸ್ತು ಮಿಶ್ರಣ ಮಾಡುವುದು ಶಿಕ್ಷಾರ್ಹ ಅಪರಾಧ. ರಾಸುಗಳಿಗೆ ಉತ್ತಮ ಆಹಾರ ಅವಶ್ಯವಾಗಿದೆ ಎಂದರು.ಒಣ, ಹಸಿ ಮೇವಿನೊಂದಿಗೆ ಖನಿಜ ಮಿಶ್ರಣ ಪಶು ಆಹಾರ, ಗೋಧಾರ ಶಕ್ತಿ ಪುಡಿ ನೀಡಿ. ಮಿಶ್ರತಳಿ ರಾಸುಗಳು ಬಿಸಿಲ ಬೇಗೆ ತಡೆಯಲಾರವು. ನೆರಳಿನಲ್ಲಿ ಕಟ್ಟಿಹಾಕಿ ಕಾಲುಬಾಯಿ ರೋಗ, ರೋಗದಂತಹ ಯಾವುದೇ ರೋಗಕಂಡರೂ ತಡ ಮಾಡದೆ ಆರೋಗ್ಯ ಪರೀಕ್ಷೆ, ಚಿಕಿತ್ಸೆ ಮಾಡಿಸಿ ಒಕ್ಕೂಟದಲ್ಲಿ ಸಿಗುವ ಸವತ್ತುಗಳನ್ನು ಹೈನುಗಾರರಿಗೆ ತಿಳಿಸಿ ಎಂದು ಸಲಹೆ ನೀಡಿದರು.
ಮಿಶ್ರತಳಿ ರಾಸು ಬಲು ಸೂಕ್ಷ್ಮವಾಗಿದೆ. ನೆರಳಿನಲ್ಲಿ ಕಟ್ಟಿಹಾಕಿ ಆಗಿಂದಾಗ್ಗೆ ರಾಸುಗಳ ತಪಾಸಣೆ, ಚಿಕಿತ್ಸೆ ಮಾಡಿಸಲು ಮರೆಯದಬಾರದು ಕಿವಿಮಾತು ಹೇಳಿದರು.ಈ ವೇಳೆ ಮಾರ್ಗ ವಿಸ್ತರಣಾಧಿಕಾರಿ ಬಸವರಾಜು, ಗುರುರಾಜ್ ಸುರಗಿಹಳ್ಳಿ, ಕಾರ್ಯದರ್ಶಿ ಎಸ್.ಸಿ.ಚಂದ್ರಕಲಾ, ಆಡಳಿತಾಧಿಕಾರಿ ಗುರುರಾಜ್ ಸುರಗಿಹಳ್ಳಿ ಭಾಗವಹಿಸಿದ್ದರು.