ಜನವಾದಿ ಸಂಘಟನೆ ರಾಜ್ಯ ಸಮ್ಮೇಳನಕ್ಕೆ ಸಿಂಧನೂರಿಗೆ ತೆರಳಿದ ಸದಸ್ಯರು

| Published : Aug 30 2025, 01:00 AM IST

ಜನವಾದಿ ಸಂಘಟನೆ ರಾಜ್ಯ ಸಮ್ಮೇಳನಕ್ಕೆ ಸಿಂಧನೂರಿಗೆ ತೆರಳಿದ ಸದಸ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ಜನಪರ ಹೋರಾಟಗಳ ಮೂಲಕ ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿರುವ ಜನವಾದಿ ಮಹಿಳಾ ಸಂಘಟನೆಯು ಮಹಿಳೆಯರ ಸರ್ವಾಂಗೀಣ ಪ್ರಗತಿಗೆ ದುಡಿಯುತ್ತಿದೆ.

ಮಳವಳ್ಳಿ: ರಾಯಚೂರಿನ ಸಿಂಧನೂರಿನಲ್ಲಿ ಆ.30ರಿಂದ ಮೂರು ದಿನಗಳ ಕಾಲ ನಡೆಯುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 12ನೇ ರಾಜ್ಯ ಸಮ್ಮೇಳನಕ್ಕೆ ತಾಲೂಕಿನಿಂದ 20ಕ್ಕೂ ಅಧಿಕ ಸದಸ್ಯರು ತೆರಳಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ ಸದಸ್ಯರು, ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ತೆರಳಿದರು. ಈ ವೇಳೆ ಸಮ್ಮೇಳನದ ಯಶಸ್ಸಿಗೆ ಘೋಷಣೆ ಕೂಗುತ್ತಾ ಜೈಕಾರ ಹಾಕಿದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುಶೀಲಾ ಮಾತನಾಡಿ, ಹಲವು ಜನಪರ ಹೋರಾಟಗಳ ಮೂಲಕ ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿರುವ ಜನವಾದಿ ಮಹಿಳಾ ಸಂಘಟನೆಯು ಮಹಿಳೆಯರ ಸರ್ವಾಂಗೀಣ ಪ್ರಗತಿಗೆ ದುಡಿಯುತ್ತಿದೆ ಎಂದರು. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಮಹಿಳಾ ಸಂಘಟನೆ ನಡೆದು ಬಂದ ದಾರಿಯ ರೂಪುರೇಷವನ್ನು ಸಿದ್ಧಪಡಿಸುವ ಕಾರ್ಯ ಮಾಡುವ ಉದ್ದೇಶದಿಂದ ರಾಯಚೂರಿನ ಸಿಂಧನೂರಿನಲ್ಲಿ ಆ.30, 31 ಮತ್ತು ಸೆ.1ರಂದು ರಾಜ್ಯ ಮಟ್ಟದ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಜಿಲ್ಲಾ ಘಟಕದ ಅಧ್ಯಕ್ಷೆ ಲತಾ, ತಾಲೂಕು ಘಟಕದ ಅಧ್ಯಕ್ಷೆ ಜಯಶೀಲಾ, ಬಿಸಿಯೂಟ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಹದೇವಮ್ಮ, ಮುಖಂಡರಾದ ಪದ್ಮಾ, ಸುಂದನಮ್ಮ ಸೇರಿ 20ಕ್ಕೂ ಅಧಿಕ ಮಂದಿ ತೆರಳಿದ್ದರು.