ವಕೀಲರ ಸಂರಕ್ಷಣಾ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರದೇ ವಕೀಲರು ತಮ್ಮ ಕಕ್ಷಿದಾರರ ಹಿತ ಕಾಯಲು ಹಿನ್ನಡೆ ಉಂಟಾಗುತ್ತದೆ.

ಹಿರೇಕೆರೂರು: ವಕೀಲರ ಮೇಲೆ ನಡೆಯುತ್ತಿರುವ ಸರಣಿ ಹಲ್ಲೆಯನ್ನು ಖಂಡಿಸಿ ಹಾಗೂ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ನ್ಯಾಯವಾದಿಗಳ ಸಂಘದ ವತಿಯಿಂದ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂತಿಮಠ, ಬೆಂಗಳೂರಿನ ನ್ಯಾಯವಾದಿ ವಕೀಲ ಮಂಜುನಾಥ ಅವರ ಕೊಲೆಯಾಗಿದ್ದು, ಹಾಗೂ ವೆಂಕಟರಮಣ ಸಣ್ಣಕ್ಕಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ರಾಜ್ಯದಲ್ಲಿ ವಕೀಲರ ಮೇಲೆ ಈ ತರಹ ಪದೇ ಪದೇ ಹಲ್ಲೆಗಳು ನಡೆಯುತ್ತಿದ್ದರೂ, ಯಾವುದೇ ರೀತಿಯ ಕಠಿಣ ಕಾನೂನು ಕ್ರಮ ಜರುಗಿಸಿರುವುದಿಲ್ಲ. ಹಾಗೂ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರದೇ ವಕೀಲರು ತಮ್ಮ ಕಕ್ಷಿದಾರರ ಹಿತ ಕಾಯಲು ಹಿನ್ನಡೆ ಉಂಟಾಗುತ್ತದೆ. ಕಾರಣ ವಕೀಲರ ಮೇಲೆ ನಡೆಯುತ್ತಿರುವ ಮಾರಣಾಂತಿಕ ಹಲ್ಲೆಯನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರಕ್ಕೆ ಸೂಕ್ತ ಆದೇಶ ಮಾಡಬೇಕು ಎಂದು ಮನವಿ ಮಾಡಿದರು.

ವಕೀಲರ ಸಂಘದ ಉಪಾಧ್ಯಕ್ಷ ಎಸ್.ಆರ್.ಅಂಗಡಿ, ಪ್ರಧಾನ ಕಾರ್ಯದರ್ಶಿ ನಟರಾಜ ಪಾಟೀಲ, ಸಹ ಕಾರ್ಯದರ್ಶಿ ವಿ.ಸಿ.ಮುತ್ತಗಿ, ವಕೀಲರಾದ ಬಿ.ಎಂ.ಹೊಳಿಯಪ್ಪನವರ, ಎಸ್.ಬಿ.ತಿಪ್ಪಣ್ಣನವರ, ಬಿ.ಎನ್.ಬಣಕಾರ, ಬಿ.ಜಿ.ಪಾಟೀಲ, ಎಸ್.ಆರ್.ಲಿಂಗಾಪುರ, ಪಿಎಚ್.ಪಾಟೀಲ, ಎಂ.ಬಿ.ಪಾಟೀಲ, ಎ.ಎ.ಎಲಿವಾಳ, ಎಸ್.ಪಿ.ಕೆರೂಡಿ, ದೀಪಕ ಜವಳಿ, ದುರಗೇಶ ತಿರಕಪ್ಪನವರ, ಎಸ್.ಎನ್.ಕಡೇಮನಿ, ಪ್ರಕಾಶ ಉಪ್ಪಾರ, ಎಚ್.ಎಫ್. ವಡ್ಡರ, ಲಿಂಗರಾಜ ಮಾಯಕರ, ಆರ್.ವಿ.ಮರಿಗೌಡ್ರ, ಡಿ.ಎಸ್.ಆರ್ಕಾಚಾರಿ, ಎಸ್.ಪಿ.ಹಿತ್ಲಳ್ಳಿ, ಹಾಲೇಶ ಆರೀಕಟ್ಟಿ, ಗುರುರಾಜ ಕಡದಕಟ್ಟಿ, ನಾಗರಾಜ ಹುಲ್ಲತ್ತಿ, ಜಿ.ಎಸ್.ಪಾಟೀಲ, ವಿಜಯಕುಮಾರ ನಂದಿಹಳ್ಳಿ, ಎಸ್.ಬಿ.ಗೌಡ್ರ, ಸುಮಂತ ಪಾಟೀಲ, ಹನುಮಂತ ಉಜನೀಪುರ, ಎಂ.ಎನ್.ಮಾಸೂರ, ಎನ್.ಕೆ.ಹುಲ್ಲತ್ತಿ, ಶಶಾಂಕ ಹಳ್ಳೂರ. ಎಂ.ಬಿ.ತಿಳವಳ್ಳಿ, ಎಂ.ಪಿ.ಗೊಂದಳಿ, ಗೌರಮ್ಮ ಬಣಕಾರ, ಪವಿತಾ ಪಾಟೀಲ, ಟ.ಎ.ಮಾಳಗಿ, ಸ್ನೇಹಾ ಬಾಸೂರ, ಎನ್.ಎಸ್.ಉಜನೀಪುರ ಸೇರಿದಂತೆ ವಕೀಲರು ಇದ್ದರು.