ಸತ್ಯಾಂಶವನ್ನು ಅವರಿಯದ ವಡ್ಡರ ಸಮಾಜದವರು ಉಗ್ರಪ್ಪನವರ ಮೇಲೆ ಇಲ್ಲದ ಆರೋಪಗಳನ್ನು ಮಾಡುವ ಮೂಲಕ ಅವರನ್ನು ಅವಮಾನಿಸುವ ಕೆಲಸ

ನವಲಗುಂದ: ಶಿವಮೊಗ್ಗದಲ್ಲಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರ ಕಾರಿಗೆ ಘೆರಾವ್‌ ಹಾಕಿರುವುದನ್ನು ಖಂಡಿಸಿ ತಾಲೂಕು ವಾಲ್ಮಿಕ ಸಮಾಜದಿಂದ ಶುಕ್ರವಾರ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ತಾಲೂಕು ಅಧ್ಯಕ್ಷ ಸುಭಾಸ ದುಬ್ಬರಮಟ್ಟಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರವಿದ್ದಾಗ ಉಗ್ರಪ್ಪನವರು ಹಲವಾರು ಸದನ ಸಮಿತಿಗಳ ಅಧ್ಯಕ್ಷರಾಗಿ ಸರ್ಕಾರಕ್ಕೆ ವರದಿ ನೀಡಿದ್ದಾರೆ.

ಸತ್ಯಾಂಶವನ್ನು ಅವರಿಯದ ವಡ್ಡರ ಸಮಾಜದವರು ಉಗ್ರಪ್ಪನವರ ಮೇಲೆ ಇಲ್ಲದ ಆರೋಪಗಳನ್ನು ಮಾಡುವ ಮೂಲಕ ಅವರನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದು, ಸರ್ಕಾರ ಈ ಕೂಡಲೇ ಮದ್ಯಸ್ಥಿಕೆ ವಹಿಸಿ ಸಮಾಜಗಳ ಮದ್ಯ ಸಂಘರ್ಷಗಳು ಏರ್ಪಡದಂತೆ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ವಾಲ್ಮೀಕಿ ಸಮಾಜದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಶಿವಾನಂದ ತಳವಾರ, ಮಾರುತಿ ಮರಡ್ಡಿ, ಅಮರಪ್ಪ ಅಮ್ಮಣ್ಣವರ, ದೇವರಾಜ ಸಚಿದೇಣ್ಣವರ, ಶಿವಾನಂದ ಬೆಳಹಾರ, ಬಸವರಾಜ ಹಾದಿಮನಿ, ಜಗದೀಶ ಗುಜ್ಜಳ, ರಾಮಣ್ಣ ಕೊಪ್ಪದ, ಉಡಚಪ್ಪ ಜಾಲಕ್ಕನವರ ಸೇರಿ ಹಲವರಿದ್ದರು.