ಸಾರಾಂಶ
ಲಕ್ಕವಳ್ಳಿ ಹೋಬಳಿಯ ಸೋಂಪುರ ಗ್ರಾಮದ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಶ್ರೀ ಪ್ರಸನ್ನ ಸೋಮೇಶ್ವರ ದೇವರಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ಸಲ್ಲಿಸಲಾಯಿತು ಎಂದು ದೇವಾಲಯದ ಮಾಜಿ ಧರ್ಮದರ್ಶಿ ಸಮಿತಿಯ ಸದಸ್ಯರಾದ ಎಲ್ ಟಿ ಹೇಮಣ್ಣ ತಿಳಿಸಿದ್ದಾರೆ
ತರೀಕೆರೆ: ಲಕ್ಕವಳ್ಳಿ ಹೋಬಳಿಯ ಸೋಂಪುರ ಗ್ರಾಮದ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಶ್ರೀ ಪ್ರಸನ್ನ ಸೋಮೇಶ್ವರ ದೇವರಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ಸಲ್ಲಿಸಲಾಯಿತು ಎಂದು ದೇವಾಲಯದ ಮಾಜಿ ಧರ್ಮದರ್ಶಿ ಸಮಿತಿಯ ಸದಸ್ಯರಾದ ಎಲ್ ಟಿ ಹೇಮಣ್ಣ ತಿಳಿಸಿದ್ದಾರೆ
ಶಿವರಾತ್ರಿ ಹಬ್ಬದ ಅಂಗವಾಗಿ ನಡೆದ ಪೂಜೆಗಳ ಕೈಂಕರ್ಯಗಳಲ್ಲಿ ದೇವಾಲಯದ ಮುಖ್ಯ ಅರ್ಚಕರು ಹಾಗೂ ಪುರೋಹಿತರು ತಂಡದೊಂದಿಗೆ ದೇವಾಲಯದ ದಡದಲ್ಲಿ ಹರಿಯುತ್ತಿರುವ ಭದ್ರಾ ಹೊಳೆಯಲ್ಲಿ ಪುಣ್ಯಕಾಲದಲ್ಲಿ ನದಿಯಲ್ಲಿ ಗಂಗೆಯ ಪೂಜೆಯನ್ನು ಸಲ್ಲಿಸಿ ನಂತರ ನದಿಯ ಗಂಗೆಯನ್ನು ವಾದ್ಯ ಗೋಷ್ಠಿ ಮೂಲಕ ದೇವಾಲಯಕ್ಕೆ ತಂದು ಶ್ರೀ ಸೋಮೇಶ್ವರ ದೇವರಿಗೆ ಮಹಾಭಿಷೇಕ, ಕುಂಕಮಾರ್ಚನೆ ಮಾಡಿ ವಿವಿಧ ಪೂಜಾ ಕೈಂಕರ್ಯಗಳು ನೇರವೇರಿಸಿ ವಿವಿಧ ಹೂವುಗಳಿಂದ ಅಲಂಕರಿಸಿ ನಂತರ ಮಹಾಮಂಗಳಾರತಿ ನಡೆಯಿತು,ಈ ಸಂದರ್ಭದಲ್ಲಿ ಲಕ್ಕವಳ್ಳಿ, ಹಲಸೂರು, ಕೆಸರು ಕೊಪ್ಪ ಹಾಗೂ ಸೊಂಪುರ ಗ್ರಾಮದ ಧಾರ್ಮಿಕ ಮುಖಂಡರು ಹಾಗೂ ಭಕ್ತಾದಿಗಳು ಪಾಲ್ಗೊಂಡು ಶ್ರೀದೇವರ ಕೃಪೆಗೆ ಪಾತ್ರರಾದರು. ನಂತರ ಶ್ರೀ ಸೋಮೇಶ್ವರ ದೇವರಿಗೆ ಶಾಸ್ತ್ರೋಕ್ತವಾಗಿ ವಿವಿಧ ಪೂಜಾಗಳ ಮುಖ್ಯ ಅರ್ಚಕರಿಂದ ಭಕ್ತಾದಿಗಳಿಗೆ ಧಾರ್ಮಿಕ ಸಂಸ್ಕೃತಿಯನ್ನು ಇತಿಹಾಸದಲ್ಲಿ ನಡೆದು ಬಂದ ಪುರಾಣ ತಿಳಿಸಿದರು.
ಲಕ್ಕವಳ್ಳಿಯ ಸುರೇಶ್ ಹೊಯ್ಸಳ, ಶಿವಯೋಗಿ, ಹರೀಶ್, ಬಾಲರಾಜ್, ಸತೀಶ್ ಯಾದವ್ ತರೀಕೆರೆಯ ಶಿವಣ್ಣ, ಕೆಸರುಕೊಪ್ಪದ ಜಯರಾಂ ಹಾಗೂ ಕರಕುಚ್ಚಿಯ ಗ್ರಾಮಸ್ಥರು ಭಾಗವಹಿಸಿದ್ದರು.