ಪುರುಷರು ಮಹಿಳೆಯರ ವೇಷಧರಿಸಿ ಮಳೆಗಾಗಿ ಸಾಮೂಹಿಕ ಪ್ರಾಥನೆ

| Published : Sep 16 2025, 12:03 AM IST

ಸಾರಾಂಶ

ಪುರುಷರು ಮಹಿಳೆಯರ ವೇಷಧರಿಸಿ ಗಂಡ ಹೆಂಡತಿ ಮಾದರಿ ರಾಗಿ ಅಂಬಲಿ ಹಿಡಿದು ಗ್ರಾಮದಲ್ಲೆಲ್ಲ ಕತ್ತೆ ಹಾಗೂ ಜಾನುವಾರುಗಳ ಮೆರವಣಿಗೆ ಮಾಡುವ ಮೂಲಕ ಮಳೆಗಾಗಿ ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿದ ಘಟನೆ ಶಾಗ್ಯ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ, ಹನೂರು

ಪುರುಷರು ಮಹಿಳೆಯರ ವೇಷಧರಿಸಿ ಗಂಡ ಹೆಂಡತಿ ಮಾದರಿ ರಾಗಿ ಅಂಬಲಿ ಹಿಡಿದು ಗ್ರಾಮದಲ್ಲೆಲ್ಲ ಕತ್ತೆ ಹಾಗೂ ಜಾನುವಾರುಗಳ ಮೆರವಣಿಗೆ ಮಾಡುವ ಮೂಲಕ ಮಳೆಗಾಗಿ ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿದ ಘಟನೆ ಶಾಗ್ಯ ಗ್ರಾಮದಲ್ಲಿ ನಡೆದಿದೆ.

ಮಳೆಗಾಗಿ ಶಾಗ್ಯ ಗ್ರಾಮದಲ್ಲಿ ವಿಶಿಷ್ಟ ಆಚರಣೆ ಸಾಂಪ್ರದಾಯದಂತೆ ಮಳೆ ಇಲ್ಲದೆ ಕಂಗಾಲಾಗಿರುವ ಗ್ರಾಮಸ್ಥರು ರೈತರು, ತಾಲೂಕಿಗೆ ಮಳೆ ಬೆಳೆಯಾಗಲು ಮಳೆರಾಯನನ್ನು ಪ್ರಾರ್ಥಿಸಿ, ಪುರುಷ ಮಹಿಳೆ ವೇಷ ಧರಿಸಿ ಪುರುಷನೋರ್ವ ನೇಗಿಲು ಹೊತ್ತು ಮಹಿಳೆಯ ವೇಷದಾರಿ ಪುರುಷ ಸಹ ಮಡಿಕೆಯಲ್ಲಿ ರಾಗಿ ಅಂಬಲಿ ಹಿಡಿದು ಗ್ರಾಮದ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ಮಾಡಿ ಗ್ರಾಮಸ್ಥರಿಗೆ ಹಂಬಲಿ ನೀಡುವ ಮೂಲಕ ಮಳೆಗಾಗಿ ಪ್ರಾರ್ಥನೆ ಗಮನ ಸೆಳೆಯಿತು.ಉಯ್ಯೋ ಉಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ ಉಯ್ಯೋ ಉಯ್ಯೋ ಮಳೆರಾಯ ಮಾವಿನ ತೋಟಕ್ಕೆ ನೀರಿಲ್ಲ ಎಂದು ಗ್ರಾಮದ ಬಡಾವಣೆಗಳಲ್ಲಿ ವಿವಿಧ ವೇಷಧಾರಿಗಳು ಮಳೆರಾಯನನ್ನು ಪ್ರಾರ್ಥನೆ ಮಾಡುವ ಮೂಲಕ ಶಾಗ್ಯ ಗ್ರಾಮದಲ್ಲಿ ಸಾಮೂಹಿಕವಾಗಿ ಎಲ್ಲಾ ಸಮುದಾಯದ ನಿವಾಸಿಗಳು ವಿಶಿಷ್ಟ ಆಚರಣೆ ಮಾಡುವ ಮೂಲಕ ಮಳೆರಾಯನನ್ನು ಪ್ರಾರ್ಥಿಸಿದ್ದಾರೆ.