ಮನುಷ್ಯನಿಗೆ ಮಾನಸಿಕ ಆರೋಗ್ಯವು ಅತ್ಯವಶ್ಯಕ

| Published : Oct 14 2024, 01:18 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮನುಷ್ಯನಿಗೆ ಮಾನಸಿಕ ಆರೋಗ್ಯವು ಅತ್ಯವಶ್ಯಕವಾಗಿದ್ದು, ಒತ್ತಡರಹಿತ ಅಥವಾ ಆರೋಗ್ಯಕರವಾದ ದಿನಚರಿ ಮತ್ತು ಸೂಕ್ತ ಚಿಕಿತ್ಸೆ ಮೂಲಕ ಪಡೆಯುವುದರೊಂದಿಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ಬಿಎಲ್‌ಡಿಇ ಆಸ್ಪತ್ರೆಯ ಮನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ, ಮನೋಲಯ ಆಸ್ಪತ್ರೆಯ ಮುಖ್ಯಸ್ಥ ಡಾ.ಮನೋವಿಜಯ ಬ.ಕಳಸಗೊಂಡ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮನುಷ್ಯನಿಗೆ ಮಾನಸಿಕ ಆರೋಗ್ಯವು ಅತ್ಯವಶ್ಯಕವಾಗಿದ್ದು, ಒತ್ತಡರಹಿತ ಅಥವಾ ಆರೋಗ್ಯಕರವಾದ ದಿನಚರಿ ಮತ್ತು ಸೂಕ್ತ ಚಿಕಿತ್ಸೆ ಮೂಲಕ ಪಡೆಯುವುದರೊಂದಿಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ಬಿಎಲ್‌ಡಿಇ ಆಸ್ಪತ್ರೆಯ ಮನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ, ಮನೋಲಯ ಆಸ್ಪತ್ರೆಯ ಮುಖ್ಯಸ್ಥ ಡಾ.ಮನೋವಿಜಯ ಬ.ಕಳಸಗೊಂಡ ಹೇಳಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಜಯಪುರ, ಯುವ ರೆಡ್ ಕ್ರಾಸ್‌ ಘಟಕ, ಮನಃಶಾಸ್ತ್ರ ವಿಭಾಗ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ ವಿಜಯಪುರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-2024 ಹಾಗೂ ಮದ್ಯಪಾನ ಮತ್ತು ಮದ್ದಿನ ವ್ಯಸನದ ದುಷ್ಪರಿಣಾಮಗಳ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದೃಢ ಸಮಾಜಕ್ಕೆ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯ ಮುಖ್ಯವಾಗಿರುತ್ತದೆ. ದೈಹಿಕ ಆರೋಗ್ಯಕ್ಕಾಗಿ ಯಾವ ರೀತಿ ನಾವು ಕಾಳಜಿ, ವಿಶ್ರಾಂತಿ ಮತ್ತು ಚಿಕಿತ್ಸೆ ಪಡೆಯುತ್ತೇವೋ ಹಾಗೆಯೇ ಮಾನಸಿಕ ಆರೋಗ್ಯಕ್ಕೂ ಇದೆಲ್ಲವುದರ ಅವಶ್ಯಕತೆ ಇದೆ ಎಂಬುವುದು ಅರಿತಿರುವುದು ತುಂಬಾ ಕಡಿಮೆ. ಮಾನಸಿಕ ಖಾಯಿಲೆಗೂ ಚಿಕಿತ್ಸೆ ಇದೆ ಎಂಬುವುದು ಮತ್ತು ಇತ್ತೀಚಿನ ದಿನಗಳಲ್ಲಿ ಶಾಲಾ, ಕಾಲೇಜು ಮಕ್ಕಳು ಅತಿಯಾಗಿ ವ್ಯಸನದ ತೊಂದರೆಗಳಿಗೆ ಒಳಗಾಗುತ್ತಿರುವುದು ಕುರಿತು ವಿವರಿಸಿದರು.ಕಾಲೇಜಿನ ಬಿಎ ವಿಭಾಗದ 5ನೇ ಸೆಮೀಸ್ಟರ್‌ ವಿದ್ಯಾರ್ಥಿನಿ ನಸಿಮಾ ಚಪ್ಪರಬಂದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಮನೋಲಯ ಆಸ್ಪತ್ರೆಯ ಮುಖ್ಯಸ್ಥ ಡಾ.ಮನೋವಿಜಯ ಕಳಸಗೊಂಡರವರು ₹5000 ಪ್ರೋತ್ಸಾಹಧನ ನೀಡಿ ಅಭಿನಂದಿಸಿದರು.ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಐ.ಹಂಜಗಿ ಅಧ್ಯಕ್ಷತೆ ವಹಿಸಿ ಮಾನಸಿಕ ಆರೋಗ್ಯದ ಮಹತ್ವದ ಕುರಿತು ಮಾತನಾಡಿದರು. ಅತಿಥಿಗಳಾಗಿ ಡಾ.ಬಿ.ಎನ್.ದೇವಿಂದ್ರ ಸಹಾಯಕ ಪ್ರಾದೇಶಿಕ ನಿರ್ದೆಶಕರು ಇಗ್ನೊ ಭಾಗವಹಿಸಿದ್ದರು.ಮನಃಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ವಿಶಾಲಾಕ್ಷಿ ಹೊನ್ನಾಕಟ್ಟಿ ಕಾರ್ಯಕ್ರಮ ಆಯೋಜಿಸಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಸ್.ಖೊದ್ನಾಪೂರ ನಿರೂಪಿಸಿದರು. ಭೌತಶಾಸ್ತ್ರ ಸಹಾಯಕ ಪ್ರಾಧ್ಯಪಕ ಪ್ರೊ.ಸುನೀಲಕುಮಾರ ತೊಂಟಾಪುರ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ರೋಹಿಣಿ ಹಿರೇರೆಡ್ಡಿ ಅತಿಥಿಗಳನ್ನು ಪರಿಚಯಿಸಿದರು. ಸಹ ಪ್ರಾಧ್ಯಾಪಕ ಡಾ.ಚಂದ್ರಕಾಂತ.ಬಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೋಟ್...

ಸದೃಢ ಸಮಾಜಕ್ಕೆ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯ ಮುಖ್ಯವಾಗಿರುತ್ತದೆ. ದೈಹಿಕ ಆರೋಗ್ಯಕ್ಕಾಗಿ ಯಾವ ರೀತಿ ನಾವು ಕಾಳಜಿ, ವಿಶ್ರಾಂತಿ ಮತ್ತು ಚಿಕಿತ್ಸೆ ಪಡೆಯುತ್ತೇವೋ ಹಾಗೆಯೇ ಮಾನಸಿಕ ಆರೋಗ್ಯಕ್ಕೂ ಇದೆಲ್ಲವುದರ ಅವಶ್ಯಕತೆ ಇದೆ.

-ಡಾ.ಮನೋವಿಜಯ ಬ.ಕಳಸಗೊಂಡ, ಬಿಎಲ್‌ಡಿಇ ಆಸ್ಪತ್ರೆಯ ಮನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ.--