ದೇಹದ ಆರೋಗ್ಯ ಸರಿಯಾಗಿದ್ದರೇ ಮಾತ್ರ ಮಾನಸಿಕ ಸದೃಢತೆ

| Published : Feb 16 2024, 01:51 AM IST

ಸಾರಾಂಶ

ಮನಸ್ಸು ಮತ್ತು ದೇಹಗಳನ್ನು ಒಂದು ಗೂಡಿಸುವುದು ವ್ಯಾಯಾಮ ದೇಹದ ಆರೋಗ್ಯ ಸರಿಯಾಗಿದ್ದರೇ ಮಾತ್ರ ಮಾನಸಿಕ ಸದೃಢತೆ ಸಾಧಿಸಲು ಸಾಧ್ಯ ಎಂದು ದೇವರಹಿಪ್ಪರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಅಶೋಕಕುಮಾರ ಜಾಧವ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಮನಸ್ಸು ಮತ್ತು ದೇಹಗಳನ್ನು ಒಂದು ಗೂಡಿಸುವುದು ವ್ಯಾಯಾಮ ದೇಹದ ಆರೋಗ್ಯ ಸರಿಯಾಗಿದ್ದರೇ ಮಾತ್ರ ಮಾನಸಿಕ ಸದೃಢತೆ ಸಾಧಿಸಲು ಸಾಧ್ಯ ಎಂದು ದೇವರಹಿಪ್ಪರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಅಶೋಕಕುಮಾರ ಜಾಧವ ಹೇಳಿದರು.

ಪಟ್ಟಣದ ಶ್ರೀಮತಿ ಐ.ಎಸ್.ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ Health and wellness ಹಾಗೂ opportunities in sports ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ವಿದ್ಯಾರ್ಥಿಗಳು ಆರೋಗ್ಯದ ಕಡೆಗೆ ಗಮನ ಕೊಡಬೇಕು. ಶಿಸ್ತನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ನಿಮ್ಮ ಸಲುವಾಗಿ ದಿನಕ್ಕೆ ಅರ್ಧ ಗಂಟೆ ವ್ಯಾಯಾಮ ಮಾಡಲು ಮೀಸಲಿಡಬೇಕು. ದುಶ್ಚಟಗಳಿಗೆ ದಾಸರಾಗದೇ ನಿರ್ದಿಷ್ಟ ಗುರಿಯನ್ನು ಜೀವನದಲ್ಲಿ ಹೊಂದಬೇಕು ಎಂದು ಸಲಹೆ ನೀಡಿದರು.

ಡಾ.ಎ.ಬಿ.ವಗ್ಗರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ತ್ರಿಶಾಂತಕುಮಾರ ಹಾಗೂ ಇನ್ನಿತರ ಉಪನ್ಯಾಸಕರು ಇದ್ದರು. ಕೃಷ್ಣ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಪ್ರೇಮಾ ಬಂಡಿವಡ್ಡರ ಸ್ವಾಗತಿಸಿದರು. ಮುತ್ತೆಪ್ಪ ಬೆಳಕೊಡ ವಂದಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎಂ.ಸಾರವಾನ ವಿಶೇಷ ಕಾರ್ಯಕ್ರಮದ ಸಂಘಟನೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಚಲನಚಿತ್ರ ನಟರಾದ ಸೋಮಶೇಖರ ರಾಠೋಡ, ವಿಜಾಪುರದ ಅರಕೇರಿಯ ರಾಮಕೃಷ್ಣ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಚಾಂದವಸೀಮ್‌ ಮುಕಾದಮ, ಇಂಜನೀಯರ್‌ ರಾಬರ್ಟ್‌ ಹೊಸಳ್ಳಿ, ರಾಮದುರ್ಗ ಕಾಲೇಜಿನ ಉಪನ್ಯಾಸಕ ಸಿಬ್ಬಂದಿಯವರು ಮತ್ತಿತರರು ಉಪಸ್ಥಿತರಿದ್ದರು.

--

ಕೋಟ್‌...

ಪ್ರಸ್ತುತ ವಿದ್ಯಾರ್ಥಿಗಳು ಆರೋಗ್ಯದ ಕಡೆಗೆ ಗಮನ ಕೊಡಬೇಕು.ಶಿಸ್ತನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ನಿಮ್ಮ ಸಲುವಾಗಿ ದಿನಕ್ಕೆ ಅರ್ಧ ಗಂಟೆ ವ್ಯಾಯಾಮ ಮಾಡಲು ಮೀಸಲಿಡಬೇಕು. ದುಶ್ಚಟಗಳಿಗೆ ದಾಸರಾಗದೇ ನಿರ್ದಿಷ್ಟ ಗುರಿಯನ್ನು ಜೀವನದಲ್ಲಿ ಹೊಂದಬೇಕು.ಡಾ.ಅಶೋಕಕುಮಾರ ಜಾಧವ, ದೇವರಹಿಪ್ಪರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು.