ಸಾರಾಂಶ
ಕಮತಗಿ: ಶಿವನ ಧ್ಯಾನದಿಂದ ಮಾನಸಿಕ ಶಾಂತಿ, ನೆಮ್ಮದಿ ದೊರಕುವುದು. ವಿಜ್ಞಾನ ಮತ್ತು ಪ್ರಗತಿಪರ ವಿಚಾರಗಳು ಸಾಕಷ್ಟು ಅಭಿವೃದ್ಧಿ ಹೊಂದಿದ್ದರೂ ಕೂಡ ನಾವೆಲ್ಲರೂ ಶಿವನಾಮ ಮರೆಯುವಂತಿಲ್ಲ ಎಂದು ತೊಗಣಸಿ, ಕೋಟೆಕಲ್ ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಹೇಳಿದರು
ಕನ್ನಡಪ್ರಭ ವಾರ್ತೆ ಕಮತಗಿ
ಶಿವನ ಧ್ಯಾನದಿಂದ ಮಾನಸಿಕ ಶಾಂತಿ, ನೆಮ್ಮದಿ ದೊರಕುವುದು. ವಿಜ್ಞಾನ ಮತ್ತು ಪ್ರಗತಿಪರ ವಿಚಾರಗಳು ಸಾಕಷ್ಟು ಅಭಿವೃದ್ಧಿ ಹೊಂದಿದ್ದರೂ ಕೂಡ ನಾವೆಲ್ಲರೂ ಶಿವನಾಮ ಮರೆಯುವಂತಿಲ್ಲ ಎಂದು ತೊಗಣಸಿ, ಕೋಟೆಕಲ್ ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದಲ್ಲಿನ ಪಾರ್ವತಿ ಪರಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಹಟಗಾರ (ಶಿವಾಚಾರ) ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ನಂತರ ಪ್ರವಚನ ನೀಡಿ ಮಾತನಾಡಿದ ಅವರು, ಶ್ರೇಷ್ಠ ಶಿವರಾತ್ರಿಯು ಶಿವನಿಗಾಗಿಯೇ ಮೀಸಲಿಟ್ಟ ದಿನ. ಶಿವನ ಶಕ್ತಿ ಆಗಾಧ, ನಾವೆಲ್ಲರೂ ಅವನ ಪರಮಭಕ್ತರಾಗಿ ಮೋಕ್ಷ ಪಡೆಯಬೇಕು ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕಮತಗಿ ಹೊಳೆ ಹುಚ್ಚೇಶ್ವರ ಸ್ವಾಮೀಜಿ, ಸಾನ್ನಿಧ್ಯವನ್ನು ಕಮತಗಿ ಹಿರೇಮಠದ ಶಿವಕುಮಾರ ಸ್ವಾಮೀಜಿ, ಮಾತೋಶ್ರೀ ಬಸವಣ್ಣೆಮ್ಮತಾಯಿ ಬಸರಕೋಡ, ಸಮಾಜದ ಅಧ್ಯಕ್ಷ ಮಹಾರುದ್ರಪ್ಪ ಚೌಡಪೂರ ಹಾಗೂ ಸಮಾಜದ ಗುರು ಹಿರಿಯರು, ಯುವಕರು ಇದ್ದರು.