ಬುದ್ಧಿಮಾಂದ್ಯ ಮಕ್ಕಳು ದೇವರ ಸ್ವರೂಪಿಗಳು: ಬಸವರಾಜ ಮಟಗಾರ

| Published : Jan 02 2024, 02:15 AM IST

ಬುದ್ಧಿಮಾಂದ್ಯ ಮಕ್ಕಳು ದೇವರ ಸ್ವರೂಪಿಗಳು: ಬಸವರಾಜ ಮಟಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಹಿಡಕಲ್ ಡ್ಯಾಮಿನ ದೂದನಾನಾ ವಿಕಾಸ ಶಿಕ್ಷಣ ಸಂಸ್ಥೆಯ ಬುದ್ದಿವಿಕಲಚೇತನ ಮಕ್ಕಳ ವಸತಿಯುತ ಶಾಲೆಯಲ್ಲಿ ದಿ.ಕಾಶಪ್ಪ ಭೀಮಪ್ಪ ಮಟಗಾರ 37ನೇ ಪುಣ್ಯಸ್ಮರಣೆ ನಿಮಿತ್ತ ಬುದ್ದಿಮಾಂದ್ಯ ಮಕ್ಕಳಿಗೆ ಬಟ್ಟೆಗಳನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಬುದ್ದಿಮಾಂದ್ಯ ಮಕ್ಕಳು ದೇವರ ಸ್ವರೂಪಿಗಳಾಗಿದ್ದು, ತಮ್ಮ ಮಕ್ಕಳಂತೆ ನೋಡಿ ಅವರಿಗೆ ವಿದ್ಯೆ ಕಲಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಕಾರ್ಯ ಮಾಡುತ್ತಿರುವ ಶಿಕ್ಷಕರ ಸೇವೆಯು ಶ್ಲಾಘನೀಯವಾದದು ಎಂದು ಬೆಳಗಾವಿ ಜಿಲ್ಲಾ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಬಸವರಾಜ ಮಟಗಾರ ಹೇಳಿದರು.

ಹಿಡಕಲ್ ಡ್ಯಾಮಿನ ದೂದನಾನಾ ವಿಕಾಸ ಶಿಕ್ಷಣ ಸಂಸ್ಥೆಯ ಬುದ್ದಿವಿಕಲಚೇತನ ಮಕ್ಕಳ ವಸತಿಯುತ ಶಾಲೆಯಲ್ಲಿ ದಿ.ಕಾಶಪ್ಪ ಭೀಮಪ್ಪ ಮಟಗಾರ 37ನೇ ಪುಣ್ಯಸ್ಮರಣೆ ನಿಮಿತ್ತ ಬುದ್ದಿಮಾಂದ್ಯ ಮಕ್ಕಳಿಗೆ ಬಟ್ಟೆಗಳನ್ನು ವಿತರಿಸಿ ಮಾತನಾಡಿದ ಅವರು, ಬುದ್ದಿಮಾಂದ್ಯ ಮಕ್ಕಳ ಬುದ್ದಿವಿಕಸನಕ್ಕೆ ಇಲ್ಲಿಯ ಶಿಕ್ಷಕರು ಹಲವಾರು ವರ್ಷಗಳಿಂದ ಸೇವೆ ಮಾಡುತ್ತ ಬಂದಿದ್ದಾರೆ. ಈ ಶಾಲೆಗೆ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸಮಾಜ ಸೇವಕ ಚಂದ್ರಶೇಖರ ಗಣಾಚಾರಿ ಮಾತನಾಡಿ, ಬಸವರಾಜ ಮಟಗಾರ ಅವರು ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನಸೇವೆ ಮಾಡುತ್ತ ಬಂದಿದ್ದಾರೆ. ಅವರು ಒಬ್ಬ ಗುತ್ತಿಗೆದಾರರಾಗಿ ಸೇವೆಗೈಯುತ್ತ ಬಡವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಸಹಾಯ ಸಹಕಾರ ಮಾಡುತ್ತಿರುವುದು ಪ್ರಶಂಸನೀಯವಾದದು ಎಂದರು.

ಬೆಳಗಾವಿ ಜಿಲ್ಲಾ ಸಂಗಮ ಸಹಕಾರಿ ಪತ್ತಿನ ಮುಖ್ಯ ಕಾರ್ಯನಿರ್ವಾಹಕ ಎ.ಎಸ್.ಮಾಹುಲಿ ಮಾತನಾಡಿದರು. ಶಿಕ್ಷಕ ಬಿ.ಬಿ.ಸಂಕನ್ನವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆಯಲ್ಲಿ ಅಬಕಾರಿ ಇಲಾಖೆಯ ನಿವೃತ್ತ ಪಿಎಸೈ ಸಿದ್ದಪ್ಪ ಹೊಸಮನಿ, ಮಹೇಶ ಶಿರೂರ, ಗಣೇಶ ಪೂಜಾರ, ಇರ್ಷಾದ ಕಿಲ್ಲೆದಾರ, ಮನೋಜ ಜಗತಾಪ, ಸಿದ್ದಪ್ಪ ರಾಮಗೊನಟ್ಟಿ, ಆಜಾದ ಮುಲ್ಲಾ, ಅಜೀತ ಕಾಂಬಳೆ, ಸದಾಶಿವ ಹಂಚಿನಾಳ, ಮಹಾವೀರ ಲಠ್ಠೆ, ಸುರೇಶ ಈರಗಾರ, ಸಂಜು ಹುಕ್ಕೇರಿ, ಸದಾಶಿವ ಮಡಿವಾಳ, ಬಸವರಾಜ ಯಕ್ಕುಂಡಿ, ಶ್ರೀಕಾಂತ ಹರಿಜನ ವಿನೋದ ಹೊಸಮನಿ ಮತ್ತು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.