ಸಾರಾಂಶ
ದಾವಣಗೆರೆ : ಮುಂಬರುವ ಜನ-ಜಾತಿಗಣತಿ ವೇಳೆ ವೀರಶೈವ-ಲಿಂಗಾಯತರ ಎಲ್ಲ ಒಳಪಂಗಡಗಳು ‘ವೀರಶೈವ ಲಿಂಗಾಯತ’ ಎಂದು ಬರೆಯಿಸಬೇಕು. ಸಮಾಜದ ಎಲ್ಲ ಒಳಪಂಗಡಗಳಿಗೆ ಒಬಿಸಿ ಸ್ಥಾನಮಾನ ನೀಡಬೇಕು ಎಂಬ ನಿರ್ಣಯ ಸೇರಿ 12 ನಿರ್ಣಯಗಳನ್ನು ಪಂಚ ಪೀಠಾಧೀಶರು ಹಾಗೂ ಶಿವಾಚಾರ್ಯ ಶೃಂಗ ಸಮ್ಮೇಳನದಲ್ಲಿ ಕೈಗೊಳ್ಳಲಾಗಿದೆ.
ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಸಮ್ಮೇಳನದ ಕೊನೆಯ ದಿನವಾದ ಮಂಗಳವಾರ ಸಂಜೆ 12 ನಿರ್ಣಯಗಳನ್ನು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಂಡಿಸಿದರು.
ಸಮ್ಮೇಳನದಲ್ಲಿ ಕೈಗೊಂಡ 12 ನಿರ್ಣಯಗಳನ್ನು ಒಂದೊಂದಾಗಿ ಓದಿದ ರಂಭಾಪುರಿ ಜಗದ್ಗುರುಗಳು ಅವುಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರಗಳು, ಸಮಾಜದ ನಾಯಕರು, ಜನಪ್ರತಿನಿಧಿಗಳು, ಸಮಾಜ ಬಾಂಧವರು ಮಾಡಬೇಕು ಎಂದು ತಿಳಿಸಿದರು.
ಪ್ರಮುಖ ನಿರ್ಣಯಗಳು
- ಜಾತಿ ಗಣತಿಯಲ್ಲಿ ಎಲ್ಲ ಒಳಪಂಗಡಗಳು ‘ವೀರಶೈವ ಲಿಂಗಾಯತ’ ಎಂದು ಬರೆಸಿ.
- ನಾವೆಲ್ಲ ವೀರಶೈವ ಲಿಂಗಾಯತರೆಂಬ ಒಗ್ಗಟ್ಟನ್ನು ಕಾಪಾಡಿಕೊಂಡು ಹೋಗಬೇಕು- ಜನಗಣತಿ ಫಾರಂನಲ್ಲಿ ಮತದ ಕಾಲಂ ಸಹ ಇರಬೇಕು ಎಂದು ಕೇಂದ್ರಕ್ಕೆ ಆಗ್ರಹ
- ವೀರಶೈವ ಲಿಂಗಾಯತ ಧರ್ಮದ ಎಲ್ಲ ಒಳಪಂಗಡಗಳಿಗೆ ಒಬಿಸಿ ಸ್ಥಾನಮಾನ ನೀಡಿ
- ಸಮಾಜದ ಎಲ್ಲ ಒಳಪಂಗಡಗಳಿಗೆ ಇರುವ ಮೀಸಲಾತಿ ಸೌಲಭ್ಯ ಮುಂದುವರಿಸಿ
- ಸಮಾಜದ ಸಂಘಟನೆಗಳು ಜಗದ್ಗುರು ರೇಣುಕಾಚಾರ್ಯರ ಫೋಟೋ ಹಾಕುಬೇಕು