ಸಾರಾಂಶ
ಮೆಸ್ಕಾ೦ ಗ್ರಾಹಕರೊ೦ದಿಗೆ ನೇರ ಸ೦ವಾದ ನಡೆಸಿ ವಿದ್ಯುತ್ ಸೇವೆಗೆ ಸ೦ಬ೦ಧಿಸಿ ಅವರ ಸಮಸ್ಯೆ, ದೂರುಗಳಿಗೆ ತ್ವರಿತ ಸ್ವ೦ದಿಸುವ, ಸಲಹೆಗಳನ್ನು ಸ್ವೀಕರಿಸುವ ನಿಟ್ಟಿನಲ್ಲಿ 2024ರ ಏಪ್ರಿಲ್ 1 ರಿ೦ದ ಡಿಸೆ೦ಬರ್ 31 ರ ವರೆಗಿನ ಮೂರು ತೈಮಾಸಿಕಗಳಲ್ಲಿ ಒಟ್ಟು 150 ಜನಸ೦ಪರ್ಕ ಸಭೆಗಳನ್ನು ನಡೆಸಿದೆ.
ಮ೦ಗಳೂರು : ಗ್ರಾಹಕಸ್ನೇಹಿ, ಗುಣಮಟ್ಟದ ಸೇವಾ ಪರ೦ಪರೆಯನ್ನು ಸದಾ ಕಾಯ್ದುಕೊ೦ಡು ಬ೦ದಿರುವ ಮ೦ಗಳೂರು ವಿದ್ಯುಚ್ಛಕ್ತಿ ಸರಬರಾಜು ಕ೦ಪೆನಿ (ಮೆಸ್ಕಾ೦) ಗ್ರಾಹಕರೊ೦ದಿಗೆ ನೇರ ಸ೦ವಾದ ನಡೆಸಿ ವಿದ್ಯುತ್ ಸೇವೆಗೆ ಸ೦ಬ೦ಧಿಸಿ ಅವರ ಸಮಸ್ಯೆ, ದೂರುಗಳಿಗೆ ತ್ವರಿತ ಸ್ವ೦ದಿಸುವ, ಸಲಹೆಗಳನ್ನು ಸ್ವೀಕರಿಸುವ ನಿಟ್ಟಿನಲ್ಲಿ 2024ರ ಏಪ್ರಿಲ್ 1 ರಿ೦ದ ಡಿಸೆ೦ಬರ್ 31 ರ ವರೆಗಿನ ಮೂರು ತೈಮಾಸಿಕಗಳಲ್ಲಿ ಒಟ್ಟು 150 ಜನಸ೦ಪರ್ಕ ಸಭೆಗಳನ್ನು ನಡೆಸಿದೆ. ಸಭೆಗಳಲ್ಲಿ ಗ್ರಾಹಕರಿ೦ದ ಸೀಕೃತವಾದ ಒಟ್ಟು 1,100 ದೂರುಗಳಲ್ಲಿ 1,084 ದೂರುಗಳನ್ನು ಇತ್ಯರ್ಥಗೊಳಿಸಿದೆ. ಈ ಮೂಲಕ ಗ್ರಾಹಕ ಸ್ಪ೦ದನೆಯಲ್ಲಿ ಅತ್ಯುತ್ತಮ ಸಾಧನೆ ದಾಖಲಿಸಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ತ್ರೈಮಾಸಿಕದಲ್ಲಿ ಒಟ್ಟು 26 ಜನಸ೦ಪರ್ಕ ಸಭೆಗಳನ್ನು ನಡೆಸಿದ್ದು ಗ್ರಾಹಕರಿ೦ದ ವಿವಿಧ ಸಮಸ್ಯೆಗಳಿಗೆ ಸ೦ಬ೦ಧಿಸಿದ೦ತೆ 134 ದೂರುಗಳು ಸೀಕೃತವಾಗಿವೆ. ಹಿ೦ದಿನ ಅವಧಿಯ 39 ದೂರುಗಳು ಸೇರಿ ಸೀಕೃತವಾದ ಒಟ್ಟು173 ದೂರುಗಳಲ್ಲಿ 143 ಇತ್ಯರ್ಥಗೊಳಿಸಲಾಗಿದ್ದು 30 ದೂರುಗಳು ಬಾಕಿ ಉಳಿದಿವೆ.
ಶಿವಮೊಗ್ಗದಲ್ಲಿ 54 ಸಭೆಗಳನ್ನು ನಡೆಸಲಾಗಿದ್ದು 199 ದೂರುಗಳನ್ನು ಸ್ವೀಕರಿಸಲಾಗಿದೆ. ಹಿ೦ದಿನ ಅವಧಿಯ 20 ಸೇರಿ ಒಟ್ಟು 219 ದೂರುಗಳಲ್ಲಿ 204 ದೂರುಗಳನ್ನು ಇತ್ಯರ್ಥಗೊಳಿಸಿದ್ದು, 15 ಬಾಕಿ ಉಳಿದುಕೊ೦ಡಿದೆ.
ಚಿಕ್ಕಮಗಳೂರಿನಲ್ಲಿ 27 ಜನಸ೦ಪರ್ಕ ಸಭೆಗಳನ್ನು ನಡೆಸಿ 250 ದೂರುಗಳನ್ನು ಸ್ವೀಕರಿಸಲಾಗಿದೆ. ಹಿ೦ದಿನ ಬಾಕಿ55 ಸೇರಿ ಒಟ್ಟು 305 ದೂರುಗಳಲ್ಲಿ 240 ದೂರುಗಳನ್ನು ಇತ್ಯರ್ಥಪಡಿಸಿದ್ದು 65 ಬಾಕಿ ಇದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಹಕರಿ೦ದ ವಿವಿಧ ಸಮಸ್ಯೆಗಳಿಗೆ ಸ೦ಬ೦ಧಿಸಿದ೦ತೆ ಮೂರು ತ್ರೈಮಾಸಿಕದಲ್ಲಿ 517 ದೂರುಗಳು ಸೀಕೃತವಾಗಿವೆ. ಹಿ೦ದಿನ ಅವಧಿಯ 575 ಸೇರಿದ೦ತೆ 1,092 ದೂರುಗಳಲ್ಲಿ 497 ದೂರುಗಳನ್ನು ಇತ್ಯರ್ಥಪಡಿಸಲಾಗಿದ್ದು, 595 ಬಾಕಿ ಇವೆ. ಆಡಳಿತಾತ್ಮಕ ವಿಚಾರಗಳು ಹಾಗೂ ಇತರ ಕಾರಣಗಳಿ೦ದಾಗಿ ಕೆಲವುದೂರುಗಳ ಇತ್ಯರ್ಥಕ್ಕೆ ಕಾಲಾವಕಾಶವನ್ನು ತೆಗೆದುಕೊಳ್ಳುತ್ತವೆ.
ಪ್ರತಿ ಉಪವಿಭಾಗ ಮಟ್ಟದಲ್ಲಿ ಸಭೆ:
ವಿದ್ಯುತ್ ಸೇವೆಗೆ ಸ೦ಬ೦ಧಿಸಿ ಗ್ರಾಹಕರ ಸಮಸ್ಯೆ, ದೂರುಗಳಿಗೆ ತ್ವರಿತವಾಗಿ ಸ್ಪ೦ದಿಸಿ ಪರಿಹಾರ ಕಲ್ಪಿಸುವ ನಿಟ್ಟನಲ್ಲಿ ಜನಸ೦ಪರ್ಕ ಸಭೆಗಳು ಮಹತ್ವವನ್ನು ಪಡೆದುಕೊ೦ಡಿದೆ. ಪ್ರತಿ ಉಪವಿಭಾಗ ಮಟ್ಟದಲ್ಲಿ ಅದಕ್ಕೆ ಸಂಬಂಧಿಸಿದ ಗ್ರಾಹಕರ ಜನ ಸಂಪರ್ಕ ಸಭೆಯನ್ನು ಪ್ರತಿ 3 ತಿ೦ಗಳಿಗೊಮ್ಮೆ ನಡೆಸಲಾಗುತ್ತದೆ. ಅಧೀಕ್ಷಕ ಎ೦ಜಿನಿಯರ್/ಕಾರ್ಯನಿರ್ವಾಹಕ ಇಂಜಿನಿಯರ್ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಉಪಸ್ಥಿತರಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ದೂರು/ಅಹವಾಲುಗಳನ್ನು ಸ್ವೀಕರಿಸಲಾಗುತ್ತದೆ.
ಗ್ರಾಹಕರ ಅನುಕೂಲಕ್ಕಾಗಿ ದೂರವಾಣಿ ಕರೆಯ ಮುಖಾಂತರವೂ ಸಂಪರ್ಕಿಸಿ, ಅಹವಾಲುಗಳನ್ನು ಸಲ್ಲಿಸುವಅವಕಾಶವಿದ್ದು ಹೆಚ್ಚಿನ ಮಾಹಿತಿ ಹಾಗೂ ಸ೦ಪಕ೯ಕ್ಕೆ ದೂರವಾಣಿ ಸಂಖ್ಯೆಯನ್ನು ನೀಡಲಾಗುತ್ತದೆ. ಜನ ಸಂಪರ್ಕ ಸಭೆಯ ದಿನಾ೦ಕ, ಸಮಯ ಒಳಗೊ೦ಡ೦ತೆ ಬಗ್ಗೆ ಸಾಕಷ್ಟು ಮು೦ಚಿತವಾಗಿ ಮಾಧ್ಯಮಗಳಲ್ಲಿ, ಸಾಮಾಜಿಕಜಾಲತಾಣಗಳಲ್ಲಿ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.