ಸಾರಾಂಶ
ಬಾಳೆಹೊನ್ನೂರು ಪಟ್ಟಣದ ಮೆಸ್ಕಾಂ ವ್ಯಾಪ್ತಿಯ ಇಟ್ಟಿಗೆ ಸೀಗೋಡು ಎಂಬಲ್ಲಿ ವಿದ್ಯುತ್ ಲೈನ್ ದುರಸ್ತಿಪಡಿಸುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಒರ್ವ ಮೆಸ್ಕಾಂ ಲೈನ್‌ಮೆನ್ ಸಾವನ್ನಪ್ಪಿದ್ದು, ಮತ್ತೋರ್ವರು ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ.
ಬಾಳೆಹೊನ್ನೂರು: ಪಟ್ಟಣದ ಮೆಸ್ಕಾಂ ವ್ಯಾಪ್ತಿಯ ಇಟ್ಟಿಗೆ ಸೀಗೋಡು ಎಂಬಲ್ಲಿ ವಿದ್ಯುತ್ ಲೈನ್ ದುರಸ್ತಿಪಡಿಸುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಒರ್ವ ಮೆಸ್ಕಾಂ ಲೈನ್‌ಮೆನ್ ಸಾವನ್ನಪ್ಪಿದ್ದು, ಮತ್ತೋರ್ವರು ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ.
ಇಟ್ಟಿಗೆ ಸೀಗೋಡು ವಿಭಾಗದ ಮೆಸ್ಕಾಂ ಲೈನ್‌ಮೆನ್ ಮಹಾದೇವಪ್ಪ (29) ಮೃತಪಟ್ಟ ವ್ಯಕ್ತಿ. ಮತ್ತೋರ್ವ ಲೈನ್‌ಮೆನ್ ನಾಗರಾಜ್ ಎಂಬುವರು ಗಾಯಗೊಂಡರು.ಮಂಗಳವಾರ ಮಧ್ಯಾಹ್ನ ಈ ಇಬ್ಬರು ಲೈನ್‌ಮೆನ್‌ಗಳು ವಿದ್ಯುತ್ ಮೈನ್ ಲೈನ್ ದುರಸ್ತಿ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದ್ದು, ಮಹಾದೇವಪ್ಪ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಾಗರಾಜ್ ಅವರಿಗೆ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಸ್ಥಳಕ್ಕೆ ಬಾಳೆಹೊನ್ನೂರು ಪಿಎಸ್‌ಐ ರವೀಶ್, ಮೆಸ್ಕಾಂ ಎಇಇ ಗೌತಮ್, ಜೆಇ ತಾಜ್ ಸಾಹೇಬ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮಹಾದೇವಪ್ಪಗೆ ಕಳೆದ ಒಂದೂವರೆ ವರ್ಷದ ಹಿಂದಷ್ಟೆ ವಿವಾಹವಾಗಿತ್ತು. ೨೩ಬಿಹೆಚ್‌ಆರ್ ೨: ಮಹಾದೇವಪ್ಪ