ಮೇಟಗಳ್ಳಿ ಜೆಎಸ್ಎಸ್ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

| Published : Jul 07 2024, 01:16 AM IST

ಸಾರಾಂಶ

ವಿದ್ಯಾರ್ಥಿಗಳು ವಿವಿಧ ಸಂಘಗಳ ಮೂಲಕ ನಡೆಯುವ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜ್ಞಾನವನ್ನು ವೃದ್ಧಿಸಿಕೊಳ್ಳಬೇಕೆಂದು

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಮೇಟಗಳ್ಳಿಯ ಜೆಎಸ್ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25ನೇ ಸಾಲಿನ ವಿವಿಧ ಸಂಘ (ಕ್ಲಬ್) ಗಳನ್ನು ಉದ್ಘಾಟಿಸಲಾಯಿತು.

ಮುಖ್ಯಅತಿಥಿಯಾಗಿ ವಿಜಯನಗರ ಜೆಎಸ್ಎಸ್ಪ್ರೌಢಶಾಲೆಯ ಮುಖ್ಯಶಿಕ್ಷಕ ವಿ. ನಾಗೇಶ್ ಅವರು ವಿವಿಧ ಸಂಘಗಳಾದ ಭಾಷಾ ಸಂಘ, ಸ್ವಚ್ಛತಾ ಸಂಘ, ವಿಜ್ಞಾನ ಸಂಘ, ಗಣಿತ ಸಂಘ, ಸಮಾಜ ವಿಜ್ಞಾನ ಸಂಘ, ಸಾಂಸ್ಕೃತಿಕ ಸಂಘ, ಸ್ಕೌಟ್ ಮತ್ತು ಗೈಡ್ ಹಾಗೂ ಕ್ರೀಡಾ ಸಂಘಗಳಿಗೆ ಪ್ರತ್ಯೇಕವಾಗಿ ಧ್ವಜಾರೋಹಣವನ್ನು ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ವಿದ್ಯಾರ್ಥಿಗಳು ವಿವಿಧ ಸಂಘಗಳ ಮೂಲಕ ನಡೆಯುವ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜ್ಞಾನವನ್ನು ವೃದ್ಧಿಸಿಕೊಳ್ಳಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಎನ್.ಪಿ. ಸತೀಶ್ ಮಾತನಾಡಿ, ವಿದ್ಯಾರ್ಥಿಗಳು ವಿವಿಧ ಸಂಘಗಳ ಮೂಲಕ ನಡೆಯುವ ಚಟುವಟಿಕೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ವಿವಿಧ ಸಂಘಗಳ ಸದಸ್ಯರಿಗೆ ಆಯಾ ಸಂಘಗಳ ಕಾರ್ಯದರ್ಶಿಗಳು ಹಾಗೂ ಜಂಟಿ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

7ನೇ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನರ್ಸರಿ ಶಿಕ್ಷಕಿ ಬಿ. ಮಂಜುಳಾ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಆರ್. ಪ್ರಭುಸ್ವಾಮಿ ನಿರೂಪಿಸಿದರು. ಸಹಶಿಕ್ಷಕರಾದ ದೀಪ ಪ್ರಶಾಂತ್ ವಂದಿಸಿದರು. ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.