ಮೈಕ್ರೋ ಫೈನಾನ್ಸ್ ಕಿರುಕುಳ: ಸಾಲಗಾರ ಆತ್ಮಹತ್ಯೆ

| Published : Feb 04 2025, 12:35 AM IST

ಸಾರಾಂಶ

ಮೈಕ್ರೋ ಫೈನಾನ್ಸನವರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ನಗರದಲ್ಲಿ ಜರುಗಿದೆ.

ರಾಣಿಬೆನ್ನೂರು: ಮೈಕ್ರೋ ಫೈನಾನ್ಸನವರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ನಗರದಲ್ಲಿ ಜರುಗಿದೆ.

ಇಲ್ಲಿನ ಅಡವಿ ಆಂಜನೇಯ ಬಡಾವಣೆಯ ನಿವಾಸಿ ಮಾಲತೇಶ ನಾಗಪ್ಪ ಅರಸಿಕೆರಿ (42) ಮೃತನು. ಮೃತ ಮಾಲತೇಶ ಹೇರ್ ಕಟಿಂಗ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಪತ್ನಿ ಗೀತಾ ಹಾಗೂ ಈತನ ಹೆಸರಿನಲ್ಲಿ ವಿವಿಧ ಮೈಕ್ರೋ ಫೈನಾನ್ಸ್ ಮತ್ತು ಸಂಘ-ಸಂಸ್ಥೆಗಳಲ್ಲಿ 4 ಲಕ್ಷ ರು. ಸಾಲ ಮಾಡಿಕೊಂಡಿದ್ದರು. ಸೋಮವಾರ ಬೆಳಗ್ಗೆ ಸಾಲದ ಕಂತು 5500 ರು. ತುಂಬಬೇಕಿತ್ತು. ಆದರೆ ಕೈಯಲ್ಲಿ ಹಣವಿಲ್ಲದ ಕಾರಣ ಪತ್ನಿ ಗೀತಾ ಹಣ ತೆಗೆದುಕೊಂಡು ಬರುವೆ ಎಂದು ಹೇಳಿ ಭಾನುವಾರ ದಾವಣಗೆರೆಗೆ ತೆರಳಿದ್ದರು. ಆದರೆ ಅವರು ವಾಪಸ್ ಬರುವಷ್ಟರಲ್ಲಿ ಮನನೊಂದ ಮಾಲತೇಶ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.