ಮಿಡ್ ಸಿಟಿ, ನೇತಾಜಿ ಕೊಡಗರಹಳ್ಳಿ ತಂಡಗಳು ಮುಂದಿನ ಸುತ್ತಿಗೆ ಲಗ್ಗೆ

| Published : May 18 2025, 02:07 AM IST

ಮಿಡ್ ಸಿಟಿ, ನೇತಾಜಿ ಕೊಡಗರಹಳ್ಳಿ ತಂಡಗಳು ಮುಂದಿನ ಸುತ್ತಿಗೆ ಲಗ್ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಗೋಲ್ಡ್‌ ಕಪ್‌ ಫುಟ್ಬಾಲ್‌ ಟೂರ್ನಿಯ 2ನೇ ದಿನ ಶನಿವಾರ ನಡೆದ ಪಂದ್ಯಾವಳಿಯಲ್ಲಿ ಮಿಡ್‌ಸಿಟಿ ಮತ್ತು ನೇತಾಜಿ ಕೊಡಗರ ಹಳ್ಳಿ ತಂಡಗಳು ಮಂದಿನ ಸುತ್ತಿಗೆ ಪ್ರವೇಶ ಪಡಿದಿವೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಡಿ.ಶಿವಪ್ಪ ಸ್ಮಾರಕ 26ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯ 2ನೇ ದಿನವಾದ ಶನಿವಾರ ನಡೆದ ಪಂದ್ಯಾವಳಿಯಲ್ಲಿ ಮಿಡ್‌ಸಿಟಿ ಮತ್ತು ನೇತಾಜಿ ಕೊಡಗರಹಳ್ಳಿ ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.ಜಿಯಂಪಿ ಶಾಲಾ ಮೈದಾನದಲ್ಲಿ ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ 39ನೇ ವರ್ಷದ ಪುಟ್ಬಾಲ್ ಪಂದ್ಯಾವಳಿಯಲ್ಲಿ ಮಿಡ್‌ಸಿಟಿ ಸುಂಟಿಕೊಪ್ಪ ಹಾಗೂ ಫ್ರೆಂಡ್ಸ್ ಎಫ್.ಸಿ ಬೀಟ್ಟಿಕಟ್ಟೆ ನಡುವೆ ನಡೆದ ಮೊದಲ ಪಂದ್ಯದಲ್ಲಿ ಮಿಡ್‌ಸಿಟಿ ತಂಡವು ಎದುರಾಳಿ ತಂಡದ ವಿರುದ್ಧ ಆಕ್ರಮಣ ಆಟಕ್ಕೆ ಇಳಿದ ಮಿಡ್‌ಸಿಟಿ ತಂಡದ ದಿವಾಕರ್ ಮೊದಲಾರ್ಧದಲ್ಲಿ 12ನೇ ನಿಮಿಷದಲ್ಲಿ ಒಂದು ಗೋಲು ಬಾರಿಸುವ ಮೂಲಕ 18 ನೇ ನಿಮೀಷದಲ್ಲಿ ಮುಸ್ತಾಕ್ ಮತ್ತೊಂದು ಗೋಲುಗಳಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ದ್ವಿತೀಯಾರ್ಧದಲ್ಲಿ 2ನೇ ನಿಮೀಷದಲ್ಲಿ ದಿವಾಕರ್ ಮತ್ತೊಂದು ಗೋಲುಗಳಿಸಿದರೆ ಮತ್ತೆ ಮಿಡ್‌ಸಿಟಿ ತಂಡದ ಪಾಂಡ್ಯನ್ 4ನೇ ನಿಮೀಷದಲ್ಲಿ ಮತ್ತೊಂದು ಗೋಲುಗಳಿಸುವ ಮೂಲಕ ಎದುರಾಳಿ ತಂಡಕ್ಕೆ ಒತ್ತಡವನ್ನು ನೀಡಿದರು. 12ನೇ ನಿಮಿಷದಲ್ಲಿ ಮಿಡ್‌ಸಿಟಿ ತಂಡದ ವಿಜು ಮತ್ತೊಂದು ಗೋಲುಗಳಿಸುವ ಮೂಲಕ ಮತ್ತಷ್ಟು ಅಂತರವನ್ನು ಹೆಚ್ಚಿಸಿದರು. ಬೀಟಿಕಟ್ಟೆ ತಂಡವು ಆಕ್ರಮಣ ಆಟಕ್ಕೆ ಇಳಿದು ತಂಡದ ಮುನ್ನಡೆ ಆಟಗಾರ 18ನೇ ನಿಮೀಷದಲ್ಲಿ ಪ್ರೀತಂ 1 ಗೋಲುಗಳಿಸುವ ಮೂಲಕ ಎದುರಾಳಿ ತಂಡದ ಗೋಲಿನ ಅಂತರವನ್ನು ಕಡಿಮೆ ಪ್ರಯತ್ನಿಸುತ್ತಿದ್ದಾಗಲೇ ಮಿಡ್‌ಸಿಟಿ ತಂಡದ ಸಾದ್ಧಿಕ್ 19ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸುವ ಮೂಲಕ 6-1 ಗೋಲುಗಳಿಂದ ಬೀಟಿಕಟ್ಟೆ ತಂಡವನ್ನು ಸೋಲಿಸುವ ಮೂಲಕ ಮಿಡ್ ತಂಡವು ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ದ್ವಿತೀಯ ಪಂದ್ಯಾವಳಿಯಲ್ಲಿ ಆಲ್‌ಸ್ಟಾರ್ ಎಫ್.ಸಿ ಗೋಣಿಕೊಪ್ಪ ಹಾಗೂ ನೇತಾಜಿ ಯುವಕ ಸಂಘ ಕೊಡಗರಹಳ್ಳಿ ತಂಡಗಳ ನಡುವೆ ನಡೆದು ಮೊದಲಾರ್ಧದಲ್ಲಿ ಎರಡು ಸಮಬಲದ ಪ್ರದರ್ಶನವನ್ನು ನೀಡಿದ್ದು ಯಾವುದೇ ಗೋಲುಗಳಿಸಲು ವಿಫಲಗೊಂಡಿತು. ದ್ವಿತೀಯಾರ್ಧದಲ್ಲಿ ಗೋಣಿಕೊಪ್ಪ ತಂಡವು ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರಿಗೆ ರಸದೌತಣ ನೀಡಿದರು. ಆದರೆ ಗೋಣಿಕೊಪ್ಪ ತಂಡದವರು ಎಸಗಿದ ಸಣ್ಣ ತಪ್ಪಿನಿಂದ 12ನೇ ನಿಮಿಷದಲ್ಲಿ ಕೊಡಗರಹಳ್ಳಿ ಟ್ರೈಬ್ರೇಕರ್ ಅವಕಾಶ ದೊರಕಿತು. ಕೊಡಗರಹಳ್ಳಿ ತಂಡದ ಆಟಗಾರ ಪುನಿತ್ ಗೋಲುಗಳಿಸುವ ಮೂಲಕ ಮುನ್ನಡೆಯನ್ನು ಪಡೆದುಕೊಂಡರು. 15ನೇ ನಿಮೀಷದಲ್ಲಿ ಗೋಣಿಕೊಪ್ಪ ತಂಡದ ಮದನ್ ಆಕ್ರಮಕಾರಿ ಆಟಕ್ಕೆ ಇಳಿದು 1 ಗೋಲುಗಳಿಸುವ ಮೂಲಕ ಸಮಬಲ ಸಾಧಿಸಿದರು. ನಂತರ ಟ್ರೈ ಬ್ರೇಕರ್‌ನಲ್ಲಿ 3-2 ಗೋಲುಗಳಿಂದ ಕೊಡಗರಹಳ್ಳಿ ತಂಡವು ಗೆದ್ದುಕೊಂಡಿತು. ಪಂದ್ಯಾವಳಿಯ ಉದ್ಘಾಟನೆಯನ್ನು ಆಶೋಕ್ ರೈ ಅಸಕುಂಞ, ಕೆ.ಐ.ರಫೀಕ್, ಪಂಚಾಯಿತಿ ಸದಸ್ಯರಾದ ಪ್ರಸಾದ್ ಕುಟ್ಟಪ್ಪ ಶಬ್ಬಿರ್, ಬ್ಲೂಬಾಯ್ಸ್ ಯೂತ್ ಕ್ಲಬ್ ಅಧ್ಯಕ್ಷ ಕೆ.ಎಂ.ಆಲಿಕುಟ್ಟಿ, ಗೌರವಧ್ಯಕ್ಷ ಟಿ.ವಿ.ಪ್ರಸನ್ನ, ಬಿ.ಕೆ.ಪ್ರಶಾಂತ್ ಮತ್ತಿತರರು ಇದ್ದರು.ಇಂದಿನ ಪಂದ್ಯಾವಳಿಗಳುಮೊದಲ ಪಂದ್ಯ 3 ಗಂ.

ಇಂಡಿಪೆಂಡೆಟ್ ಎಫ್.ಸಿ ಬೆಂಗಳೂರು v/s ಮಂಗಳೂರು ಎಫ್.ಸಿ.ಮಂಗಳೂರು ದ್ವಿತೀಯ ಪಂದ್ಯಾವಳಿ 4. ಗಂ.ಮೊಗ್ರಲ್ ಎಫ್.ಸಿ ಕುಂಬ್ಳೆ v/s ಸ್ವರ್ಣ ಎಫ್.ಸಿ.ಮಂಡ್ಯ