ವಿಜಯಪುರ: ಎರಡನೇ ಸಲವೂ ಆರ್‌ಸಿಬಿಗೆ ಐಪಿಎಲ್ ಕಿರೀಟ ದೊರಕಿದ ಹಿನ್ನೆಲೆಯಲ್ಲಿ ನಗರದ ಮಹಾತ್ಮಾಗಾಂಧಿ ವೃತ್ತ ಹಾಗೂ ಶ್ರೀ ಸಿದ್ಧೇಶ್ವರ ದೇವಸ್ಥಾನದ ಎದುರಿಗೆ ಪಟಾಕಿ ಸಿಡಿಸಿ, ಕಾರುಗಳಲ್ಲಿ ಸಾಂಗ್ಸ್ ಹಾಕಿ ಡ್ಯಾನ್ಸ್ ಮಾಡಿ ಆರ್‌ಸಿಬಿ ಅಭಿಮಾನಿಗಳು ತಡರಾತ್ರಿ ವರೆಗೂ ವಿಜಯೋತ್ಸವ ಆಚರಿಸಿದರು. ಸಾವಿರಾರು ಯುವಕ/ಯುವತಿಯರು ಜಮಾಯಿಸಿ ಈ ಸಲವು ಕಪ್ ನಮ್ಮದೇ ಎಂದು ಹೇಳುತ್ತ ಕೇ ಕೇ ಹಾಕಿ, ಸಿಳ್ಳೆ, ಚಪ್ಪಾಳೆ, ಕುಣಿದು ಕುಪ್ಪಳಿಸುವ ಮೂಲಕ ಗೆಲುವಿನ ಸಂಭ್ರಮವನ್ನು ಆಚರಿಸಿದರು.
ನೂರಾರು ಬೈಕ್ ಹಾಗೂ ಕಾರುಗಳಲ್ಲಿ ನಗರವನ್ನು ಸುತ್ತಿ ಆರ್‌ಸಿಬಿ ಗೆಲುವಿನ ವಿಜಯೋತ್ಸವ ಆಚರಿಸಲಾಯಿತು. ಈ ವೇಳೆ ಅಹಿತಕರ ಘಟನೆ ನಡೆಯದಂತೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಅಭಿಮಾನಿಗಳನ್ನು ಚದುರಿಸಲು ಪೊಲೀಸರ ಹರಸಾಹಸ: ಆರ್‌ಸಿಬಿ ಗೆಲುವಿನ ಹಿನ್ನೆಲೆ ನಗರದ ಗಾಂಧಿ ವೃತ್ತದಲ್ಲಿ ತಡರಾತ್ರಿವರೆಗೂ ಅಭಿಮಾನಿಗಳು ಹುಚ್ಚೆದ್ದು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಮಿಸಿದರು. ಈ ವೇಳೆ ಬೈಕ್‌ಗಳ ಮೇಲೆ, ಕಾರುಗಳಲ್ಲಿ ಬಂದ ಅಭಿಮಾನಿಗಳ ಹುಚ್ಚಾಟವನ್ನು ನಿಯಂತ್ರಿಸಲು ಪೊಲೀಸರು ಈ ವೇಳೆ ಲಘು ಲಾಠಿ ಪ್ರಹಾರ ನಡೆಸಿದರು. ವಿಜಯಪುರ ಡಿವೈಎಸ್‌ಪಿ ನಾಗರಾಜ ಲಘು ಲಾಠಿ ಪ್ರಹಾರ ನಡೆಸಿ ಸಂಚಾರ ಕ್ಕೆ ತಡೆಯಾಗುವಂತೆ ಮಾಡಿದ್ದ ಆರ್‌ಸಿಬಿ ಅಭಿಮಾನಿಗಳನ್ನು ನಿಯಂತ್ರಿಸಿದರು.