ಗದುಗಿನ ಆದಿತ್ಯ ನಗರದಲ್ಲಿ 5 ಗುಂಟೆ ಜಾಗದಲ್ಲಿ ಸಮುದಾಯದ ಭವನ ನಿರ್ಮಿಸಲಾಗಿದೆ. ಸಮುದಾಯ ಭವನದಲ್ಲಿ ತರಬೇತಿ ಕೇಂದ್ರ ಆರಂಭಿಸಲಾಗುವುದು. ತಜ್ಞರು ತರಬೇತಿ ನೀಡುವರು.
ಗದಗ: ನಗರದಲ್ಲಿ ಜ. 19ರಂದು ಬೆಳಗ್ಗೆ 10.30ಕ್ಕೆ ಸೈನಿಕ ತರಬೇತಿ ಕೇಂದ್ರ ಶುಭಾರಂಭವಾಗಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಜಿ.ಬಿ. ಮಾಲಗತ್ತಿಮಠ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆದಿತ್ಯ ನಗರದಲ್ಲಿ 5 ಗುಂಟೆ ಜಾಗದಲ್ಲಿ ಸಮುದಾಯದ ಭವನ ನಿರ್ಮಿಸಲಾಗಿದೆ. ಸಮುದಾಯ ಭವನದಲ್ಲಿ ತರಬೇತಿ ಕೇಂದ್ರ ಆರಂಭಿಸಲಾಗುವುದು. ತಜ್ಞರು ತರಬೇತಿ ನೀಡುವರು. ನಗರದಲ್ಲಿ ಯುವಕರಿಗೆ ತರಬೇತಿ ಕೊರತೆ ಇದೆ. ಸೇನೆ ಬಗ್ಗೆ ಜಾಗೃತಿ ಮೂಡಿಸುವರು ಇಲ್ಲವಾಗಿದೆ. ಯುವಕರಿಗೆ ಜಾಗೃತಿ ಜತೆಗೆ ಬಿಎಸ್‌ಎಫ್, ಅಗ್ನಿವೀರ ಹಾಗೂ ಕೇಂದ್ರ ಯೋಜನೆಗಳ ಬಗ್ಗೆ ತರಬೇತಿ ನೀಡಲಾಗುವುದು. ಜಿಲ್ಲಾದ್ಯಂತ ಶಾಲಾ- ಕಾಲೇಜುಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಫಕೀರೇಶ್ವರ ಶ್ರೀಗಳು, ಸಂಗಮೇಶ ದುಂದೂರು, ಸಿದ್ದಣ್ಣ ಪಲ್ಲೇದ ಸೇರಿದಂತೆ ಇತರರು ಪಾಲ್ಗೊಳ್ಳುವರು ಎಂದರು.
ಜ. 18ರಂದು ಯುವಕರಿಗೆ ಪೂರ್ವಭಾವಿ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದವರಿಗೆ ಬಹುಮಾನ ನೀಡಲಾಗುವುದು. ಪ್ರಶ್ನೆಪತ್ರಿಕೆ ಅಗ್ನಿವೀರ ಮಾದರಿಯಲ್ಲೇ ಸಿದ್ಧಪಡಿಸಲಾಗಿದೆ. ತರಬೇತಿ ಕೇಂದ್ರದಲ್ಲೇ ಊಟ ವಸತಿ ನೀಡಲಾಗುವುದು. ಮೂರು ತಿಂಗಳ ಅವಧಿಗೆ ತರಬೇತಿ ಇರುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸುದೀರ್ಘ ಘೋರ್ಪಡೆ, ಎಸ್.ಆರ್. ಪಾಟೀಲ, ಸಿ.ಜಿ. ಸೊನ್ನದ, ಶೇಖಪ್ಪ ಹೊನ್ನಪ್ಪನವರ, ಚನ್ನಯ್ಯ ಬಳಗಾನೂರುಮಠ, ಕುಮಾರಸ್ವಾಮಿ ಹಿರೇಮಠ, ಜಿ.ಬಿ. ಅರವಟಗಿಮಠ, ಎ.ಎಂ. ತಹಸೀಲ್ದಾರ, ಸಿದ್ದಪ್ಪ ಹೂಗಾರು, ವೀಣಾ ಹೂಗಾರ ಇತರರು ಇದ್ದರು.
ಇಂದು 4,586 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಚಾಲನೆಗದಗ: ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಶೈಕ್ಷಣಿಕ ಹಾಗೂ ವಸತಿ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಕೈಗೊಂಡಿರುವ ಒಟ್ಟು ₹4,586 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಲೋಕಾರ್ಪಣೆಯನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಶನಿವಾರ ನೆರವೇರಿಸಲಿದ್ದಾರೆ.ನಗರದ ಗಂಗಿಮಡಿ ಪ್ರದೇಶದಲ್ಲಿ ಕರ್ನಾಟಕ ಮೌಲಾನಾ ಆಜಾದ್ ಪಬ್ಲಿಕ್ ಸ್ಕೂಲ್(ಇಂಗ್ಲಿಷ್ ಮೀಡಿಯಂ) ಉದ್ಘಾಟನೆಗೆ ₹235 ಲಕ್ಷ ವೆಚ್ಚ ಮಾಡಲಾಗಿದ್ದು, ಇದೇ ಶಾಲೆಯಲ್ಲಿ ಹೆಚ್ಚುವರಿ ತರಗತಿ ಕೋಣೆ ನಿರ್ಮಾಣಕ್ಕೆ ₹142 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನಡೆಯಲಿದೆ.
ಬೆಟಗೇರಿಯಲ್ಲಿ ನಿರ್ಮಾಣಗೊಂಡಿರುವ ವಿದ್ಯಾರ್ಥಿ ವಸತಿನಿಲಯವನ್ನು ₹1,209 ಲಕ್ಷ ವೆಚ್ಚದಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದ್ದು, ಮಧ್ಯಾಹ್ನ 1 ಗಂಟೆಗೆ ಉದ್ಘಾಟನೆ ನೆರವೇರಲಿದೆ. ಹರ್ತಿ ಗ್ರಾಮದಲ್ಲಿ ಗರ್ಲ್ಸ್ ಮೊರಾರ್ಜಿ ದೇಸಾಯಿ ವಸತಿ ಶಾಲೆ(ಸಹ ಶಿಕ್ಷಣ) ಉದ್ಘಾಟನೆಯಾಗಲಿದೆ. ಹರ್ತಿ ಗ್ರಾಮದಲ್ಲಿ ನವೋದಯ ಮಾದರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿರ್ಮಾಣಕ್ಕೆ ₹2 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಲಿದೆ.ಮುಖ್ಯ ಅತಿಥಿಗಳಾಗಿ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್, ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ, ಸಂಸದರಾದ ಬಸವರಾಜ ಬೊಮ್ಮಾಯಿ, ಪಿ.ಸಿ. ಗದ್ದಿಗೌಡರ, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಇತರರು ಪಾಲ್ಗೊಳ್ಳುವರು.