ಜನರ ಹಣವನ್ನು ಕಿತ್ತು ಜನರಿಗೆ ನೀಡುವಂತ ಕೀಳುಮಟ್ಟದ ಸರ್ಕಾರ: ಎಚ್ಡಿಕೆ

| Published : Apr 21 2024, 02:26 AM IST / Updated: Apr 21 2024, 11:47 AM IST

ಜನರ ಹಣವನ್ನು ಕಿತ್ತು ಜನರಿಗೆ ನೀಡುವಂತ ಕೀಳುಮಟ್ಟದ ಸರ್ಕಾರ: ಎಚ್ಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಇರುವಂತ ಸರ್ಕಾರ ಅತ್ಯಂತ ಭ್ರಷ್ಟಾಚಾರದಿಂದ ಕೂಡಿದಂತ ಸರ್ಕಾರವಾಗಿದ್ದು, ಅಧಿಕಾರಕ್ಕೆ ಬಂದು ವರ್ಷ ಕಳೆದರು ಇವರು ಮಾಡಿದ ಅಭಿವೃದ್ದಿ ಕೆಲಸ ಎಂದರೆ ಪ್ರತಿ ನಾಗರೀಕನ ಮೇಲೆ 36 ಸಾವಿರ ಸಾಲದ ಹೊರೆಯನ್ನು ಹೊರಿಸಿದ್ದು

 ಬನ್ನೂರು :  ರಾಜ್ಯದ ಕಾಂಗ್ರೆಸ್ ಸರ್ಕಾರ ಪಿಕ್ ಪ್ಯಾಕೆಟ್ ಸರ್ಕಾರವಾಗಿದ್ದು, ಜನರ ಹಣವನ್ನು ಕಿತ್ತು ಜನರಿಗೆ ನೀಡುವಂತ ಕೀಳು ಮಟ್ಟದ ಸರ್ಕಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಎಸ್.ಆರ್.ಪಿ ರಸ್ತೆಯಲ್ಲಿರುವ ಹಾಲಿನ ಡೈರಿ ಮುಂಭಾಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಮತ್ತು ಬಿಜೆಪಿಯ ಬೃಹತ್ ಕಾರ್ಯಕರ್ತ ಮತದಾರ ಸಭೆಯಲ್ಲಿ ಭಾಗವಹಿಸಿ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಎಸ್. ಬಾಲರಾಜ್ ಪರವಾಗಿ ಮತಯಾಚನೆ ಮಾಡಿ ಅವರು ಮಾತನಾಡಿದರು.

ಪ್ರಸ್ತುತ ಇರುವಂತ ಸರ್ಕಾರ ಅತ್ಯಂತ ಭ್ರಷ್ಟಾಚಾರದಿಂದ ಕೂಡಿದಂತ ಸರ್ಕಾರವಾಗಿದ್ದು, ಅಧಿಕಾರಕ್ಕೆ ಬಂದು ವರ್ಷ ಕಳೆದರು ಇವರು ಮಾಡಿದ ಅಭಿವೃದ್ದಿ ಕೆಲಸ ಎಂದರೆ ಪ್ರತಿ ನಾಗರೀಕನ ಮೇಲೆ 36 ಸಾವಿರ ಸಾಲದ ಹೊರೆಯನ್ನು ಹೊರಿಸಿದ್ದು ಎಂದು ಲೇವಡಿ ಮಾಡಿದರು.

ಗ್ಯಾರಂಟಿ ಭಾಗ್ಯದ ಮೇಲೆ ಅಧಿಕಾರ ಹಿಡಿದ ಸರ್ಕಾರ ಜನರಿಗೆ ಪ್ರಸ್ತುತ ನೀಡುತ್ತಿರುವುದು ಕಷ್ಟದ ಸುರಿಮಳೆ ಎಂದರು. ಪ್ರತಿ ಭಾರಿ ಅಧಿಕಾರಕ್ಕೆ ಬಂದಾಗಲೆಲ್ಲ ಬರಗಾಲದ ಛಾಯೆ ರಾಜ್ಯವನ್ನು ಆವರಿಸುತ್ತದೆ ಎಂದರೆ ನೀವೆ ತಿಳಯಬೇಕು ಎಂದು ಟಾಂಗ್ ನೀಡಿದರು.

ಗ್ಯಾರಂಟಿ ಭಾಗ್ಯದಿಂದ 2 ಲಕ್ಷಕ್ಕೆ ಏರಿದ ಟಿ.ಸಿ

ರೈತರಿಗೆ ನನ್ನ ಅವಧಿಯಲ್ಲಿ ಟಿ.ಸಿಯ ಬೆಲೆ 5 ರಿಂದ 25 ಸಾವಿರದಲ್ಲಿ ಆಗುತ್ತಿತ್ತು, ಆದರೆ ಅದೇ ಟಿ.ಸಿ ಈ ಗ್ಯಾರಂಟಿ ಭಾಗ್ಯದಿಂದ 2 ಲಕ್ಷಕ್ಕೆ ಏರಿದೆ ಎಂದು ಹೇಳಿದರು.

ಚಂಬನ್ನು ಖಾಲಿ ಮಾಜಿ ನಿಮ್ಮ ಮುಂದೆ ಇಟ್ಟಿದ್ದೀವಿ ನೋಡಿ

ವೃತ್ತ ಪತ್ರಿಕೆಯಲ್ಲಿ ಖಾಲಿ ಚಂಬಿನ ಚಿತ್ರ ನೀಡಿ, ಜಾಹಿರಾತು ನೀಡುತ್ತಿರುವ ಅರ್ಥ, ತುಂಬಿರುವ ಚಂಬನ್ನು ಖಾಲಿ ಮಾಡಿ ನಿಮ್ಮ ಮುಂದೆ ಇಟ್ಟಿದ್ದೀವಿ ನೋಡಿ ಎಂದು ಎಂದು ಹಾಸ್ಯ ಮಾಡಿದರು. ಇನ್ನಾದರು ಜನರು ಅರಿತು ಉತ್ತಮ ರೀತಿಯಲ್ಲಿ ಸರ್ಕಾರದ ಭಾಗ್ಯದ ದುರುದ್ದೇಶವನ್ನು ತಿಳಿದು, ಕೇಂದ್ರದಲ್ಲಿ ಮೋದಿ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಎನ್.ಡಿಎ ಮೈತ್ರಿಕೂಟದ ಅಭ್ಯರ್ಥಿ ಎಸ್. ಬಾಲರಾಜು ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿ, ನಾನು ಪಕ್ಕದ ಮಂಡ್ಯ ಕ್ಷೇತ್ರದಲ್ಲಿ ಪ್ರತಿನಿಧಿಸುತ್ತಿದ್ದು, ನಿಮ್ಮವರಿಗೆಲ್ಲ ಸಹಕಾರ ನೀಡುವಂತೆ ತಿಳಿಸಿ ಎಂದು ಮನವಿ ಮಾಡಿದರು.

ಮಾಜಿ ಶಾಸಕರಾದ ಎಂ. ಅಶ್ವಿನ್ ಕುಮಾರ್, ಕೆ. ಅನ್ನದಾನಿ ಮತ್ತು ಬಿಜೆಪಿ ಮುಖಂಡ ಡಾ. ರೇವಣ್ಣ ಮಾತನಾಡಿದರು.

ಗ್ರಾಪಂ ಸದಸ್ಯ ರಾಮಸ್ವಾಮಿ, ಮಾಜಿ ಶಾಸಕ ಸಿ. ರಮೇಶ್, ನರಸಿಂಹಮೂರ್ತಿ, ಪಣೀಶ್, ಶಿವಕುಮಾರ, ಕೃಷ್ಣೇಗೌಡ, ಸಿದ್ದಪ್ಪ, ಚಿನ್ನಸ್ವಾಮಿ, ಹೇಮಾವತಿ, ರಾಮಚಂದ್ರು ಇದ್ದರು.