ಸಾರಾಂಶ
ಈ ಡೇರಿ ಸಂಘವು ಹಾಲು ಉತ್ಪಾದನೆಯಲ್ಲಿ ತಾಲೂಕಿಗೆ ಮೊದಲ ಸ್ಥಾನದಲ್ಲಿದೆ. ಗ್ರಾಮದಲ್ಲಿ ಹಲವು ಮಂದಿ ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸದೃಢರಾಗಿದ್ದಾರೆ. ಮುಂದಿನ ದಿನಗಳಲ್ಲಿ ಡಿಂಕಾ ಡೇರಿಯನ್ನು ಜಿಲ್ಲೆಯಲ್ಲಿಯೇ ಮೊದಲ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಹಾಲು ಉತ್ಪಾದಕರ ಸಹಕಾರ ಸಂಘಗಳು ದೇವಸ್ಥಾನಗಳಿದ್ದಂತೆ. ಇಲ್ಲಿ ರಾಜಕೀಯ ಮಾಡದೆ ಪ್ರತಿಯೊಬ್ಬರೂ ಡೇರಿ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.ತಾಲೂಕಿನ ಡಿಂಕಾ ಗ್ರಾಮದ ಡೇರಿ ಸಂಘದಲ್ಲಿ ವತಿಯಿಂದ ನಡೆದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮನ್ಮುಲ್
ಚುನಾವಣೆಯಲ್ಲಿ ಕ್ಷೇತ್ರದ ಸಂಘದ ಮತದಾರರು ನನಗೆ ಹೆಚ್ಚಿನ ಸಂಖ್ಯೆಯಲ್ಲಿ ಮತಕೊಟ್ಟು ಗೆಲ್ಲಿಸುವ ಮೂಲಕ ಜವಾಬ್ದಾರಿ ಹೆಚ್ಚಿಸಿದ್ದಾರೆ. ನನ್ನ ಅಧಿಕಾರದ ಅವಧಿಯಲ್ಲಿ ಡೇರಿಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.ಈ ಡೇರಿ ಸಂಘವು ಹಾಲು ಉತ್ಪಾದನೆಯಲ್ಲಿ ತಾಲೂಕಿಗೆ ಮೊದಲ ಸ್ಥಾನದಲ್ಲಿದೆ. ಗ್ರಾಮದಲ್ಲಿ ಹಲವು ಮಂದಿ ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸದೃಢರಾಗಿದ್ದಾರೆ. ಮುಂದಿನ ದಿನಗಳಲ್ಲಿ ಡಿಂಕಾ ಡೇರಿಯನ್ನು ಜಿಲ್ಲೆಯಲ್ಲಿಯೇ ಮೊದಲ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಒಕ್ಕೂಟದ ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಯ ಎಲ್ಲಾ ಶಾಸಕರು, ಸಚಿವರ ಜತೆಗೂಡಿ ಕೇಂದ್ರ ಸಚಿವರನ್ನು ಭೇಟಿಮಾಡಿ ಒಕ್ಕೂಟದಲ್ಲಿ ತಯಾರಾಗುವ ಸಿಹಿತಿಂಡಿಗಳನ್ನು ದೇಶಾದ್ಯಂತ ಮಾರಾಟ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.ತಾಪಂ ಮಾಜಿ ಸದಸ್ಯ ಸಿ.ಎಸ್.ಗೋಪಾಲಗೌಡ ಮಾತನಾಡಿ, ಹೈನುಗಾರಿಕೆಯೂ ಕೃಷಿಯ ಒಂದು ಭಾಗ. ಸಹಕಾರ ಸಂಘದಲ್ಲಿ ಯಾವುದೇ ರಾಜಕೀಯ ಮಾಡದೆ ಡೇರಿಗಳ ಅಭಿವೃದ್ಧಿಗೆ ಶ್ರಮಿಸಬೇಕು. ಒಕ್ಕೂಟದಿಂದ ಸೌಲಭ್ಯವನ್ನು ಡೇರಿಗೆ ದೊರಕಿಸಿಕೊಡಲಿದ್ದಾರೆ ಎಂದರು.
ಡೇರಿ ಅಧ್ಯಕ್ಷ ಗಿರೀಶ್, ಉಪಾಧ್ಯಕ್ಷ ಕೃಷ್ಣಶೆಟ್ಟಿ, ನಿರ್ದೇಶಕರಾದ ಡಿ.ವಿ.ಶಿವಣ್ಣ, ಡಿ.ಈ.ಕಲಿ ಗಣೇಶ್, ಮಹೇಶ್, ಮಹದೇವಪ್ಪ, ಶಿವಲಿಂಗಪ್ಪ, ಡಿ.ಎಂ.ಇಂದ್ರೇಶ್, ಶ್ರೀನಿವಾಸಯ್ಯ, ಡಿ.ಎಂ.ಪುಟ್ಟೇಗೌಡ, ಪ್ರೇಮಮ್ಮ, ರಮಾದೇವಿ, ಸೌಮ್ಯ, ಕಾರ್ಯದರ್ಶಿ ಡಿ.ಎಂ.ಶಿವಪ್ಪ, ಮುಖಂಡರಾದ ಪಿಎಲ್ ಡಿ ಮಾಜಿ ಅಧ್ಯಕ್ಷ ಡಿಂಕಾ ಸೋಮಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಪುಟ್ಟರಾಜು, ಜಗದೀಶ್, ಡಿ.ಸಿ.ರುದ್ರಶೇಖರ್, ಲೋಕೇಶ್ ಹಾಗೂ ಡೇರಿ ಸಿಬ್ಬಂದಿ ಇದ್ದರು.