ಸಾರಾಂಶ
ರಾಜ್ಯದಲ್ಲಿರುವ ೧೪ ಒಕ್ಕೂಟಗಳಲ್ಲಿ ೭೦ ಲಕ್ಷ ಲೀಟರ್ ಹಾಲಿನಿಂದ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ದ್ವಿಗುಣಗೊಂಡಿರುವ ನಿಟ್ಟಿನಲ್ಲಿ ರಾಜ್ಯದ್ಯಂತ ಹಾಲು ಉತ್ಪಾದಕ ರೈತರಿಗೆ ಧನ್ಯವಾದ ಸಲ್ಲಿಸಲು ಕ್ಷೀರ ಸಮೃದ್ಧಿ ಉತ್ಸವ ಹಮ್ಮಿಕೊಳ್ಳಲಾಗಿದೆ
ಕನ್ನಡಪ್ರಭ ವಾರ್ತೆ ಮಾಲೂರು
ತಾಲೂಕಿನಲ್ಲಿರುವ ೧೭೭ ಹಾಲು ಉತ್ಪಾದಕ ಸಹಕಾರ ಸಂಘಗಳಿಂದ ಇದೆ ಮೊದಲ ಬಾರಿಗೆ ಹಾಲಿನ ಸಂಗ್ರಹಣೆ ೧,೪೧ ಲಕ್ಷ ಲೀಟರ್‌ನಷ್ಟು ಹಾಲು ಸಂಗ್ರಹವಾಗುತ್ತಿದ್ದು ,ಹಾಲು ಸಂಗ್ರಹ ದ್ವಿಗುಣ ಗೊಂಡಿರುವ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ಕ್ಷೀರ ಸಮೃದ್ಧಿ ಉತ್ಸವ ಕಾರ್ಯಕ್ರಮದ ಮೂಲಕ ಧನ್ಯವಾದಗಳು ಸಲ್ಲಿಸಲಾಗುತ್ತದೆ ಎಂದು ಶಾಸಕ ಹಾಗೂ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದರು. ಪಟ್ಟಣದ ಶಿಬಿರ ಕಚೇರಿಯ ಆವರಣದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಉಪಕಚೇರಿ ಮಾಲೂರು ವತಿಯಿಂದ ಹಮ್ಮಿಕೊಂಡಿದ್ದ ಕ್ಷೀರ ಸಮೃದ್ಧಿ ಉತ್ಸವ ೨೦೨೪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿ ಒಂದು ಕೋಟಿ ಲೀ. ಹಾಲು
ರಾಜ್ಯದಲ್ಲಿರುವ ೧೪ ಒಕ್ಕೂಟಗಳಲ್ಲಿ ೭೦ ಲಕ್ಷ ಲೀಟರ್ ಹಾಲಿನಿಂದ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ದ್ವಿಗುಣಗೊಂಡಿರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದಂತೆ ರಾಜ್ಯದ್ಯಂತ ಹಾಲು ಉತ್ಪಾದಕ ರೈತರಿಗೆ ಧನ್ಯವಾದಗಳು ಸಲ್ಲಿಸುವ ನಿಟ್ಟಿನಲ್ಲಿ ಕ್ಷೀರ ಸಮೃದ್ಧಿ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಪ್ರಸ್ತುತ ಒಕ್ಕೂಟವು ೭೫ ಕೋಟಿ ರು.ಗಳ ಲಾಭದಲ್ಲಿದೆ. ಡೇರಿ ಉತ್ಪನ್ನಗಳಾದ ಐಸ್ ಕ್ರೀಮ್ ಪ್ಲಾಂಟ್ ಸಹ ಚಿಂತಾಮಣಿಯ ಬಳಿ ನಿರ್ಮಿಸಲಾಗುತ್ತಿದೆ. ಆಡಳಿತ ಮಂಡಳಿಯ ನಿರ್ದೇಶಕರ ಸಹಕಾರದಿಂದ ಒಂದು ಲೀಟರ್ ಹಾಲಿಗೆ ಒಂದು ರೂ ಅಭಿವೃದ್ಧಿ ಹಣ ತೆಗೆದು ಬ್ಯಾಂಕಿನಲ್ಲಿ ಠೇವಣಿ ಇರಿಸಲಾಗಿತ್ತು. ಅದು ಪ್ರಸ್ತುತ ೨೫೦ ಕೋಟಿ ರು.ಗಳ ಠೇವಣೆಯು ಬ್ಯಾಂಕಿನಲ್ಲಿದೆ ಪ್ರತಿನಿತ್ಯ ೧೨.೫೦ ಲಕ್ಷ ಹಾಗೂ ೩.೫೦ ಕೋಟಿ ಉಳಿತಾಯ ಖಾತೆಯಲ್ಲಿ ಇದೆ ಎಂದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆಎನ್ ಗೋಪಾಲಮೂರ್ತಿ, ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ಮಹಿಳಾ ನಿರ್ದೇಶಕಿ ಕಾಂತಮ್ಮ ಸೋಮಣ್ಣ, ನಾಮಿನಿ ನಿರ್ದೇಶಕ ಯುನ ಶರೀಫ್, ಸಹಕಾರಿ ಒಕ್ಕೂಟದ ನಿರ್ದೇಶಕ ಗೋವರ್ಧನ್ ರೆಡ್ಡಿ, ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಗಂಗಾ ತುಳಸಿ ರಾಮಯ್ಯ, ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಡಾ. ಎಸಿ ಶ್ರೀನಿವಾಸ ಗೌಡ, ವ್ಯವಸ್ಥಾಪಕ ಡಾ.ಚೇತನ್, ಉಪ ವ್ಯವಸ್ಥಾಪಕ ಡಾ.ಲೋಹಿತ್ ಎಂ ಬಿ, ಮಾರುಕಟ್ಟೆ ವ್ಯವಸ್ಥಾಪಕರಾದ ನಾಗೇಶ್, ಕೇಂದ್ರ ಕಚೇರಿಯ ಉಪ ವಿಭಾಗದ ವ್ಯವಸ್ಥಾಪಕ ಡಾ ಮಾಧವ್, ಮುರಳಿ, ಯೋಜನಾ ಪ್ರಾಧಿಕಾರ ಅಧ್ಯಕ್ಷ ನಹಿಮ್ ಉಲ್ಲಾಖಾನ್, ಪುರಸಭಾ ಸದಸ್ಯ ಎ ರಾಜಪ್ಪ, ಕಸಾಪ ಅಧ್ಯಕ್ಷ ಹನುಮಂತಯ್ಯ ಹಾಜರಿದ್ದರು.