ಸಂಡೂರು ಗಣಿಗಾರಿಕೆ, ಎಚ್‌ಡಿಕೆ ಚರ್ಚೆಗೆ ಬರಲಿ: ಹಿರೇಮಠ

| Published : Jul 09 2024, 12:52 AM IST

ಸಂಡೂರು ಗಣಿಗಾರಿಕೆ, ಎಚ್‌ಡಿಕೆ ಚರ್ಚೆಗೆ ಬರಲಿ: ಹಿರೇಮಠ
Share this Article
  • FB
  • TW
  • Linkdin
  • Email

ಸಾರಾಂಶ

ಗಣಿಗಾರಿಕೆ ನಡೆಸಲು ಸಹಿ ಮಾಡಿರುವ ಕುಮಾರಸ್ವಾಮಿ ಅವರ ಜತೆ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ. ನಮ್ಮ ದಾಖಲೆ ಸರಿಯಾಗಿದ್ದರೆ ನಾವು ಎಲ್ಲಿಗೆ ಬೇಕಾದರೂ ಬಂದು ಚರ್ಚೆ ಮಾಡುತ್ತೇವೆ. ಅವರು ಚರ್ಚೆಗೆ ಬಂದ ನಂತರ ಜನರಿಗೆ ಎಲ್ಲ ಗೊತ್ತಾಗಲಿದೆ ಎಂದಿರುವ ಎಸ್‌.ಆರ್‌. ಹಿರೇಮಠ.

ಧಾರವಾಡ:

ಸಂಡೂರಿನಲ್ಲಿ ಗಣಿಗಾರಿಕೆ ಮಾಡಲು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಒಪ್ಪಿಗೆ ನೀಡಿರುವುದಕ್ಕೆ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆ‌ರ್. ಹಿರೇಮಠ ಕಿಡಿಕಾರಿದ್ದಾರೆ.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿಗಾರಿಕೆ ನಡೆಸಲು ಸಹಿ ಮಾಡಿರುವ ಕುಮಾರಸ್ವಾಮಿ ಅವರ ಜತೆ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ. ನಮ್ಮ ದಾಖಲೆ ಸರಿಯಾಗಿದ್ದರೆ ನಾವು ಎಲ್ಲಿಗೆ ಬೇಕಾದರೂ ಬಂದು ಚರ್ಚೆ ಮಾಡುತ್ತೇವೆ. ಅವರು ಚರ್ಚೆಗೆ ಬಂದ ನಂತರ ಜನರಿಗೆ ಎಲ್ಲ ಗೊತ್ತಾಗಲಿದೆ ಎಂದಿದ್ದಾರೆ.ಕುಮಾರಸ್ವಾಮಿ ಅವರ ತಂದೆ ಪ್ರಧಾನಿಮಂತ್ರಿಯಾಗಿ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದವರು. ಈಗ ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಅವರಿಗೆ ಗೊತ್ತಿರದೆ ಇರುವುದು ಏನಿದೆ? ಇವರು ರಾಜ್ಯದ ಗೋಮಾಳ ಜಮೀನನ್ನು ಬಿಟ್ಟು ಕೊಡಬೇಕು ಎಂದು ಪ್ರತಿಪಾದಿಸಿದರು.ನ್ಯಾಯಾಲಯ ಈಗಾಗಲೇ ನಮ್ಮ ಪರವಾಗಿ ಆದೇಶ ನೀಡಿದೆ. ಇದಕ್ಕಾಗಿ ನಾವು ಅಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆ ಕೇಸ್ ಹಾಕಿದ್ದೇವೆ. ಗಣಿಗಾರಿಕೆ ಸಲುವಾಗಿ ಸಂಡೂರಿನ ಅರಣ್ಯ ಪ್ರದೇಶದಲ್ಲಿನ 99 ಸಾವಿರ ಮರಗಳನ್ನು ಕಡಿಯುವ ಬಗ್ಗೆ ಮಾಹಿತಿ ಇದೆ. ಅಷ್ಟು ಮರ ಕಡಿದರೆ ನಿಸರ್ಗ ಸಮತೋಲನ ಹಾಳಾಗಲಿದೆ. ಅಲ್ಲಿ ಮಣ್ಣು ಕೊರಕಲು ಉಂಟಾಗಿದೆ. ಅಲ್ಲದೇ ಅದು ಮನುಕುಲಕ್ಕೆ ದೊಡ್ಡ ಮಾರಕ. ಈಗಲೂ ಇದಕ್ಕೆ ಮರು ಟಿಪ್ಪಣಿ ಮಾಡಿದರೆ ಒಳ್ಳೆಯದು. ನಾನು ಕುಮಾರಸ್ವಾಮಿ ಅವರಿಗೆ ದಾಖಲೆ ಕೊಡುತ್ತೇನೆ ಎಂದರು.